ಪೆಟ್ರೋಲ್‍ಗೆ 42%, ಡಿಸೇಲ್‍ಗೆ 37% ತೆರಿಗೆ ; ಕೇಂದ್ರ ಸರ್ಕಾರಕ್ಕೆ 3.72 ಲಕ್ಷ ಕೋಟಿ ರೂ. ಲಾಭ!

petrol

ಇಂಧನಗಳ(Oil) ಮೇಲಿನ ತೆರಿಗೆಯನ್ನು(Tax) ಇಳಿಸುವಂತೆ ಪ್ರಧಾನಿ(Primeminister) ನರೇಂದ್ರ ಮೋದಿಯವರು(Narendra Modi) ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ದೇಶದಲ್ಲಿ ತೈಲ ಬೆಲೆಗಳಲ್ಲಿ ಏರಿಕೆಯಾಗುತ್ತಿರುವುದರಿಂದ ಹಣದುಬ್ಬರವೂ ಹೆಚ್ಚಾಗುತ್ತಿದೆ. ಹೀಗಾಗಿ ತೈಲ ಬೆಲೆಗಳನ್ನು ಇಳಿಸುವಲ್ಲಿ ಕೇಂದ್ರ(Central) ಮತ್ತು ರಾಜ್ಯ(State) ಸರ್ಕಾರಗಳು ಮೀನಮೇಷ ಎಣಿಸುತ್ತಿವೆ. ಇನ್ನು ರಾಜ್ಯಗಳು ವಿಧಿಸುವ ವ್ಯಾಟ್ ಮತ್ತು ಕೇಂದ್ರ ವಿಧಿಸುವ ಅಬಕಾರಿ ಸುಂಕ ತೆರಿಗೆ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಬಹುದೊಡ್ಡ ಪಾಲನ್ನು ಹೊಂದಿವೆ. ಸದ್ಯ ಕೇಂದ್ರ ಸರ್ಕಾರ 42% ಮತ್ತು ರಾಜ್ಯಗಳು 37%ರಷ್ಟು ತೆರಿಗೆಯನ್ನು ತೈಲಗಳ ಮೇಲೆ ವಿಧಿಸುತ್ತಿವೆ.

ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ ತೀವ್ರವಾಗಿ ಏರಿಕೆ ಕಂಡಿದೆ. 2014ರಲ್ಲಿ ಪೆಟ್ರೋಲ್ ಮೇಲೆ 9.48 ರೂ. ಇದ್ದ ಅಬಕಾರಿ ಸುಂಕ ಸದ್ಯ 27.9 ರೂ. ಏರಿಕೆಯಾಗಿದೆ. ಅದೇ ರೀತಿ ಡಿಸೇಲ್ ಮೇಲಿನ ಅಬಕಾರಿ ಸುಂಕ ಲೀಟರ್‍ಗೆ 3.18 ರೂ. ನಿಂದ 21. 8 ರೂ. ಏರಿಕೆಯಾಗಿದೆ. ಇನ್ನು ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯಿಂದ ಕೇಂದ್ರ ಸರ್ಕಾರ 2019-20ರಲ್ಲಿ 1.78 ಲಕ್ಷ ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಿದ್ದರೆ, 2020-21ರಲ್ಲಿ 3.72 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ಎನ್‍ಡಿಎ ಸರ್ಕಾರ 2104ರಲ್ಲಿ ಆಡಳಿತಕ್ಕೆ ಬಂದ ನಂತರ ತೈಲ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ ಬೆಲೆ ಕುಸಿತದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿ ಲಾಭ ಮಾಡಿಕೊಂಡಿದೆ. ಸದ್ಯ ದೇಶದಲ್ಲಿ ತೈಲ ಬೆಲೆಗಳಲ್ಲಿ ಏರಿಕೆಯಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಾನ ಹೊಣೆಗಾರಿಕೆ ಹೊರಬೇಕಿದೆ. ಇಬ್ಬರೂ ತಮ್ಮ ಪಾಲಿನ ತೆರಿಗೆಯನ್ನು ಇಳಿಸಲು ಒಪ್ಪುತ್ತಿಲ್ಲ. ರಾಜ್ಯಗಳು ಕೇಂದ್ರದತ್ತ ಬೊಟ್ಟು ಮಾಡುತ್ತವೆ. ಅದೇ ರೀತಿ ಕೇಂದ್ರ ರಾಜ್ಯಗಳತ್ತ ಬೊಟ್ಟು ಮಾಡುತ್ತದೆ.

ಒಟ್ಟಾರೆಯಾಗಿ ತೈಲ ಬೆಲೆಗಳನ್ನು ಇಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಬ್ಬರೂ ಕನಿಷ್ಠ ತೆರಿಗೆಯನ್ನಾದರೂ ಕಡಿಮೆ ಮಾಡಬೇಕು. ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‍ಗೆ 106 ಡಾಲರ್ ಇದ್ದು, ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕನಿಷ್ಠ ತೆರಿಗೆ ವಿಧಿಸಿ, ಕಮೀಷನ್ ಶುಲ್ಕ 3%ರಷ್ಟು ಪಾವತಿಸಿದರೆ ಅತ್ಯಂತ ಕಡಿಮೆ ದರದಲ್ಲಿ ತೈಲವನ್ನು ಒದಗಿಸಬಹುದು.

Exit mobile version