‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದಲಿತರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿದ್ದಾರೆ : ನಟ ಚೇತನ್

Chethan ahimsa

‘ವಿಕ್ರಾಂತ್ ರೋಣ’(Vikrant Rona) ಚಿತ್ರದಲ್ಲಿ ದಲಿತರು ಮತ್ತು ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿದ್ದಾರೆ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್ ಅಹಿಂಸಾ(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ(Social Media) ಫೇಸ್ಬುಕ್ನಲ್ಲಿ(Facebook) ಬರೆದುಕೊಂಡಿರುವ ಅವರು, “‘ವಿಕ್ರಾಂತ್ ರೋಣ’- ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ ದಲಿತರನ್ನು-ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ.

ಈ ಸೂಕ್ಷ್ಮವಿಲ್ಲದ ಚಿತ್ರಣದಿಂದ ನಾನು ನಿರಾಶೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡುವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸದೆ ಕೇವಲ ಲಾಭಕ್ಕಾಗಿ ಜಾತಿ/ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಇನ್ನೊಂದು ಬರಹದಲ್ಲಿ ರಾಜ್ಯ ರಾಜಕೀಯದ ವಿದ್ಯಮಾನಗಳನ್ನು ಟೀಕಿಸಿರುವ ಅವರು, ಕರ್ನಾಟಕದ ಎರಡು ರಾಜಕೀಯ ಪಕ್ಷಗಳು ತಮ್ಮನ್ನು ತಾವೇ ಮುಜುಗರಕ್ಕೆ ಒಳಪಡಿಸಿಕೊಳ್ಳುತ್ತಿವೆ.

ಸಿದ್ದರಾಮಯ್ಯನವರ(Siddaramaiah) 75ನೇ ಹುಟ್ಟುಹಬ್ಬವನ್ನು ಅಗತ್ಯವಿಲ್ಲದ ವೈಭವದೊಂದಿಗೆ ಆಚರಿಸುವ ಮೂಲಕ ಕಾಂಗ್ರೆಸ್ ಪಕ್ಷವು(Congress Party) ‘ವ್ಯಕ್ತಿ ಪೂಜೆಯನ್ನು’ ಮಾಡುತ್ತಿದೆ. ಬಿಜೆಪಿಯಲ್ಲಿ, ಸಿದ್ದರಾಮ ಸ್ವಾಮಿಗೆ ಪ್ರತಿನಿತ್ಯ ‘ಉತ್ಸವ’ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದು, ‘ಮೂರ್ತಿ ಪೂಜೆಯನ್ನು’ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಜನರ ಪಕ್ಷಗಳು ಬೇಕಿರುವುದು- ಪೂಜಾ ಪಕ್ಷಗಳಲ್ಲ ಎಂದು ತಿಳಿಸಿದ್ದಾರೆ.

ಇನ್ನು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಈ ಎರಡು ಅಭಿಪ್ರಾಯಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Exit mobile version