ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬೆಳೆಯಲಿ: ಅಲ್ವಾ? ನಾರಾಯಣ ಮೂರ್ತಿಯವರೇ? – ನಟ ಚೇತನ್ ಪ್ರಶ್ನೆ

Bengaluru: ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ಇದರಿಂದ ನಿಮ್ಮ(Chethan against Narayana Murthy) (ನಾರಾಯಣ ಮೂರ್ತಿಯವರ) ಬ್ಯಾಂಕ್ ಬ್ಯಾಲೆನ್ಸ್ (Bank Balance)

ಇನ್ನಷ್ಟು ಬೆಳೆಯಲಿ, ಅಲ್ವಾ? ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ (Chethan) ಅವರು ನಾರಾಯಣ ಮೂರ್ತಿಯವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದೇಶದ ಅಭಿವೃದ್ದಿಗಾಗಿ ಇಂದಿನ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಾರಾಯಣ ಮೂರ್ತಿಯವರು (Narayana Murthy) ಯುವಕರಿಗೆ ಸಲಹೆ ನೀಡಿದ್ದರು. ಅವರ

ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್, ಭಾರತದ ಉತ್ಪಾದಕತೆಯನ್ನು ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಾರಾಯಣ ಮೂರ್ತಿ ಬಯಸುತ್ತಾರೆ.

ಆ ತರ್ಕದ ಪ್ರಕಾರ, ಯುವಕರು 140 ಗಂಟೆಗಳ ಕಾಲ ಕೆಲಸ ಮಾಡಿದರೆ ಭಾರತೀಯ ಉತ್ಪಾದಕತೆ ಇನ್ನೂ ಹೆಚ್ಚಾಗುವುದಿಲ್ಲವೇ? ಸಹಜವಾಗಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಅಗತ್ಯವಿಲ್ಲ

ಇದು ಎಂತಹ ಸಮಯ ವ್ಯರ್ಥ! ಅಲ್ವಾ? ಯುವಕರು ಕಷ್ಟಪಟ್ಟು ಕೆಲಸ ಮಾಡಲಿ, ಇದರಿಂದ ನಿಮ್ಮ (ನಾರಾಯಣ ಮೂರ್ತಿಯವರ) ಬ್ಯಾಂಕ್ ಬ್ಯಾಲೆನ್ಸ್ ಇನ್ನಷ್ಟು ಬೆಳೆಯಲಿ, ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು. ದೇಶವು ಜಾಗತಿಕವಾಗಿ ಸ್ಪರ್ಧಿಸಬೇಕಾದರೆ ನಮ್ಮ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ನ

(Infosys) ಮಾಜಿ ಸಿಎಫ್ಒ ಮೋಹನ್ದಾಸ್ ಪೈ (CFO Mohandas Pai) ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿಯವರು ಯುವಕರಿಗೆ ಸಲಹೆ ನೀಡಿದ್ದರು.

ಪಾಶ್ಚಿಮಾತ್ಯರಿಂದ ಅನಪೇಕ್ಷಿತ ಹವ್ಯಾಸಗಳನ್ನು ಭಾರತೀಯರು ಕಲಿಯಬಾರದು. ಭಾರತ ನನ್ನ ದೇಶ, ಇದಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ದುಡಿಯುತ್ತೇನೆ ಎಂಬ ಮನಃಸ್ಥಿತಿಯನ್ನು

ಯುವಕರು ಬೆಳೆಸಿಕೊಳ್ಳಬೇಕು. 2ನೇ ಮಹಾಯುದ್ಧದ ಬಳಿಕ ಜರ್ಮನಿ (Germany) ಹಾಗೂ ಜಪಾನ್ ದೇಶಗಳ ಯುವಕರು ಹೆಚ್ಚು ಕೆಲಸ ಮಾಡುವ ಮೂಲಕ ತಮ್ಮ ದೇಶವನ್ನು ಪುನರ್

ನಿರ್ಮಾಣ ಮಾಡಲು (Chethan against Narayana Murthy) ಶ್ರಮಿಸಿದರು.

ನಾವು ಹೆಚ್ಚು ಶಿಸ್ತನ್ನು ರೂಢಿಸಿಕೊಂಡರೆ ಮಾತ್ರ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯ. ಆಗ ಮಾತ್ರ ನಮ್ಮ ಕೆಲಸದ ಉತ್ಪಾದಕತೆ ಸುಧಾರಿಸುತ್ತದೆ. ಪ್ರಜೆಗಳು ಏನೂ ಮಾಡದೇ ಇದ್ದರೆ

ಸರ್ಕಾರ ಏನು ಮಾಡಬಹುದು? ನಾವು ಅತ್ಯಂತ ಕಷ್ಟಪಟ್ಟು ದುಡಿಯುವ ಪ್ರಜೆಗಳಾಗಬೇಕು ನಾರಾಯಣ ಮೂರ್ತಿ ಅವರು ಹೇಳಿದ್ದರು.

ಇದನ್ನು ಓದಿ: ಹುಲಿ ಉಗುರು ವಿವಾದ: ಉಳ್ಳವರು ಕಾನೂನನ್ನೇ ಕೊಂಡುಕೊಳ್ಳುವರು, ನಾನೇನು ಮಾಡಲಿ ಬಡವನಯ್ಯ! ಯತ್ನಾಳ್ ಟಾಂಗ್

Exit mobile version