ಟ್ಯಾಕ್ಸಿಗಳ ದರ ಬದಲಾವಣೆ; ಎಷ್ಟೆಷ್ಟು ಬಾಡಿಗೆ..?

ಬೆಂಗಳೂರು, ಫೆ. 2: ಇದೀಗ  ಟ್ಯಾಕ್ಸಿಗಳ ವಿವಿಧ ದರಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಟ್ಯಾಕ್ಸಿಗಳ ಲಗೇಜ್, ಕಾಯುವಿಕೆ ಹಾಗೂ ಇನ್ನಿತರೆ ದರಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರ ಬೇಡಿಕೆಗೆ ಸ್ಪಂದಿಸಿದ್ದು, ಕಳೆದ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಹವಾನಿಯಂತ್ರಣ ರಹಿತ ಟ್ಯಾಕ್ಸಿ, ಎಸಿ ಟ್ಯಾಕ್ಸಿ, ಕಾಯುವಿಕೆ ದರ, ಲಗೇಜ್ ದರ, ರಾತ್ರಿ ದರದ ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.

ಕಳೆದ ರಾತ್ರಿಯಿಂದಲೇ ಈ ಪರಿಷ್ಕರಣೆಯ ಆದೇಶ ಜಾರಿಯಾಗಿದೆ. ಹವಾನಿಯಂತ್ರಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ.ಮೀವರೆಗೆ 100 ರೂ. ಮತ್ತು ನಂತರ ಪ್ರತಿ ಕಿ.ಮೀಗೆ 24 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಹವಾನಿಯಂತ್ರಣ ರಹಿತ ಟ್ಯಾಕ್ಸಿಗಳಿಗೆ ಕನಿಷ್ಠ 4 ಕಿ.ಮೀ ವರೆಗೆ 75 ರೂ. ನಂತರ ಪ್ರತಿ ಕಿ.ಮೀ 18 ರೂ. ನಿಗದಿಪಡಿಸಲಾಗಿದೆ. ತೈಲ ದರ ಹೆಚ್ಚಳವಾದ ಕಾರಣದಿಂದ ದರ ಪರಿಷ್ಕರಣೆ ಮಾಡುವಂತೆ ಚಾಲಕರು ಪ್ರತಿಭಟನೆ ನಡೆಸಿದ್ಧಾರೆ. ಹೀಗಾಗಿ, ತತ್‍ಕ್ಷಣದಿಂದ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶಿಸಿದೆ.

ಯಾವೆಲ್ಲಾ ಟ್ಯಾಕ್ಸಿಗಳಿಗೆ ಎಷ್ಟೆಷ್ಟು ದರ ಪರಿಷ್ಕರಣೆ:

  1. ಹವಾನಿಯಂತ್ರಣ ಟ್ಯಾಕ್ಸಿ – ನಿಗದಿತ ರೂ 75.00 ( ಕನಿಷ್ಠ 4 ಕಿಮೀ. ವರೆಗೆ) ಪ್ರತಿ ಕಿಮೀ ರೂ.18.00
  2.  ಹವಾನಿಯಂತ್ರಿತ ಟ್ಯಾಕ್ಸಿ- ನಿಗದಿತ ದರ ( ರೂ 100. (ಕನಿಷ್ಠ 4. ಕಿಮೀ ವರೆಗೆ) ಪ್ರತಿ ಕಿ.ಮೀಗೆ ರೂ 24
  3. ಕಾಯುವಿಕೆ ದರಗಳು- ಮೊದಲ 5 ನಿಮಿಷಗಳ ವರೆಗೆ ಉಚಿತ ನಂತರದ ಪ್ರತಿ ನಿಮಿಷಕ್ಕೆ ರೂ. 1
  4. ಲಗೇಜು ದರಗಳು- ಮೊದಲಿನ 120 ಕೆ.ಜಿ ವರೆಗೆ ಉಚಿತ ( ಸೂಟ್ ಕೇಸ್ ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು ನಂತರದ ಪ್ರತಿ 20 ಕಿ ಗ್ರಾಂ ಗೆ ಅಥವಾ ಅದರ ಭಾಗಕ್ಕೆ ರೂ 7)
  5. ರಾತ್ರಿ ದರಗಳು- ರಾತ್ರಿ 12.00 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10 ರಷ್ಟು ಹೆಚ್ಚುವರಿ ದರ ಹಾಕಲಾಗಿದೆ. ರಾತ್ರಿ ಸಂಚಾರ ಮಾಡುವ ಟ್ಯಾಕ್ಸಿ ಪ್ರಯಾಣಿಕರಿಗೆ ಶೇ.10ರಷ್ಟು ಹೆಚ್ಚುವರಿ ದರ ನಿಗದಿ ಮಾಡಲಾಗಿದೆ.
Exit mobile version