ವಿವೇಕಾನಂದರು (Vivekananda) ಮಹಿಳಾ ವಿಮೋಚನೆಯನ್ನು ವಿರೋಧಿಸಿದರು ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದರು. ಅವರು ಬರೆಯುತ್ತಾರೆ: ‘ಜಾತಿ ಒಳ್ಳೆಯದು’ ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ’. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ ಏಕೆಂದರೆ ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ವಿವೇಕಾನಂದರು ಸಮಾನತಾವಾದಿಯಲ್ಲ — ಅವರು ನಮ್ಮವರಲ್ಲ ಎಂದು ನಟ ಚೇತನ್ ಅಹಿಂಸಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದರು ಮತ್ತು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದರು. ಅವರು ಬರೆಯುತ್ತಾರೆ: ‘ಜಾತಿ ಒಳ್ಳೆಯದು; ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ’. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ ಏಕೆಂದರೆ ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತಾರೆ.
ನಾವು ಸಮಾನತಾವಾದಿಗಳು ನಮ್ಮ ಐಕಾನ್ಗಳ (Icons) (ಪೆರಿಯಾರ್, ಬಾಬಾಸಾಹೇಬ್) ಕ್ರಾಂತಿಕಾರಿ ಪರಿವರ್ತನೆಗೂ ಮತ್ತು ಅಸಮಾನತೆ/ಅನ್ಯಾಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಹಿಂದೂ ಸುಧಾರಣಾವಾದಿ ಉದಾರವಾದಿಗಳ ನಡುವೆ ವ್ಯತ್ಯಾಸವನ್ನು ಮಾಡಬೇಕು. ಹಿಂದೂ ಉದಾರವಾದಿಗಳು (ವಿವೇಕಾನಂದ, ಗಾಂಧಿ, ಇತ್ಯಾದಿ) ಹಿಂದುತ್ವಕ್ಕಿಂತ (ಸಾವರ್ಕರ್ ಮತ್ತು RSS) ಹೆಚ್ಚು ಅಪಾಯಕಾರಿ — ಇದಕ್ಕೆ ಕಾರಣ ಹಿಂದುತ್ವವು ಪ್ರಾಮಾಣಿಕ ಶತ್ರು; ಆದರೆ ಹಿಂದೂ ಉದಾರವಾದಿಗಳು ಅಪ್ರಾಮಾಣಿಕ/ಕುತಂತ್ರವಾದಿ ‘ಸ್ನೇಹಿತರು’. ಎಂದಿದ್ದಾರೆ.
ಇನ್ನೊಂದು ಬರಹದಲ್ಲಿ, 19ನೇ ಶತಮಾನ: ಸಮಾನತಾವಾದಿ ಜ್ಯೋತಿಬಾ ಫುಲೆ (Jyotiba Phule) ಅವರು (ಮಹಾರಾಷ್ಟ್ರದಲ್ಲಿ) ಮಹಿಳೆಯರಿಗೆ ಮತ್ತು ದಲಿತರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದರು – ಇದು ಹಲವಾರು ಪ್ರಮುಖ ಮಹಿಳಾ ಸ್ತ್ರೀವಾದಿಗಳಿಗೆ ಸ್ಫೂರ್ತಿ ನೀಡಿತು. ಹಿಂದೂ ಉದಾರವಾದಿ ವಿವೇಕಾನಂದರು (ಬಂಗಾಳದಲ್ಲಿ) ಮಹಿಳೆಯರನ್ನು ‘ಗಂಡಸ್ತನ ಕಡಿಮೆಮಾಡುವ ಪ್ರಭಾವ’ ಎಂದು ನೋಡಿದರು-ಮಹಿಳೆ ‘ನಿಷ್ಠೆ’ ಅಥವಾ ‘ಪರಿಶುದ್ಧತೆಯ’ ಸಂದರ್ಭದಲ್ಲಿ ಮಾತ್ರ ‘ವೀರ’ ಆಗಿರಬಹುದು. ಇಂದು ನಾವು ಫುಲೆಯವರಂತೆ ಇಂಟರ್ಸೆಕ್ಷನಲ್ (Intersectional) ಸ್ತ್ರೀವಾದಿಗಳಾಗಿರಬೇಕು — ವಿವೇಕಾನಂದರಂತೆ ಪುರುಷಪ್ರಧಾನದವರಲ್ಲ ಎಂದು ಟೀಕಿಸಿದ್ದಾರೆ.