download app

FOLLOW US ON >

Monday, August 8, 2022
Breaking News
ಸಿದ್ದರಾಮಯ್ಯ-ಖರ್ಗೆಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ : ನಟ ಚೇತನ್ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ನಾಯಕರೆಂದರೆ ನಕಲಿ ಗಾಂಧಿ ಕುಟುಂಬದ ಸದಸ್ಯರು ಮಾತ್ರ  : ಬಿಜೆಪಿನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್
English English Kannada Kannada

ಚಿತ್ರ ನಿರ್ಮಾಣ ಹೊರತು ಬೇರಾವುದೇ ವ್ಯವಹಾರವಿಲ್ಲ; ರಾಧಿಕಾ ಕುಮಾರಸ್ವಾಮಿ

ಬೆಂಗಳೂರು, ಜ. 06: ರಾಧಿಕಾ ಕುಮಾರಸ್ವಾಮಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದುಅದರ ಸ್ಪಷ್ಟೀಕರಣ ಮಾಡುವುದಕ್ಕಾಗಿ ರಾಧಿಕಾ ಅವರು ತುರ್ತು ಪತ್ರಿಕಾ ಗೋಷ್ಟಿ ನಡೆಸಿ  ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯುವರಾಜ್ ಖಾತೆಯಿಂದ 2020ರ ಮಾರ್ಚ್ ತಿಂಗಳಲ್ಲಿ ನನಗೆ 15 ಲಕ್ಷ ರೂ. ಸಂದಾಯವಾಗಿದೆ. ಮತ್ತು ಅವರ ಭಾವನ ಖಾತೆಯಿಂದ 60 ಲಕ್ಷ ಸೇರಿ ಒಟ್ಟು 75 ಲಕ್ಷ ಹಣ ನನಗೆ ಸಂದಾಯವಾಗಿದೆ, ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದು ಸಿನೆಮಾಕ್ಕಾಗಿ ನೀಡಲಾಗಿರುವ ಮುಂಗಡ ಸಂಭಾವನೆ ಎಂದು ಹೇಳಿದ್ದಾರೆ.

ಯುವರಾಜ್ ಅವರು ನಮ್ಮ ತಂದೆಯ ಸ್ನೇಹಿತರು. 17 ವರ್ಷದಿಂದಲೂ ನಮ್ಮ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ. 2019ರ ಮೇನಲ್ಲಿ ನಮ್ಮ ತಂದೆ ಮರಣ ಹೊಂದಿದರು. ಆನಂತರ ನಾವು ದೆಹಲಿಯಲ್ಲಿದ್ದಾಗ ಯುವರಾಜ್ ಅವರಿಂದ ಫೋನ್ ಕರೆ ಬಂತು. ನಮ್ಮ ತಂದೆ ತೀರಿಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ನಮ್ಮ ತಾಯಿಯವರನ್ನು ಭೇಟಿ ಮಾಡಿ ಸಾಂತ್ವಾನ ಮಾಡುವುದಾಗಿ ಹೇಳಿ ದೆಹಲಿಯಲ್ಲಿ ನಮ್ಮನ್ನು ಭೇಟಿ ಮಾಡಿದರು. ಆನಂತರ ಅವರ ಜೊತೆ ಮಾತುಕತೆಗಳು ಮುಂದುವರೆದವು ಎಂದಿದ್ದಾರೆ.

ಇದಕ್ಕೂ ಮೊದಲು ಯುವರಾಜ್ ಅವರ ಜೊತೆ ನಮ್ಮ ತಂದೆಗೆ ಒಳ್ಳೆಯ ಸ್ನೇಹವಿತ್ತು. ಕುಟುಂಬದ ಜ್ಯೋತಿಷಿ ಎಂದು ಯುವರಾಜ್ ಕೆಲಸ ಮಾಡುತ್ತಿದ್ದರು. ಅವರು ಹೇಳಿದ ಎಲ್ಲ ವಿಷಯಗಳು ನಿಜವಾಗುತ್ತಿತ್ತು. ಹಾಗಾಗಿ ಅವರನ್ನು ನಂಬಿ ಮಾತುಕತೆಗಳಾಡುತ್ತಿದ್ದೆವು.

ನಮ್ಮ ತಂದೆ ತೀರಿದ ಬಳಿಕ ನಡೆದ ಮಾತುಕತೆಗಳಲ್ಲಿ ನಾಟ್ಯ ರಾಣಿ ಶಾಕುಂತಲೆಯ ಐತಿಹಾಸಿಕ ಚಿತ್ರ ನಿರ್ಮಾಣದ ವಿಷಯವೂ ಚರ್ಚೆಗೆ ಬಂದಿತ್ತು. ಮುಂಗಡವಾಗಿ 2020ರ ಮಾರ್ಚ್‍ನಲ್ಲಿ ಯುವರಾಜ್ ಖಾತೆಯಿಂದ ನನಗೆ 15 ಲಕ್ಷ ರೂ.ಗಳನ್ನು ಪಾವತಿಸಿದ್ದರು. ನಂತರ ಅವರ ಭಾವರವರ ಖಾತೆಯಿಂದ 60 ಲಕ್ಷ ರೂ.ಗಳನ್ನು ಹಾಕಿಸಿದ್ದಾರೆ.

ಈ ಹಣಕ್ಕೆ ಸಂಬಂಧಪಟ್ಟಂತೆ ಲೆಕ್ಕಪರಿಶೋಧನೆಯ ವೇಳೆ ದಾಖಲಾತಿಗಳು ಬೇಕಾಗಿತ್ತು. ಹಾಗಾಗಿ ಅಗ್ರಿಮೆಂಟ್‍ಗೆ ಸಹಿ ಹಾಕಿಕೊಡುವಂತೆ ನಾನು ಪದೇ ಪದೇ ಫೋನ್ ಮಾಡಿದ್ದೇನೆ. ಆದರೆ ಅವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಅಗ್ರಿಮೆಂಟ್‍ಗೆ ಸಹಿ ಮಾಡಿಕೊಟ್ಟಿರಲಿಲ್ಲ.

ನಾನು ಈವರೆಗೂ ಯಾವುದೇ ಸಿನಿಮಾವನ್ನು ಅಗ್ರಿಮೆಂಟ್ ಮಾಡಿಕೊಂಡೇ ಮಾಡಿಲ್ಲ. ಬಾಯಿ ಮಾತಿನಲ್ಲೂ ಕೆಲಸ ಮಾಡಿದ್ದೇನೆ. ಹೀಗಾಗಿ ಯುವರಾಜ್ ವಿಷಯದಲ್ಲೂ ಬಾಯಿ ಮಾತಿನ ಮೇಲೆ ವ್ಯವಹಾರ ಮಾಡಿರುವುದಾಗಿ ತಿಳಿಸಿದರು.

ಯುವರಾಜ್ ಅವರು ವಂಚನೆ, ಮೋಸ ಪ್ರಕರಣಗಳಲ್ಲಿ ಭಾಗವಹಿಸಿದ್ದರೆ ಅದಕ್ಕೆ ನಾನು ಭಾಗಿದಾರಳಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಅವರ ನಡುವೆ ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾತುಕತೆಯಾಗಿತ್ತು.

 ನಮ್ಮ ಮನೆಯಲ್ಲಿ ವಾಸ್ತು, ಜ್ಯೋತಿಷ್ಯ, ಕೌಟುಂಬಿಕ ವಿಚಾರಗಳ ಬಗ್ಗೆ ಮಾತನಾಡಿದ್ದೇವೆ. ಅದನ್ನು ಹೊರತುಪಡಿಸಿ ಯಾವುದೇ ರಾಜಕಾರಣಿಯಿಂದ ಕೆಲಸ ಮಾಡಿಸಿಕೊಡುವುದಾಗಿ ನಾನು ಭರವಸೆ ಕೊಟ್ಟು ಹಣಕಾಸಿನ ವ್ಯವಹಾರ ಮಾಡಿಲ್ಲ. ಯುವರಾಜ್ ಅವರು ತಪ್ಪು ಮಾಡಿ ನಮ್ಮ ಮೂತಿಗೆ ವರೆಸಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಣಕಾಸಿನ ವ್ಯವಹಾರ ನನ್ನ ಮತ್ತು ಯುವರಾಜ್ ಅವರ ನಡುವೆ ಮಾತ್ರ ನಡೆದಿದೆ. ನಮ್ಮ ಅಣ್ಣನ ಖಾತೆಗೆ ಯುವರಾಜ್ ಅವರಿಂದ ಯಾವುದೇ ಹಣ ಸಂದಾಯವಾಗಿಲ್ಲ. ನನಗೂ ಕೂಡ 75 ಲಕ್ಷ ಮೇಲ್ಪಟ್ಟು ಹಣ ಬಂದಿಲ್ಲ. ನಮ್ಮ ಒಡೆತನದಲ್ಲೂ ಯಾವ ಕಾಲೇಜುಗಳು ಇಲ್ಲ. ಚಿತ್ರ ನಿರ್ಮಾಣ ಹೊರತುಪಡಿಸಿ ಬೇರೆ ಯಾವುದೇ ವ್ಯವಹಾರಗಳು ಇಲ್ಲ ಎಂದು ಹೇಳಿದರು.ನಾನು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದೇನೆ. ರಾಜಕೀಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದೇನೆ. ನಾನು ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಅವರಿಂದ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಮೋಸ, ವಂಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಖಾತೆಗೆ ಬೇಡ ಬೇಡವೆಂದರೂ ಯುವರಾಜ್ ಹಣ ಹಾಕಿದ್ದಾರೆ. ಈಗ ಒಂದೊಂದೆ ಹಗರಣಗಳು ಹೊರಬರುತ್ತಿರುವುದು ನೋಡಿದರೆ ಭಯವಾಗುತ್ತದೆ. ಅವರ ಹಣವನ್ನು ವಾಪಸ್ ಕೊಟ್ಟು ಕೈ ತೊಳೆದುಕೊಳ್ಳುತ್ತೇನೆ ಎಂದು ರಾಧಿಕಾ ಹೇಳಿದ್ದಾರೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article