ಚಿತ್ರಾ ರಾಮಕೃಷ್ಣಗೆ 14 ದಿನ ನ್ಯಾಯಾಂಗ ಬಂಧನ!

chitra ramakrishna

ಎನ್‌ಎಸ್‌ಇ(NSE) ಕೊ-ಲೋಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (NSE) ಮಾಜಿ ಎಂಡಿ(MD) ಮತ್ತು ಸಿಇಒ(CEO) ಚಿತ್ರಾ ರಾಮಕೃಷ್ಣ(Chitra Ramakrishna) ಅವರನ್ನು ಸೋಮವಾರ ದೆಹಲಿಯ ರೋಸ್ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಬಗ್ಗೆ ಅವೆನ್ಯೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿಂದೆ ಕಸ್ಟಡಿ ಅವಧಿ ಮುಗಿದ ಬಳಿಕ ರಾಮಕೃಷ್ಣ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಸೋಮವಾರದ ವಿಚಾರಣೆ ಬಳಿಕ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿತ್ರ ರಾಮಕೃಷ್ಣ ಅವರನ್ನು ತಿಹಾರ್ ಜೈಲಿಗೆ ಕಳಿಸಲು ಸೂಚಿಸಲಾಗಿದೆ. ಒಬ್ಬ ಅಪರಿಸಚಿತ ವ್ಯಕ್ತಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವುದು ಸೇರಿದಂತೆ ಭಾರತದ ಅತಿದೊಡ್ಡ ಷೇರು ಮಾರುಕಟ್ಟೆಯಲ್ಲಿ ಗಂಭೀರ ಲೋಪ ಎಸಗಿರುವ ಆರೋಪದಡಿ ಚಿತ್ರಾ ರಾಮಕೃಷ್ಣ ಅವರನ್ನು ಮಾರ್ಚ್ 6 ರಂದು ಸಿಬಿಐ ಬಂಧಿಸಿತ್ತು. ಆಕೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದ ನಂತರ ಮಾರ್ಚ್ 7 ರಂದು ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಯಿತು.

ಮಾಜಿ ಗ್ರೂಪ್ ಆಪರೇಟಿಂಗ್ ಅಧಿಕಾರಿ ಆನಂದ್ ಸುಬ್ರಮಣಿಯನ್ ಅವರನ್ನೂ ಕೂಡ ಸಿಬಿಐ ಬಂಧಿಸಿದೆ. ಕಸ್ಟಡಿ ಅವಧಿಯಲ್ಲಿ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಯಿತು. ಸದ್ಯ ಇಬ್ಬರೂ ಕೂಡ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಫೆಡರಲ್ ತನಿಖಾ ಸಂಸ್ಥೆಯು ಮೇ 2018 ರಿಂದ ಈ ವಿಷಯವನ್ನು ತನಿಖೆ ಮಾಡುತ್ತಿದೆ. ಆದರೆ ಚಿತ್ರಾ ರಾಮಕೃಷ್ಣ ಅವರು ರಹಸ್ಯ ಮಾಹಿತಿಯನ್ನು ಹಂಚಿಕೊಂಡಿರುವ ಮುಖ ತೋರಿಸಿದ, ಅಪರಿಚಿತ ಯೋಗಿಯನ್ನು ಗುರುತಿಸಲು ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲಿಯವರೆಗೂ ತಿಳಿದುಬಂದಿಲ್ಲ.

ಇತ್ತೀಚೆಗೆ, ಸೆಬಿ ಯೋಗಿಯೊಂದಿಗೆ NSE ಕುರಿತು ಪ್ರಮುಖ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂಬುದು ಮೂಲಗಳು ತಿಳಿಸಿವೆ. 2014 ಮತ್ತು 2016 ರ ನಡುವೆ ಚಿತ್ರಾ ರಾಮಕೃಷ್ಣ ಅವರ ಮೇಲ್ ಐಡಿಯಿಂದ rigyajursama@outlook.com ಗೆ ಅನೇಕ ಇಮೇಲ್‌ಗಳನ್ನು ತಲುಪಿದೆ. ಏಪ್ರಿಲ್ 1, 2013 ರಂದು, ಚಿತ್ರಾ NSECEO ಮತ್ತು MD ಆಗಿ ಕೆಲಸ ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಸುಬ್ರಮಣಿಯನ್ ಅವರನ್ನು NSE ಗೆ ಸಲಹೆಗಾರರಾಗಿ ಕರೆತಂದರು.

Exit mobile version