ಚರ್ಮದ ಆರೋಗ್ಯಕ್ಕೊಂದು ಟಿಪ್ಸ್

ದಿನನಿತ್ಯದ ಅಡುಗೆಗೆ ಎಣ್ಣೆ ಬಹುಮುಖ್ಯವಾಗಿ ಬೇಕಾಗುತ್ತದೆ. ಈ ಎಣ್ಣೆಯಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಪೌಷ್ಠಿಕಾಂಶಗಳು ಲಭಿಸುತ್ತದೆ ಎನ್ನುವುದು ನಮಗೆ ತಿಳಿದೇ ಇದೆ. ಹಾಗೆಯೇ ಚರ್ಮದ ರಕ್ಷಣೆಗೆ ಎಣ್ಣೆಯಿಂದ ಅನೇಕ ಪ್ರಯೋಜನಗಳಿವೆ. ಚರ್ಮದ ಸುಕ್ಕುಗಟ್ಟುವಿಕೆ, ಕಾಲಿನ ಚರ್ಮದ ಒಡೆಯುವಿಕೆ, ಚಳಿಗಾಲದಲ್ಲಿ ಚರ್ಮದ ತುರಿಕೆ ಹಾಗೂ ಒಣಚರ್ಮ ಇದ್ದವರು ಬಾದಾಮಿ ಎಣ್ಣೆ ಹಾಗೂ ಹರಳೆಣ್ಣೆ ಎರಡನ್ನೂ ಮಿಕ್ಸ್ ಮಾಡಿ ಪ್ರತೀ ದಿನ ದೇಹಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಚರ್ಮವು ಆರೋಗ್ಯವಾಗಿ ಇರುತ್ತದೆ.

ಇದೇ ರೀತಿ ತೆಂಗಿನೆಣ್ಣೆಗೆ ಸ್ವಲ್ಪ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ದೇಹಕ್ಕೆ ಹಚ್ಚುವುದರಿಂದ ಚರ್ಮ ಹೊಳಪಾಗುವುದು. ಇದನ್ನು ಪ್ರತೀ ದಿನ ಅನುಸರಿಸುತ್ತಿದ್ದರೆ ಚರ್ಮ ಆರೋಗ್ಯವಾಗಿರುವುದರಲ್ಲಿ ಸಂಶಯವಿಲ್ಲ. ಏನೂ ಸಾಧ್ಯವಾಗದಿದ್ದರೇ ಬರೀ ತೆಂಗಿನೆಣ್ಣೆಯನ್ನೇ ನಿತ್ಯ ಸ್ನಾನದ ವೇಳೆ ಹಚ್ಚುವುದರಿಂದ ಕೂಡಾ ಚರ್ಮವು ಚೆನ್ನಾಗಿರುತ್ತದೆ. ಆಲಿವ್ ಎಣ್ಣೆಯನ್ನೂ ಹಾಗೂ ಎಳ್ಳೆಣ್ಣೆಯನ್ನು ಕೂಡಾ  ಮೈಗೆ ಹಚ್ಚುವುದರಿಂದ ಚರ್ಮದ ರಕ್ಷಣೆಗೆ ಅನೇಕ ಲಾಭಗಳು ಸಿಗುತ್ತದೆ. ನಿತ್ಯ ಸ್ನಾನದ ವೇಳೆ ಎಣ್ಣೆ ಹಚ್ಚುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Exit mobile version