ವಿಕ್ರಾಂತ್ ರೋಣ ಚಿತ್ರ ವೀಕ್ಷಿಸುವ ಮಧ್ಯೆ `ಕಾಫಿನಾಡು ಚಂದು’ಗೆ ಜೈಕಾರ ಕೂಗಿದ ಸಿನಿಪ್ರೇಕ್ಷಕರು!

Vikrant Rona

ಕನ್ನಡ ಚಿತ್ರರಂಗದಲ್ಲಿ(Kannada Film Industry) ಸಾಲು ಸಾಲು ಸಿನಿಮಾಗಳು(Cinema) ಬಿಡುಗಡೆಗೆ ಸಜ್ಜಾಗಿದೆ. ಈ ಪೈಕಿ ಕನ್ನಡ ಚಿತ್ರರಸಿಕರ ಪಾಲಿಗೆ ಬಹುನಿರೀಕ್ಷಿತ ಚಿತ್ರ, ಅಭಿನಯ ಚಕ್ರವರ್ತಿ, ಬಾದ್‍ಷಾ ನಟ ಕಿಚ್ಚ ಸುದೀಪ್(Kiccha Sudeep) ಅವರ ವಿಕ್ರಾಂತ್ ರೋಣ. ಹೌದು, ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ವಿಕ್ರಾಂತ್ ರೋಣ(Vikrant Rona) ಈಗ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಕಿಚ್ಚ ಸುದೀಪ್ ಅವರನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ದೌಡಾಯಿಸಿದ ಸಿನಿಪ್ರೇಕ್ಷಕರಿಗೆ ಅಚ್ಚರಿ ಒಂದು ಕಾದಿತ್ತು.

ಹೌದು, ಪ್ರತಿಬಾರಿ ಚಿತ್ರಮಂದಿರದಲ್ಲಿ ಸಿನಿಮಾ ನೊಡಲು ಹೋದಾಗ ನೆಚ್ಚಿನ ನಟನ ಹೆಸರು ಅಥವಾ ತಮ್ಮಗಿಷ್ಟವಾದ ನಾಯಕಿ ಹೆಸರಿನಲ್ಲಿ ಜೈಕಾರ ಕೂಗಿ ತಮ್ಮ ಉತ್ಸಾಹ ವ್ಯಕ್ತಪಡಿಸುವ ಗುಂಪಿನ ಮಧ್ಯೆ, ಪ್ರಥಮ ಬಾರಿಗೆ ಕಳೆದ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral) ಆಗಿರುವ ವ್ಯಕ್ತಿಯ ಹೆಸರನ್ನು ಕೂಗಿ ಜೈಕಾರ ಹಾಕಿರುವ ಘಟನೆ ಬೆಂಗಳೂರಿನ, ಕೋರಮಂಗಲದ(Kormangala) ಪಿವಿಆರ್(PVR) ಚಿತ್ರಮಂದಿರದಲ್ಲಿ ನಡೆದಿದೆ. ಭರ್ಜರಿಯಾಗಿ ತೆರೆಕಂಡ ವಿಕ್ರಾಂತ್ ರೋಣದಲ್ಲಿ ಕಿಚ್ಚ ಸುದೀಪ್ ಅವರು ಫ್ಯಾಂಟಮ್, ಪೊಲೀಸ್ ಅಥವಾ ವಿಲನ್’ ಆಗಿ ಕಾಣಿಸಿಕೊಂಡಿದ್ದಾರಾ? ಎಂಬ ಪ್ರಶ್ನೆ ಒಂದೆಡೆಯಾದ್ರೆ,

ನಾಯಕಿಯೇ ಕಥೆಯೇ ಆಧಾರವಾ? ರಂಗಿತರಂಗ ಅಧ್ಯಾಯವಾ? ಪ್ರತಿಬಾರಿ ನಮ್ಮ ಕನ್ನಡ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋದಾಗ, ಸಿನಿಪ್ರೇಕ್ಷಕರು ತಮ್ಮ ಆಸನದಲ್ಲಿ ಕುಳಿತು ಚಿತ್ರ ಪ್ರಾರಂಭವಾಗುವ ಮುನ್ನ ಒಂದೊಂದು ರೀತಿ ಜೈಕಾರ, ಶಿಳ್ಳೆ, ಚೀರಾಟಗಳಿಂದ ನೆರೆದಿರುವ ಇನ್ನಿತರ ಸಿನಿಪ್ರೇಕ್ಷಕರನ್ನು ಹುರಿದುಂಬಿಸುತ್ತಾರೆ. ಅದೇ ರೀತಿ ಈ ಬಾರಿಯೂ ನಡೆಯಿತು. ಆದ್ರೆ, ಈ ಬಾರಿ ಕಳೆದ ಬಾರಿಯಂತೇ ಸ್ಟಾರ್ ನಟರ ಹೆಸರು ಬಳಸಿಲ್ಲ!

ಬದಲಾಗಿ ಕೆಲ ದಿನಗಳಿಂದ ಇಂಟರ್‍ನೆಟ್ ಸ್ಟಾರ್(Internet Star) ಆಗಿ ಮಿಂಚುತ್ತಿರುವ ಚಿಕ್ಕಮಗಳೂರಿನ(Chikkamagalur) ಕಾಪಿನಾಡು ಚಂದು ಹೆಸರಿನಲ್ಲಿ ಸಿನಿಪ್ರೇಕ್ಷಕರ ಗುಂಪೊಂದು ಜೈಕಾರ ಹಾಕಿದ್ದಾರೆ. ಹೌದು, ವಿಕ್ರಾಂತ್ ರೋಣ ಪ್ರಾರಂಭಕ್ಕೂ ಮುನ್ನ `ಕಾಪಿನಾಡು ಚಂದು ಅಣ್ಣಂಗೆ’ ಜೈ ಎಂದು ಕೂಗಿದ್ದಾರೆ. ಈ ಮೂಲಕ ಹಾಸ್ಯ ಮಾಡುತ್ತ ಕೈಗೆ ಕೊಟ್ಟ 3ಡಿ ಗ್ಲಾಸ್(3D Glass) ಧರಿಸಿ ಪರದೆಯ ಮೇಲೆ ಕಣ್ಣಾಡಿಸಿದರು.

Exit mobile version