ವಿಶ್ವದಾಖಲೆ ಬರೆದ ಕ್ರಿಸ್ ಗೇಯ್ಲ್: ಟಿ೨೦ ಕ್ರಿಕೆಟ್ ನಲ್ಲಿ 14 ಸಾವಿರ ರನ್ ಗಡಿದಾಟಿದ ಯೂನಿವರ್ಸ್ ಬಾಸ್

ಹೊಸದಿಲ್ಲಿ, ಜು. 13: ಕ್ರಿಕೆಟ್ ಜಗತ್ತಿನ ‘ಯೂನಿವರ್ಸ್‌ ಬಾಸ್‌’ ಎಂದೇ ಖ್ಯಾತಿ ಪಡೆದಿರುವ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಮತ್ತೊಂದು ದಾಖಲೆ ಬರೆದಿದ್ದಾರೆ.

ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಅಬ್ಬರಿಸಿ, ಟಿ20 ಕ್ರಿಕೆಟ್‌ನಲ್ಲಿ ಸಾಮ್ರಾಟನಂತೆ ಮೆರೆದಿರುವ ಕ್ರಿಸ್ ಗೇಯ್ಲ್, ಟಿ೨೦ ಕ್ರಿಕೆಟ್ನಲ್ಲಿ 14 ಸಾವಿರ ರನ್‌ಗಳ ಗಡಿದಾಟಿದ್ದಾರೆ. ಆ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಆಸ್ಟೇಲಿಯಾ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಸ್ಪೋಟಕ ಆಟವಾಡಿದ ಗೇಯ್ಲ್, ಕೇವಲ 38 ಎಸೆತದಲ್ಲಿ 67 ರನ್ ಬಾರಿಸುವ ಮೂಲಕ ವಿಶೇಷ ದಾಖಲೆ ಬರೆದರು. 41 ವರ್ಷದ ಕ್ರಿಸ್ ಗೇಯ್ಲ್, ಟಿ20 ಯಲ್ಲಿ ಒಟ್ಟು 14,038 ರನ್ ಗಳಿಸಿದ್ದು, ಒಟ್ಟು 22 ಶತಕ ಬಾರಿಸಿದ್ದಾರೆ.

ಗೇಯ್ಲ್ ನಂತರದಲ್ಲಿ ವೆಸ್ಟ್ ಇಂಡೀಸ್ ತಂಡದ ಮತ್ತೊಬ್ಬ ಆಟಗಾರ ಕೈರನ್ ಪೊಲಾರ್ಡ್ 10,836 ರನ್ ಗಳಿ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೊಯೆಬ್ ಮಲ್ಲಿಕ್ 10,741 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 9922 ರನ್ಗಳೊಂದಿಗೆ 5ನೇ ಸ್ಥಾ‌ನದಲ್ಲಿದ್ದಾರೆ.

Exit mobile version