ಗಾಂಧಿವಾದವನ್ನು ಕಿತ್ತೊಗೆಯಬೇಕು – ನಟ ಚೇತನ್ ಅಹಿಂಸಾ ಆಗ್ರಹ

‘ಧಾರ್ಮಿಕ ಸಾಮರಸ್ಯ’ ಎಂದರೆ ಅಸಮಾನತೆಯ ಸಂರಕ್ಷಣೆ. ಹೀಗಾಗಿ ಗಾಂಧಿವಾದವನ್ನು ಕಿತ್ತೊಗೆಯಬೇಕು (Chethan Ahimsa FB Statement) ಎಂದು ನಟ ಹಾಗೂ ಸಾಮಾಜಿಕ

ಹೋರಾಟಗಾರ ಚೇತನ್ ಅಹಿಂಸಾ (Chethan Ahimsa) ಅವರು ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಗಾಂಧಿಯವರ ‘ಧಾರ್ಮಿಕ ಸಾಮರಸ್ಯ’ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ

ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ. ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ (ಆರ್ಟಿಕಲ್ 25): ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ – ಅಂದರೆ

ಧರ್ಮದಿಂದ ದೂರ. ‘ಧಾರ್ಮಿಕ ಸಾಮರಸ್ಯ’ ಎಂದರೆ ಅಸಮಾನತೆಯ ಸಂರಕ್ಷಣೆ. (Chethan Ahimsa FB Statement) ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದಿದ್ದಾರೆ.

ಕೆಲ ದಿನಗಳ ಹಿಂದೆ, ಪ್ರಿಯಾಂಕ್ ಖರ್ಗೆ (Priyank Kharge) ಹೇಳುತ್ತಾರೆ, ‘ಸುವರ್ಣ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ; ಅದನ್ನು ನನಗೆ ಬಿಟ್ಟರೆ ಇವತ್ತೇ ತೆಗೆಯುತ್ತೇನೆ.

ಕಾಂಗ್ರೆಸ್ ಮತ್ತು ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಬಹುದು; ನಮ್ಮಂತ ಸಮಾನತಾವಾದಿಗಳಿಗೆ, ಸಾವರ್ಕರ್ (Savarkar) ಮತ್ತು ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ

ಶತ್ರುಗಳು. ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದುಹಾಕುವುದು ಸೂಕ್ತ. ಇಲ್ಲವಾದರೆ, ಇಬ್ಬರನ್ನೂ ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್

(Periyar) ಅವರ ಭಾವಚಿತ್ರವನ್ನು ಸೇರಿಸಿ ಎಂದು ಹೇಳಿಕೆ ನೀಡಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ಸ್ವಾಮೀಜಿಗಳು ರಾಜಕೀಯದಿಂದ ದೂರವಿರಬೇಕು ಎಂದು ನಿಜಗುಣ ಸ್ವಾಮೀಜಿ ಹೇಳಿದ್ದಾರೆ. ನಿಜಗುಣ ಸ್ವಾಮೀಜಿಯವರ (Nijaguna Swamiji) ಅನೇಕ ವಿಚಾರವಾದಿ

ಚಿಂತನೆಗಳಿಗಾಗಿ ನಾನು ಅವರನ್ನು ಗೌರವಿಸುತ್ತೇನೆ, ಆದರೆ ನಾನು ಅವರ ಈ ಹೇಳಿಕೆ ಒಪ್ಪುವುದಿಲ್ಲ. ಸ್ವಾಮೀಜಿಗಳು — ನಮ್ಮೆಲ್ಲರಂತೆ– ಸಮಾಜಕ್ಕೆ ಮರಳಿ ಕೊಡುವ ಜವಾಬ್ದಾರಿ ಇದೆ.

ಸ್ವಾಮೀಜಿಗಳು ರಾಜಕೀಯದ ಬಗ್ಗೆ ಹೆಚ್ಚು ಮಾತನಾಡಬೇಕು ಮತ್ತು ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು – ಪರಿಣಾಮವಾಗಿ, ಸಾರ್ವಜನಿಕರು ಅನೇಕ ಸ್ವಾಮೀಜಿಗಳ ಪೊಳ್ಳುತನ ಮತ್ತು

ಸ್ವ-ಲಾಭದಾಯಕ ವಿಚಾರಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ತತ್ಪರಿಣಾಮವಾಗಿ, ಸ್ವಾಮೀಜಿಗಳ ಅತಿ ಮೌಲ್ಯಯುತ ಸ್ಥಾನಮಾನವು ಕಡೆಗಣಿಸಲ್ಪಡುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಕಾಂಗ್ರೆಸ್ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ – ವಿಜಯೇಂದ್ರ ವಾಗ್ದಾಳಿ

Exit mobile version