ಹಸು ಮಾರಿ ಲಂಚ ಕೊಟ್ಟ ರೈತ!

ಹಸು ಮಾರಿ ಲಂಚ ಕೊಟ್ಟ ರೈತ! ಹಸು, ಬಂಗಾರ ಮಾರಿ 20 ಸಾವಿರ ರೂಪಾಯಿ ಲಂಚ

 ಮನೆ ಮಂಜೂರಾತಿಗಾಗಿ ಎಚ್.ಡಿ.ಕೋಟೆ ಸರಗೂರು ತಾಲ್ಲೂಕಿನ ಗ್ರಾಮಲೆಕ್ಕಿಗನಿಗೆ ತನ್ನಲ್ಲಿದ್ದ ಹಸು, ಬಂಗಾರ ಮಾರಿ 20 ಸಾವಿರ ರೂಪಾಯಿ ಲಂಚ. ಲಂಚ ಕೊಟ್ರೂ ಮನೆನೂ ಮಂಜೂರಾಗಿಲ್ಲ, ಹಣನೂ ವಾಪಾಸ್ ಬಂದಿಲ್ಲ.

ಹಸು, ಬಂಗಾರ ಮಾರಿ ಗ್ರಾಮಲೆಕ್ಕಿಗನಿಗೆ ಲಂಚ ಕೊಟ್ಟ ರೈತ !

ಎಚ್.ಡಿ.ಕೋಟೆ ಸರಗೂರು ತಾಲ್ಲೂಕಿನಲ್ಲಿ ನಡೆದ ಘಟನೆ

ಮನೆ ಮಂಜೂರಾತಿಗೆ ವಿ.ಎಯಿಂದ 50 ಸಾವಿರ ಲಂಚದ ಬೇಡಿಕೆ

ಸರಗೂರು ಗ್ರಾಮಲೆಕ್ಕಿಗ ಹೇಮಂತ್‌ಗೆ ಶಿವಲಿಂಗೇಗೌಡರಿಂದ ಲಂಚ

ಎಂಥಾ ದರಿದ್ರ ವ್ಯವಸ್ಥೆ ರೀ ಇದು. ನಮ್ಮ ಸರಕಾರಿ ಅಧಿಕಾರಿಗಳು ಇಷ್ಟೊಂದು ಬರಗೆಟ್ಟಿ ಹೋಗಿದ್ದಾರಾ? ಲಂಚಕ್ಕಾಗಿ ಮನುಷ್ಯತ್ವವನ್ನೇ ಕಳೆದುಕೊಂಡ ಮೃಗಗಳಾದ್ರಾ? ಈ ಪ್ರಶ್ನೆ ಮೂಡಲು ಕಾರಣ,

ಮನೆ ಮಂಜೂರಾತಿಗಾಗಿ ಒಬ್ಬ ಬಡ ರೈತನಿಂದ ಹಸು ಮಾರಿಸಿ ಲಂಚ ಪಡೆದ ಅತ್ಯಂತ ನಾಚಿಕೆಗೇಡಿನ ಘಟನೆ ಎಚ್.ಡಿ.ಕೋಟೆಯ ಸರಗೂರು ತಾಲ್ಲೂಕಿನಲ್ಲಿ ನಡೆದಿದೆ.

ದೇವಲಾಪು ಹುಂಡಿಯ ಬಡ ರೈತ. ಇವರೇ ಎಚ್.ಡಿ.ಕೋಟೆಯ ಸರಗೂರು ತಾಲ್ಲೂಕಿನ ಗ್ರಾಮಲೆಕ್ಕಿಗ ಹೇಮಂತ್‌ಗೆ ತನ್ನಲ್ಲಿದ್ದ ಒಂದು ಹಸು ಮತ್ತು ತಾಳಿ ಗುಂಡು ಮಾರಿ 20 ಸಾವಿರ ಲಂಚ ಕೊಟ್ಟ ರೈತ.

ಇವರು ಲಂಚ ಕೊಡಲು ಕಾರಣ ಏನು ಗೊತ್ತಾ? ಎಂಟು ತಿಂಗಳ ಹಿಂದೆ ವಿಪರೀತ ಗಾಳಿ ಮಳೆಗೆ ಇವರ ಮನೆ ಗೋಡೆ ಕುಸಿದು ಬಿತ್ತು. ಮನೆಯೊಳಗೆ ಮಲಗಿದ್ದ ಶಿವಲಿಂಗೇಗೌಡ ಮತ್ತು ಪತ್ನಿ ಶಾತದಮ್ಮ ಅವರ ಮೇಲೆ ಗೋಡೆ ಕುಸಿದು ಬಿದ್ದು ಪ್ರಾಣಾಪಾಯದಿಂದ ಪಾರಾಗಿ ಜಿಲ್ಲಾ ಕೆ.ಆರ್.ಆಸ್ಪತ್ರೆಯಲ್ಲಿ  ಐದು ದಿನ ಚಿಕಿತ್ಸೆ ಪಡೆದಿದ್ದರು. ಪ್ರಕೃತಿ ವಿಕೋಪದಡಿಯಲ್ಲಿ ಇವರಿಗೆ ಸರ್ಕಾರದಿಂದ ಮನೆ ಹಾಗೂ ಹಣ ಮಂಜೂರು ಮಾಡಲು 50ಸಾವಿರ ರೂಪಾಯಿ  ಲಂಚ ಕೊಡಬೇಕು ಅಂತ ಸರಗೂರು ಗ್ರಾಮಲೆಕ್ಕಿಗ ಹೇಮಂತ್ ಬೇಡಿಕೆ ಇಟ್ಟಿದ್ದರು.

ರೈತ ಶಿವಲಿಂಗೇಗೌಡರ ಬಳಿ 50 ಸಾವಿರ ರೂಪಾಯಿ ಹಣ ಇಲ್ಲದಿದ್ದಾಗ ಅವರು ಹಸುಗಳನ್ನು ಹಾಗೂ ತಾಳಿ ಗುಂಡನ್ನು ಮಾರಿ ಗ್ರಾಮಲೆಕ್ಕಿಗ ಹೇಮಂತ್‌ 20ಸಾವಿರ ರೂಪಾಯಿ ಕೊಟ್ರಂತೆ.

ಆದ್ರೆ ಶಿವಲಿಂಗೇಗೌಡರು 50 ಸಾವಿರ ಕೊಡದೆ ಬರೀ 20 ಸಾವಿರ ರೂಪಾಯಿ ಕೊಟ್ಟಿದ್ದರಿಂದ ಇವರಿಗೆ ಮನೆಯನ್ನು ಮಂಜೂರು ಮಾಡಿಲ್ಲ. ಅಲ್ಲದೆ ಶಿವಲಿಂಗೇಗೌಡ ದಂಪತಿ‌ ಹೆಸರು ಫಲಾನುಭವಿ ಪಟ್ಟಿಯಲ್ಲಿ ಬಿ ಗ್ರೇಡ್ ನಲ್ಲಿ ದಾಖಲಾಗಿತ್ತು‌, ಆದ್ರೆ  ಉಳಿಕೆ ಹಣ ಕೊಡದಿದ್ರಿಂದ ಇವರ ಹೆಸರನ್ನು ಬಿ ಗ್ರೇಡ್ ನಿಂದ ಸಿ ಗ್ರೇಡ್ ಸ್ಥಳಾಂತರ ಮಾಡಿ ಗ್ರಾಮಲೆಕ್ಕಿಗ ಹೇಮಂತ್‌ ಬಾರೀ ಮೋಸ ಮಾಡಿದ್ರು ಅನ್ನೋದು ಇವರ ಆರೋಪ.

ಸವಲತ್ತಿಗಾಗಿ ರಾಸುಗಳನ್ನು ಕಳೆದುಕೊಂಡ ಪಲಾನುಭವಿ ಶಿವಲಿಂಗೇಗೌಡರಿಗೆ ಅತ್ತ ಮನೆನೂ ಇಲ್ಲ ಮನೆಯ ರಾಸುಗಳೂ ಇಲ್ಲದೆ ಕುಸಿಯುವ ಹಂತದಲ್ಲಿರುವ ಮನೆಯಲ್ಲೇ ಜೀವ ಭಯದಲ್ಲೇ‌ ಜೀವನ ನಡೆಸ ಬೇಕಾದ ದುಸ್ಥಿತಿ ಬಂದಿದೆ.

ಆದ್ರೆ ಈ ಗ್ರಾಮಲೆಕ್ಕಿಗ ಲಂಚ ಕೊಟ್ಟವರಿಗೆ ಮಾತ್ರ ಮನೆ ಮಂಜೂರು ಮಾಡಿದ್ದಲ್ಲದೆ, ಲಂಚ ಕೊಟ್ಟ ಅನರ್ಹರಿಗೂ ಮನೆ ಮಂಜೂರು ಮಾಡಿದ ಘಟನೆ ನಡೆದಿದೆ. ಅಲ್ಲದೆ ಪ್ರಕೃತಿ ವಿಕೋಪದಡಿಯಲ್ಲಿ ಶಿಥಿಲಗೊಂಡ ಮನೆಗಳ ಸಂಪೂರ್ಣ ಸರ್ವೆ ನಡೆಸಿ‌ ಇಂತಿಷ್ಟು ದಿನದಲ್ಲಿ ಅನ್ ಲೈನ್ ಅಪ್ ಲೋಡ್ ಮಾಡುವ  ಸರ್ಕಾರದ ಸೂಚನೆಯನ್ನೂ ಪಾಲನೆ ಮಾಡದೆ ಬೇಕಾಬಿಟ್ಟಿ ಪರಿಹಾರ ಮಂಜೂರು ಮಾಡಿದ್ದಾರೆ. ಹಾಗಾಗಿ ಗ್ರಾಮಲೆಕ್ಕಿಗ ಹೇಮಂತ್‌ ವಿರುದ್ಧ ಕಠಿಣ ಕ್ರಮಕೈಗೊಂಡು, ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Exit mobile version