ಕ್ರೀಡಾ ಪಾರ್ಕ್‌ಗೆ ಲೋಕಮಾನ್ಯ ತಿಲಕರ ಹೆಸರು ನಾಮಕರಣ: ನಟ ಚೇತನ್ ಟೀಕೆ

ಬೆಂಗಳೂರು, ಫೆ. 09: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಕ್ರೀಡಾ ಪಾರ್ಕ್‌ಗೆ ಲೋಕಮಾನ್ಯ ತಿಲಕರ ಹೆಸರು ನಾಮಕರಣ ಮಾಡಿರುವುದಕ್ಕೆ ನಟ ಚೇತನ್ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿನ್ನೆ, ಕರ್ನಾಟಕ ಕಾಂಗ್ರೆಸ್ ನಾಯಕರು ಬೆಂಗಳೂರಿನ ಗಾಂಧಿ ನಗರದಲ್ಲಿ ಸುಂದರವಾದ ಉದ್ಯಾನವನವನ್ನು ಉದ್ಘಾಟಿಸಿದರು; ಈ ಉದ್ಯಾನವನಕ್ಕೆ ಬಾಲಗಂಗಾಧರ ತಿಲಕ್ ಹೆಸರಿಡಲಾಗಿದೆ. ತಿಲಕ್ ಹಿಂಜರಿತದ ಜಾತಿವಾದಿ ಮತ್ತು ಸೆಕ್ಸಿಸ್ಟ್ ಆಗಿದ್ದರು. ಅವರು ಮಹಿಳೆಯರಿಗೆ / ಶೂದ್ರರಿಗೆ ಶಿಕ್ಷಣವನ್ನು ವಿರೋಧಿಸಿದರು ಮತ್ತು ಅಸ್ಪೃಶ್ಯತೆಯನ್ನು ಬೆಂಬಲಿಸಿದರು.

ಸಾವರ್ಕರ್ ಹೆಸರಿನ ಫ್ಲೈಓವರ್ ಅನ್ನು ಕರ್ನಾಟಕ ಕಾಂಗ್ರೆಸ್ ವಿರೋಧಿಸಿದಾಗ, ತಿಲಕ್ ಹೆಸರಿನ ಉದ್ಯಾನವನವನ್ನು ಏಕೆ ಸ್ವೀಕರಿಸುತ್ತದೆ? ಬೂಟಾಟಿಕೆ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣಗೊಳಿಸಿದರು. ಇದೇ ವೇಳೆ ಲೋಕಮಾನ್ಯ ತಿಲಕರ ಕ್ರೀಡಾ ಪಾರ್ಕ್ ಅನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು.

Exit mobile version