ನಿಮಗೆ ಚಾಕ್ಲೇಟ್‌ ಅಂದ್ರೆ ಇಷ್ಟಾನಾ ? ಹಾಗಾದ್ರೆ ಚಾಕ್ಲೇಟ್‌ ಹಲ್ವಾ ಮಾಡುವ ಸುಲಭ ವಿಧಾನ ತಿಳಿದುಕೊಳ್ಳಿ.

ಚಾಕ್ಲೇಟ್ ಪ್ರಿಯರು ಮನೆಯಲ್ಲೇ ಚಾಕ್ಲೇಟ್‌ ಹಲ್ವಾ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ಸಮಯ ಕೂಡ ಬೇಡ ಹಾಗೂ ರಾಸಾಯನಿಕ ಮುಕ್ತ ಹಲ್ವಾವನ್ನು ನೀವೆ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು
1ಕಪ್- ಹಾಲಿನ ಪುಡಿ, ಮುಕ್ಕಾಲು ಕಪ್- ಸಕ್ಕರೆ, 50ಗ್ರಾಮ್ಸ್- ಬೆಣ್ಣೆ, 2ಟೀ ಸ್ಪೂನ್- ಕೋ ಕೋ ಪೌಡರ್ ,ಕಾಲು ಕಪ್ ನೀರು.

ಮಾಡುವ ವಿಧಾನ
ಮೊದಲಿಗೆ ಹಾಲಿನ ಪುಡಿ ಹಾಗೂ ಕೋ ಕೋ ಪುಡಿಯನ್ನು ಜರಡಿ ಹಿಡಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ. ಎಳೆ ಪಾಕ ಬಂದಾಗ ಬೆಣ್ಣೆ ಹಾಕಿ.

ಅದು ನೀರಾದ ಮೇಲೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಹಾಕಿ ಚೆನ್ನಾಗಿ ಚಮಚದಿಂದ ಕೈ ಆಡಿಸಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವ ಹಂತ ತಲುಪಿದಾಗ ಒಂದು ತಟ್ಟೆ ಗೆ ಹಾಕಿ. ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿ. ಮೇಲೆ ಅಲಂಕರಿಸಲು. ಬಾದಾಮಿ, ಪಿಸ್ತಾ, ಗೋಡಂಬಿ ಉಪಯೋಗಿಸಬಹುದು.

Exit mobile version