ಭಾರತದ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಪ್ರವೇಶಕ್ಕೆ ನಿಷೇಧ ಹೇರಿಲಾಗಿದೆ ಎಬ ಮಾತನ್ನು ತಳ್ಳಿಹಾಕಿದ ಚೀನಾ

ಸಾಂಧರ್ಬಿಕ ಚಿತ್ರ

ಚೀನಾ, ಜು. 28: ಭಾರತದ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳು ದೇಶದ ಬಂದರು ಪ್ರವೇಶಿಸುವುದನ್ನು ಅನಧಿಕೃತವಾಗಿ ನಿಷೇಧಿಸಲಾಗಿದೆ ಎಂಬ ವರದಿಗಳನ್ನು ಚೀನಾ ಸರ್ಕಾರ ನಿರಾಕರಿಸಿದೆ.

ಅನಧಿಕೃತ ನಿಷೇಧಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಉತ್ತರಿಸಿದ್ದಾರೆ. ‘ಸಂಬಂಧಪಟ್ಟ ಇಲಾಖೆಗಳ ಬಳಿ ಈ ಕುರಿತು ವಿಚಾರಿಸಲಾಗಿದೆ. ಯಾವುದೇ ಅನಧಿಕೃತ ನಿಷೇಧ ಹೇರಲಾಗಿಲ್ಲ’ ಎಂದು ಅವರು ಹೇಳಿದ್ದಾರೆ. ಈ ವಿಚಾರವನ್ನು ಚೀನಾದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ.

ಭಾರತದ ನೌಕಾ ಸಿಬ್ಬಂದಿಯ ಉದ್ಯೋಗಗಳನ್ನು ರಕ್ಷಿಸಬೇಕು. ಚೀನಾಕ್ಕೆ ತೆರಳುವ ಹಡಗುಗಳು ಭಾರತೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಸುಮಾರು 20,000 ಭಾರತೀಯ ನೌಕಾ ಸಿಬ್ಬಂದಿ ಮನೆಯಲ್ಲೇ ಇರುವಂತಾಗಿದೆ ಎಂದು ‘ಅಖಿಲ ಭಾರತ ನೌಕಾ ಉದ್ಯೋಗಿಗಳ ಒಕ್ಕೂಟ’ ಇತ್ತೀಚೆಗೆ ಕೇಂದ್ರ ಬಂದರು, ಜಲಸಾರಿಗೆ ಸಚಿವರಿಗೆ ಪತ್ರ ಬರೆದಿತ್ತು. 2021ರ ಮಾರ್ಚ್‌ ಬಳಿಕ ಭಾರತೀಯ ಸಿಬ್ಬಂದಿ ಇರುವ ಹಡಗುಗಳಿಗೆ ತನ್ನ ಬಂದರುಗಳನ್ನು ಪ್ರವೇಶಿಸಲು ಚೀನಾ ಅನುಮತಿ ನೀಡುತ್ತಿಲ್ಲ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

Exit mobile version