ಪಿರಿಯಾಪಟ್ಟಣದಲ್ಲಿ ಚರ್ಚ್ ಧ್ವಂಸ !

Mysore : ಕ್ರಿಸ್‌ಮಸ್ (Church destroyed in Piriyapatna) ಹಬ್ಬದ ನಂತರ ಮೈಸೂರು ಜಿಲ್ಲೆಯ, ಪಿರಿಯಾಪಟ್ಟಣದಲ್ಲಿ ಸೇಂಟ್ ಮೇರಿ ಚರ್ಚ್ ಯೊಂದರ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ದಾಳಿ ಮಾಡಿ, ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸಗೊಳಿಸಿ, ಕಾಣಿಕೆ ಡಬ್ಬಿಯಿಂದ ಹಣದೋಚಿ ಪರಾರಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ (Priyapatna) ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಅಪರಿಚಿತ ದುಷ್ಕರ್ಮಿಗಳು ಬಲಿಪೀಠದಲ್ಲಿ ಇರಿಸಲಾಗಿದ್ದ ಯೇಸುವಿನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.

ಆದಾಗ್ಯೂ, ಅವರು ಚರ್ಚ್‌ನಲ್ಲಿ ಇರಿಸಲಾಗಿದ್ದ ಯೇಸುವಿನ ಮುಖ್ಯ ಪ್ರತಿಮೆಗೆ ಯಾವುದೇ (Church destroyed in Piriyapatna) ಹಾನಿ ಮಾಡಿಲ್ಲ.

ಪೊಲೀಸ್‌ ಅಧಿಕಾರಿಗಳ ಪ್ರಕಾರ, ಚರ್ಚ್‌ನಲ್ಲಿ ಪಾದ್ರಿ (Priest) ಇಲ್ಲದಿರುವಾಗ ಈ ವಿಧ್ವಂಸಕ ಕೃತ್ಯ ಸಂಭವಿಸಿದೆ.

ಈ ವೇಳೆ ದೇಣಿಗೆ ಪೆಟ್ಟಿಗೆಯಲ್ಲಿದ್ದ ಹಣವೂ ನಾಪತ್ತೆಯಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಘಟನೆಯನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ : https://twitter.com/KannadaPrabha/status/1607954773881524224?s=20&t=Gh1a7rvzHp0vyekjBaQmYg

ಈ ಬಗ್ಗೆ ಫಾದರ್ ಜಾನ್ ಪಾಲ್ (Father John Paul) ಪ್ರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು,

ದೂರು ದಾಖಲಿಸಿಕೊಂಡಿರುವ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಮಾಡಿರುವ ವ್ಯಕ್ತಿಗಳ ಪತ್ತೆಗೆ ಶೋಧ ಮುಂದುವರಿಸಿದ್ದಾರೆ ಎಂದು ಎಸ್ಪಿ ಲಾಟ್ಕರ್ (SP Latkar) ತಿಳಿಸಿದ್ದಾರೆ.

ನಾವು ಅಪರಾಧಿಗಳನ್ನು ಹಿಡಿಯಲು ತಂಡವನ್ನು ರಚಿಸಿದ್ದೇವೆ. ಲಭ್ಯವಿರುವ ಸಿಸಿಟಿವಿ (CCTV) ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ಇದು ಹಣದ ಪೆಟ್ಟಿಗೆ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮಾಡಿದ ಕೃತ್ಯದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಆದರು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಬಲವಂತದ ಧಾರ್ಮಿಕ ಮತಾಂತರದ ಆರೋಪದ ಅಡಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಕ್ರಿಶ್ಚಿಯನ್ ಮಿಷನರಿಗಳು ಮತ್ತು ಚರ್ಚುಗಳು ಕೆಲವು ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಕೋಪವನ್ನು ಎದುರಿಸಿದ್ದಾರೆ. ಇದೆ ರೀತಿಯಲ್ಲಿ ಕಳೆದ ಶುಕ್ರವಾರ,

ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮದ ಮೇಲೆ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ದೊಣ್ಣೆಗಳಿಂದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದಾಳಿ ನಡೆಸಿತ್ತು.

ಕರ್ನಾಟಕವು ಈ ವರ್ಷದ ಆರಂಭದಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಿತು, ಅದು “ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬಲವಂತ ಮತಾಂತರ, ಅನಗತ್ಯ ಪ್ರಭಾವ, ಒತ್ತಾಯ,

ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಮತಾಂತರವನ್ನು ನಿಷೇಧಿಸುತ್ತದೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ.

ಇದನ್ನೂ ಓದಿ : https://vijayatimes.com/messi-gave-special-gift/

ಬಿಜೆಪಿ (BJP) ಆಡಳಿತದ ರಾಜ್ಯಗಳು ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಸಲುವಾಗಿ ಕಾನೂನುಗಳನ್ನು ಹೊರಡಿಸಿದ್ದು, ಕಳೆದ ವರ್ಷ ಇದೇ ಕಾನೂನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ವರದಿಯಲ್ಲಿ ತಿಳಿಸಿದ್ದಾರೆ.
Exit mobile version