ಚಳಿಗಾಲದ ಒಣ ತ್ವಚೆಗೆ ಇಲ್ಲಿದೆ ಸಿಂಪಲ್ ಟಿಪ್ಸ್…

ಚಳಿಗಾಲದಲ್ಲಿ ಚರ್ಮ ಒಣಗುವುದು ಸರ್ವೇ ಸಾಮಾನ್ಯ. ಪ್ರತೀ ದಿನ ಸ್ನಾನಕ್ಕೂ ಮೊದಲು ಚಳಿಗಾಲದಲ್ಲಿ ತಪ್ಪದೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಅರ್ದ ಗಂಟೆ ಬಿಟ್ಟು ಸ್ನಾನ ಮಾಡಬೇಕು. ನಂತರ ಕೈ ಕಾಲಿಗೆಲ್ಲ ಕೋಕೋ ಬಟರ್ ಬಾಡಿಲೋಷನ್ ಅಥವಾ ನಿವ್ಯಾ ಬಾಡಿಲೋಷನನ್ನು ಬಳಸಬಹುದು. ಆಗ ನಿಮ್ಮ ಚರ್ಮ ಮೃದುವಾಗಿ ತೇವಾಂಶದಿಂದ ಕೂಡಿರುವುದು.

ಚಳಿಗಾಲದಲ್ಲಿ ಸಾಕಷ್ಟು ಜನರಿಗೆ ತುಟಿ ಒಡೆಯುವ ಕಾಯಿಲೆ ಇರುತ್ತದೆ ಇದಕ್ಕೆ ನಾವು ಮನೆಯಲ್ಲೇ ಮನೆ ಮದ್ದು ತಯಾರಿಸಬಹುದು ಒಂದು ದೊಡ್ಡ ಕೆಂಪು ಗುಲಾಬಿಯನ್ನು ತಂದು ಅದರ ಎಸಳನ್ನೆಲ್ಲಾ ಬಿಡಿಸಿಕೊಂದು ಚೆನ್ನಾಗಿ ತೊಳೆದು ಅದರ ರಸವನ್ನು ತೆಗೆದುಕೊಂಡು ಬಳಿಕ ಆ ರಸಕ್ಕೆ ಅರ್ದ ಚಮಚ ತುಪ್ಪ ಹಾಗೂ ಅರ್ದ ಚಮಚ ವ್ಯಾಸ್ಲಿನ್ ಬೆರೆಸಿ ಬಿಸಿ ಮಾಡಿಕೊಂಡು ಫ್ರಿಜ್ಜಲ್ಲಿಟ್ಟುಕೊಂಡು ರಾತ್ರಿ ಮಲಗುವಾಗ ಪ್ರತೀ ದಿನ ಹಚ್ಚಿಕೊಂಡು ಮಲಗಿ. ಬೆಳಗ್ಗೆ ನೋಡಿ  ನಿಮ್ಮ ತುಟಿಗಳು ಸುಂದರವಾಗಿ ಕಾಣುವುದು.

ಹರಳೆಣ್ಣೆಯನ್ನು ರಾತ್ರಿ ಮಲಗುವಾಗ ಪ್ರತಿ ದಿನ ತುಟಿಗೆ ಹಚ್ಚಿಕೊಂಡು ಮಲಗಿದ್ರೂ ತುಟಿ ಒಡೆಯುವುದನ್ನು ತಡೆಗಟ್ಟಬಹುದು, ಕಾಲಿನಲ್ಲಿನ ಒಡೆತದ ಸಮಸ್ಯೆಗೂ ಈ ಎಣ್ಣೆಯನ್ನು ಹಚ್ಚಿಕೊಂಡು ಕಾಲಿಗೆ ಶೂ ಹಾಕಿ ಮಲಗಬೇಕು ಹೀಗೆ ಮಾಡುವುರಿಂದ ಕಾಲು ಒಡೆಯುವುದು ನಿಲ್ಲುವುದು.

Exit mobile version