ಚುನಾವಣಾ ಅಕ್ರಮ ಅಭ್ಯರ್ಥಿ ವಿರುದ್ಧ ಎಫ್ಐಆರ್ ಆನ್‌ಲೈನ್‌ ದಾಖಲಾತಿಗೆ ಮೀನಮೇಷ

ಮೈಸೂರು, ಜ. 02: ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಯು ಸಂಪೂರ್ಣಗೊಂಡು, ಫಲಿತಾಂಶವು ಹೊರಬಂದಿದೆ. ಈ ಯಾವುದೇ ಚುನಾವಣೆಗಳ ಸಂದರ್ಭದಲ್ಲಿ ಹಣದ ಆಮಿಷವೊಡ್ಡಿ, ಮತಗಳನ್ನು ಪಡೆಯುವುದು ಸರ್ವೇಸಾಮಾನ್ಯವಾಗಿ ಹೋಗಿದೆ. ಇದು ಕಾನೂನು ಬಾಹಿರವಾದರೂ ಇದು ನಮ್ಮ ದೇಶದಲ್ಲಿ ನಡೆಯುತ್ತಿದೆ ಎನ್ನುವುದು ಶೋಚನೀಯ ಸಂಗತಿ. ಮೈಸೂರು ಜಿಲ್ಲೆಯ ಕೆ. ಆರ್ ನಗರ ತಾಲೂಕಿನ ಹೆಬ್ಬಾಳ ಪಂಚಾಯತ್ ವ್ಯಾಪ್ತಿಯ ಮತದಾರ ಅಭ್ಯರ್ಥಿ ಜಲೇಂದ್ರ ಹೆಚ್. ಎಸ್ ಹಂಚಿ ಮತವನ್ನು ಪಡೆದುಕೊಂಡು ಗೆದ್ದ ಪ್ರಕರಣ ಬೆಳಕಿಗೆ ಬಂದಿದೆ.

ಡಿಸೆಂಬರ್ ೨೨ ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪೋಲೀಸರಿಗೆ ಹಾಗೂ ಚುನಾವಣಾ ಆಯೋಗದವರಿಗೆ ಹೆದರಿಸಿ, ಬೆದರಿಸಿದ ಅಲ್ಲಿನ ಅಭ್ಯರ್ಥಿ ಜಲೇಂದ್ರ ಹೆಚ್. ಎಸ್ ಹೆಬ್ಬಾಳ ಪಂಚಾಯತ್ನಲ್ಲಿ ವೋಟ್ ಬೂತ್ ಆವರಣದಲ್ಲಿ ಕೂತು ಮತದಾರರಿಗೆ ಕನಿಷ್ಠ ಹಣವನ್ನು ನೀಡಿ ಆಮಿಷವೊಡ್ಡಿ ತಮಗೆ ಮತವನ್ನು ಹಾಕುವಂತೆ ಯಾಚಿಸುತ್ತಿದ್ದರು. ಇದನ್ನರಿತ ಸಾಲಿಗ್ರಾಮ ಪೋಲೀಸ್ ಸ್ಟೇಷನ್ನ ಆರತಿ ರೆಧಾಂದ್ ಅವರು ಈ ಅಭ್ಯರ್ಥಿಯನ್ನು ವಶಕ್ಕೆ ಪಡೆದುಕೊಂಡು 69,000 ನಗದನ್ನು ಸೀಜ್ ಮಾಡಿ, ಕೆ. ಆರ್ ನಗರದ ಸ್ಟೇಷನ್ನಲ್ಲಿ ಬಂಧಿಸಿದ್ದಾರೆ. ಅಲ್ಲದೇ ಅಭ್ಯರ್ಥಿಯ ವಿರುದ್ಧ ಕೇಸ್ ನಂಬರ್ 394ರಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.

ಅಲ್ಲದೇ ಬಂಧಿತ ಅಭ್ಯರ್ಥಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ರಾಜಕೀಯ ಒತ್ತಡದಿಂದಾಗಿ ಇನ್ನೂ ಕೂಡ ಎಫ್ಐಆರ್ ಪ್ರತಿಯನ್ನು ಪೋಲೀಸ್ ಇಲಾಖೆಯ ವೆಬ್ಸೈಟ್ನಲ್ಲಿ ನಮೂದಿಸಲಿಲ್ಲ. ಈ ಬಗ್ಗೆ ಸ್ಥಳೀಯರು ತಹಶೀಲ್ದಾರ್ ಬಳಿ ದೂರು ನೀಡಿದರೆ ಚುನಾವಣಾ ಆಯೋಗಕ್ಕೆ ನೀಡುವಂತೆ ತಿಳಿಸುತ್ತಾರೆ. ಆದರೆ ಅಲ್ಲಿನ ಅಧಿಕಾರಿಗಳು ಡಿಸಿ ಬಳಿ ದೂರು ನೀಡುವಂತೆ ತಿಳಿಸುತ್ತಾರೆ. ಮೈಸೂರು ಡಿಸಿ ಆಫೀಸ್ನಲ್ಲಿ ಎಫ್ಐಆರ್ ಪ್ರತಿ ಪೋಲೀಸ್ ಇಲಾಖೆಯ ವೆಬ್ಸೈಟ್ನಲ್ಲಿ ದಾಖಲಾಗದೇ, ನಾವು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಹೀಗಾಗಿ ಸರಿಯಾಗಿ ದೂರು ದಾಖಲಾಗದೇ ಅಡ್ಡ ಮಾರ್ಗ ಹಿಡಿದು ಗೆದ್ದ ಅಭ್ಯರ್ಥಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

Exit mobile version