ಅಕ್ಟೋಬರ್ 1 ರಿಂದ ಚಿತ್ರಮಂದಿರ ಶೇ 100ರಷ್ಟು ಭರ್ತಿಗೆ ಅವಕಾಶ

 ಬೆಂಗಳೂರು ಸೆ 25 : ಅಕ್ಟೋಬರ್ 1 ರಿಂದ ಚಿತ್ರಮಂದಿರದಲ್ಲಿ ಚಿತ್ರಮಂದಿರ ಶೇ 100ರಷ್ಟು ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿದೆ.ಜೊತೆಗೆ  ಅಕ್ಟೋಬರ್ 3 ರಿಂದ ಶಾಲಾ-ಕಾಲೇಜು ಸೇರಿ ಪಬ್ ಗಳಿಗೂ ಶೇಕಡ ನೂರರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಕೆಲವು ನಿಯಮಗಳನ್ನು ಬಿಡುಗಡೆಮಾಡಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ನಡೆಸಿದ್ದು,.ಶೇ.1 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣವಿರುವ ಭಾಗಗಳಲ್ಲಿ ಮಾತ್ರ ಶೇ.100 ರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕಲ್ಪಿಸಿದ್ದು, ಶೇ.1 ಕ್ಕಿಂತ ಪ್ರಕರಣ ಹೆಚ್ಚಿರುವ ಕಡೆ ಶೇ.50 ಹಾಗೂ ಶೇ.2 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ಹೆಚ್ಚಿರುವ ಭಾಗಗಳಲ್ಲಿ ಚಿತ್ರಮಂದಿರ ಬಂದ್ ಮಾಡುವುದಾಗಿಯೂ ಹಾಗೂಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವವರು ಕೋವಿಡ್ ಮೊದಲನೇ ಲಸಿಕೆಯನ್ನಾದರೂ ಕಡ್ಡಾಯವಾಗಿ ಪಡೆದಿರಬೇಕೆಂದು ಷರತ್ತು ವಿಧಿಸಿದೆ.ಗರ್ಭಿಣಿ ಹಾಗೂ ಮಕ್ಕಳಿಗೆ ಚಿತ್ರಮಂದಿರದಲ್ಲಿ ಅವಕಾಶ ನೀಡದಿರಲು ನಿರ್ಧರಿಸಿದೆ.

ಹಾಗೆ ರಾತ್ರಿ ಕರ್ಫ್ಯೂವನ್ನು ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನಿಗದಿ ಪಡಿಸಿ, 6-12 ನೇ ತರಗತಿವರೆಗೆ ಶೇ.100 ರಷ್ಟು ಹಾಜರಾತಿಯಂತೆ ವಾರದಲ್ಲಿ 5 ದಿನ ಶಾಲಾ ಕಾಲೇಜು ನಡೆಸಲು ತೀರ್ಮಾನಿಸಲಾಯಿತು.

ದಸರಾ ಬಗ್ಗೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು, ಗಡಿಭಾಗಗಳಲ್ಲಿ ಹೆಚ್ಚು ನಿಗಾ, ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಲಸಿಕಾ ಅಭಿಯಾನ ತೀವ್ರಗೊಳಿಸಲು ಜನರಲ್ಲಿ ಲಸಿಕೆ ಬಗ್ಗೆ ಹೆಚ್ಚು ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ, ಕಂದಾಯ ಸಚಿವ ಆರ್ ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು

Exit mobile version