ಚರ್ಮದ ಕಾಂತಿಗೆ ಪ್ರತಿನಿತ್ಯ ಇದನ್ನು ಬಳಸಿ…

ಆರೋಗ್ಯದ ವಿಚಾರಕ್ಕೆ ಬಂದರೆ ಮೊಳಕೆ ಕಾಳುಗಳು ಮಹತ್ತರ ಪಾತ್ರ ವಹಿಸುತ್ತವೆ. ಹೆಸರು, ಹುರುಳಿ, ಕಡ್ಲೆ ಮುಂತಾದ ಧಾನ್ಯಗಳನ್ನು ನೀರಿನಲ್ಲಿ ನೆನೆಸಿ ನೆನೆಸಿದ ಬಳಿಕ ಒಂದು ಶುದ್ದವಾದ ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಹಾಗೆ ಮಾಡಿದಲ್ಲಿ ಮರುದಿನಕ್ಕೆ ಚೆನ್ನಾಗಿ ಮೊಳಕೆ ಬಂದಿರುತ್ತದೆ. ಈ ಮೊಳಕೆ ಕಾಳುಗಳಲ್ಲಿ ಯಥೇಷ್ಟವಾದ ಕಬ್ಬಿಣ  ಸತ್ವ ಇದೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.  ಇವು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.

ಮೊಳಕೆ ಬರಿಸಿದ ಹೆಸರು ಕಾಳು ಹಸಿಯಾಗಿಯೇ ತಿನ್ನಬಹುದು, ಅಥವಾ ಬೆಲ್ಲ ಹಾಕಿ ಜ್ಯೂಸ್ ಮಾಡಿ  ಪ್ರತೀ ದಿನ ಕುಡಿಯುತ್ತಾ ಬಂದರೆ ದೇಹ ತಂಪಾಗುತ್ತದೆ. ಮೊಳಕೆ ಕಾಳುಗಳ ಸೇವನೆ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಒಣಗಿದಂತಿರುವ ಚರ್ಮ ದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸತತವಾಗಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಚರ್ಮ ಕಳೆ-ಕಳೆಯಾಗಿ ಬದಲಾವಣೆಯಾಗುವುದನ್ನು ನೀವು ನೋಡಬಹುದು. ದೇಹದಲ್ಲಿ ಪೋಷಕಾಂಶಗಳು ಹೆಚ್ಚಾಗುತ್ತವೆ.

ಕಣ್ಣಿನ ಆರೋಗ್ಯಕ್ಕೂ ಈ ಮೊಳಕೆ ಕಾಳುಗಳು ಉತ್ತಮ. ಮೊಳಕೆ ಕಾಳುಗಳನ್ನು ಬೇಯಿಸಿಯೂ ತಿನ್ನಬಹುದು ಹಸಿಯಾಗಿಯೂ ತಿನ್ನಬಹುದು. ಜ್ಯೂಸ್ ಮಾಡಿಯೂ ಕುಡಿಯಬಹುದು. ಪಲ್ಯ ಹಾಗೂ ಸಾಂಬಾರ್ ಮಾಡಿಯೂ ಉಪಯೋಗಿಸಬಹುದು. ಆರೋಗ್ಯಯುತವಾದ ಜೀವ ಸತ್ವಗಳು ಮೊಳಕೆ ಕಾಳುಗಳಲ್ಲಿ ಯಥೇಷ್ಟವಾಗಿ ಸಿಗುವುದು.

Exit mobile version