‘ಪಂಚಭೂತ’ವು ವೈದಿಕ ಹಿಂದೂ ಧರ್ಮದ ಪ್ರಮುಖ ಅಂಶವಾಗಿದ್ದು, ಇದನ್ನು ವಿಜ್ಞಾನದಿಂದ ದೂರವಿಡಬೇಕು : ನಟ ಚೇತನ್

Bengaluru : ಋಗ್ವೇದದ ಐತರೇಯ ಉಪನಿಷತ್ತಿನಲ್ಲಿ ನಮೂದಿಸಲಾದ ‘ಪಂಚ ಭೂತ’ವು ವೈದಿಕ (Chethan Ahimsa Over Kantara) ಹಿಂದೂ ಧರ್ಮದ ಪ್ರಮುಖ ಅಂಶವಾಗಿದ್ದು,

ಇದನ್ನು ವಿಜ್ಞಾನದಿಂದ ದೂರವಿಡಬೇಕು ಎಂದು ನಟ (Actor) ಮತ್ತು ಸಾಮಾಜಿಕ ಹೋರಾಟಗಾರ ಚೇತನ್ (Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಇಸ್ರೋ ಮತ್ತು ಪರಿಸರ/ವಿದ್ಯುತ್ ಸಚಿವಾಲಯಗಳು, ‘ಪಂಚ ಭೂತ’ವನ್ನು (ಭೂಮಿ/ನೀರು/ಬೆಂಕಿ/ಗಾಳಿ/ಆಕಾಶ) ಆಚರಿಸಲು, ‘ವಿಜ್ಞಾನ ಭಾರತಿ’ಯ ಎನ್.ಜೀ.ಓ. ಜೊತೆ ಪಾಲುದಾರಿಕೆಯನ್ನು ಹೊಂದಿವೆ.

ಇದನ್ನೂ ಓದಿ : https://vijayatimes.com/first-solar-powered-village/

ಋಗ್ವೇದದ ಐತರೇಯ ಉಪನಿಷತ್ತಿನಲ್ಲಿ ನಮೂದಿಸಲಾದ ‘ಪಂಚ ಭೂತ’ವು ವೈದಿಕ ಹಿಂದೂ ಧರ್ಮದ ಪ್ರಮುಖ ಅಂಶವಾಗಿದ್ದು, ಇದನ್ನು ವಿಜ್ಞಾನದಿಂದ ದೂರವಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ  ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ (Chethan Ahimsa Over Kantara) ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ.

https://youtu.be/G9oqQSqLBBg ನಿವೃತ್ತರಿಗೇಕೆ ಮಣೆ? Why only retired officers?

ನಮ್ಮ ಆದಿವಾಸಿ/ಅಲೆಮಾರಿ ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ. ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ – ಇಂತದ ‘ಆಮದು ಮಾಡಿಕೊಂಡ’ ಧರ್ಮಗಳು – ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ.

ಎಲ್ಲಾ ಅಸಮಾನತೆಗಳನ್ನ ನಾವು ವಿರೋಧಿಸಬೇಕು. ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. 

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ಹೇಳಿದ್ದಾರೆ.

ಇದು ನಿಜವಲ್ಲ .ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. 

ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
Exit mobile version