ಚೀನಾದಲ್ಲಿ ಕಠಿಣ ಲಾಕ್‌ ಡೌನ್‌ ! ಹಾಗದ್ರೆ ಲಾಕ್ ಡೌನ್‌ ಮಾರ್ಗಸೂಚಿಯಲ್ಲಿ ಏನಿದೆ ?

lockdown

ಬೀಜಿಂಗ್ ಅ 27 : ಚೀನಾದಲ್ಲಿ ಮತ್ತೆ ಕೊರೊನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚೀನಾದ ಹಲವು ನಗರಗಳನ್ನು ಸೀಲ್‌ ಡೌನ್‌ ಮಾಡಲಾಗಿದ್ದು ಜನರನ್ನು ಮನೆಯಿಂದ ಹೊರಬರದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.  ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ ಮನೆಯಿಂದ ಯಾರೂ ಹೊರಗಡೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸೋಂಕು ಪ್ರಕರಣಗಳು ಕ್ಷೀಣಿಸುತ್ತಿರುವಂತೆ ಇಡೀ ವಿಶ್ವ ವ್ಯಾಪಾರ-ವಹಿವಾಟು, ಸಾರಿಗೆ ಎಲ್ಲ ಮಾದರಿಯ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಕೊರೊನಾ ವೈರಸ್‍ನೊಂದಿಗೆಯೇ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಯೋಚಿಸುತ್ತಿದೆ. ಇದೇ ಹೊತ್ತಿನಲ್ಲಿ ಶೂನ್ಯ-ಕೋವಿಡ್ ಸ್ಥಿತಿಗೆ ದೇಶವನ್ನು ಕೊಂಡೊಯ್ಯಬೇಕು ಎಂದು ಚೀನಾ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟೇ ಪ್ರಕರಣಗಳಿರುವ ಪ್ರದೇಶಗಳಲ್ಲೂ ಕಠಿಣ ಲಾಕ್‍ಡೌನ್ ವಿಧಿಸಲು ಚೀನಾ ಮುಂದಾಗಿದೆ. 

ಸ್ಥಳೀಯ ನಿವಾಸಿಗಳು ಮನೆಗಳಲ್ಲೇ ಇರಬೇಕು. ಹೊರಗಡೆ ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ತುರ್ತು ಹಾಗೂ ವೈದ್ಯಕೀಯ ಕಾರ್ಯಗಳಿಗಷ್ಟೇ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ.   ನಗರದಲ್ಲಿ ಬಸ್ ಹಾಗೂ ಟ್ಯಾಕ್ಸಿ ಸಂಚಾರ ಸ್ಥಗಿತಗೊಳಿಸಲಾಗಿದೆ. 70 ರೈಲುಗಳು ಸಂಚಾರ ನಿಲ್ಲಿಸಿವೆ ಎಂದು ವರದಿಯಾಗಿದ್ದು, ಜೊತೆಗೆ

ಬೀಜಿಂಗ್‍ನ ಡ್ಯಾಕ್ಸಿಂಗ್ ಏರ್‍ಪೋರ್ಟ್‍ನಿಂದ ಲಾನ್‍ಝೌಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಚೀನಾ ಸುದ್ದಿಮೂಲಗಳು ಸ್ಪಷ್ಟಪಡಿಸಿವೆ.

Exit mobile version