ಮೈಸೂರು, ಮಾ. 13: ಅಭಿಮಾನಿ ತಾನು ಖರೀದಿಸಿದ ಹೊಸ ಕಾರಿನ ಸನ್‌ಲೈಟ್ ಪ್ರೊಟೆಕ್ಟರ್ ಮೇಲೆ ನಟ ದರ್ಶನ್ ಅವರಿಂದ ಆಟೋಗ್ರಾಫ್ ಹಾಕಿಸಿಕೊಂಡು ಖುಷಿಪಟ್ಟರು.
ಮೈಸೂರಿನ ನಿವಾಸಿ ತ್ಯಾಗರಾಜ್ ಈಚೆಗಷ್ಟೇ ಇನ್ನೋವಾ ಕ್ರಿಸ್ಟ ಕಾರನ್ನು ಖರೀದಿಸಿದ್ದರು. ದರ್ಶನ್ ಅವರಿಂದ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದರು. ಅಂತೆಯೇ ನಟ ದರ್ಶನ್ ಮೈಸೂರಿಗೆ ಆಗಮಿಸಿದ್ದಾಗ ಅಭಿಮಾನಿ ಕಾರಿಗೆ ಆಟೋಗ್ರಾಫ್ ಹಾಕಿ ಅಭಿಮಾನಿ ಆಸೆ ಈಡೇರಿಸಿದ್ದಾರೆ.

ತಮ್ಮ ಆಟೋಗ್ರಾಫ್‌ನೊಂದಿಗೆ ʻDRIVE SAFE ʼ ಎಂದು ದರ್ಶನ್ ಬರೆದಿದ್ದಾರೆ.