ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಕೋಟಿಗಟ್ಟಲೆ ದುಡ್ಡು ಮಾಡಿ, ಇತರರಿಗೆ ಆದೇಶಿಸುವುದು ವಿಪರ್ಯಾಸ : ನಟ ಚೇತನ್

Bengaluru : ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಕೋಟಿಗಟ್ಟಲೆ ದುಡ್ಡು ಮಾಡಿ, ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ ಎಂದು ನಟ ಚೇತನ್‌ (Chetan Slams Rishab Shetty) ಪರೋಕ್ಷವಾಗಿ ರಿಷಬ್‌ ಶೆಟ್ಟಿಗೆ ಟಾಂಗ್‌ ನೀಡಿದ್ದಾರೆ.

ದೈವಾರಾಧನೆ ರೀಲ್ಸ್‌ (Reels) ಮಾಡೋದು ಮತ್ತು ಕಾಂತಾರ (Kantara) ಪಾತ್ರವನ್ನು ಅನುಕರಣೆ ಮಾಡೋದು ಸರಿಯಲ್ಲ ಎಂದು ನಟ ರಿಷಬ್‌ ಶೆಟ್ಟಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೇತನ್‌ ಅವರು, 

ಕೋಟಿಗಟ್ಟಲೆ ದುಡ್ಡು ಮತ್ತು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ (Chetan Slams Rishab Shetty) ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು,

ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ.

ನೀವು ಅದನ್ನು ತೋರಿಸಬಹುದಾದರೆ, ಇತರರು ಕೂಡ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ ಎಂದು ನಟ ಚೇತನ್‌ ಪರೋಕ್ಷವಾಗಿ ರಿಷಬ್‌ ಶೆಟ್ಟಿಗೆ ಟಾಂಗ್‌ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/my-father-will-become-cm/

ಇದಕ್ಕೂ ಮುನ್ನ ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ.

ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, 

ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ,

ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ಹೇಳಿದ್ದರು. ‘ಕಾಂತಾರ’ ಚಿತ್ರವು ಚೆನ್ನಾಗಿದೆ.

ನಮ್ಮ ಪಂಬದ, ನಲಿಕೆ, ಪರವ ಅರೆ-ಅಲೆಮಾರಿಗಳುವ ಆಚರಿಸುವ ಭೂತ ಕೊಲವನ್ನು ಉತ್ತಮವಾಗಿ ತೋರಿಸಿದ್ದರೆ, 

ಈ ಸಮುದಾಯಗಳು ಬೇಟೆಗಾರರು ಮತ್ತು ಅಸ್ಪೃಶ್ಯರು ಅಂತ ಸುಳ್ಳು ಪ್ರಕ್ಷೇಪಗಳನ್ನು ಸೃಜನಾತ್ಮಕ ಸ್ವಾತಂತ್ರ್ಯ ಎಂದು ಮನ್ನಿಸಬಹುದು.

https://youtu.be/LNyZGCf7aoc ಮಣ್ಣಿಲ್ಲದೆಯೇ ಕೃಷಿ!

ಸಿನಿಮಾ ತಯಾರಕರು ನಮ್ಮ ಬುಡಕಟ್ಟು ಅಲೆಮಾರಿ ಜನಾಂಗದವರು ಪ್ರಕೃತಿಯ ಜೊತೆ ಹೊಂದಿರುವ ಸಂಬಂಧವನ್ನು ಇನ್ನೂ ಹೆಚ್ಚು ಉತ್ತಮವಾಗಿ ಅನ್ವೇಷಿಸಿದ್ದರೆ,

ಚಲನಚಿತ್ರದ ಗುಣಮಟ್ಟ ಮತ್ತು ಇಮೋಶನಲ್ ಕ್ವೋಶೆಂಟ್ ಇನ್ನೂ ಹೆಚ್ಚುತ್ತಿತ್ತು ಎಂದು ಹೇಳಿದ್ದರು.

Exit mobile version