ಕೆ.ಆರ್‌ಪೇಟೆಯ ಲೋಕನಹಳ್ಳಿ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ದುಸ್ಥಿತಿ

ಶಿಕ್ಷಣ ಸಚಿವರು ನಿದ್ದೆ ಮಾಡ್ತಿದ್ದಾರಾ? ಇದು ಸರ್ಕಾರಿ ಶಾಲೆಯೋ ದನದ ಹಟ್ಟಿಯೋ? ಕೆ.ಆರ್‌ಪೇಟೆಯ ಲೋಕನಹಳ್ಳಿ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಕುಸಿದು ಬೀಳುತ್ತಿದ್ರು ಮಂಡ್ಯದ  ಶಿಕ್ಷಣ ಅಧಿಕಾರಿಗಳಿಗೆ ಕಾಣುತ್ತಿಲ್ಲ.

ಪ್ರಾಥಮಿಕ ಶಿಕ್ಷಣ ಸಚಿವರು ನಿದ್ದೆ ಮಾಡ್ತಿದ್ದಾರಾ?

ಮಂಡ್ಯ ಜಿಲ್ಲೆಯ ಲೋಕನಹಳ್ಳಿ ಸರ್ಕಾರಿ ಶಾಲೆ ದುಸ್ಥಿತಿ

ಇದು ಸರ್ಕಾರಿ ಶಾಲೆಯೋ ದನದ ಹಟ್ಟಿಯೋ?

ಕುಸಿದು ಬೀಳುತ್ತಿದ್ರೂ ಶಿಕ್ಷಣ ಅಧಿಕಾರಿಗಳಿಗೆ ಕಾಣುತ್ತಿಲ್ಲ

ಎಂಥಾ ಅವಸ್ಥೆ ನೋಡಿ. ಈ ಸ್ಟೋರಿ ಹೇಳೋಕೂ ನಾಚಿಕೆಯಾಗುತ್ತೆ. ನಮ್ಮ ಕನ್ನಡಕ್ಕೆ ಇಂಥಾ ದುಸ್ಥಿತಿ ಬರಬಾರದಿತ್ತು. ಇದು ನಮ್ಮ ರಾಜ್ಯ ಸರ್ಕಾರ ಹಾಗೂ ಅದರ ಶಿಕ್ಷಣ ಇಲಾಖೆ ಕನ್ನಡ ಹಾಗೂ ಕನ್ನಡ ಸರ್ಕಾರಿ ಶಾಲೆಗಳ ಬಗ್ಗೆ ಎಷ್ಟು ಅಗೌರವ ತೋರಿಸ್ತಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.

ಇದು ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲ್ಲೂಕಿನ ಲೋಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ದುಸ್ಥಿತಿ ನೋಡಿದಾಗ ಅಚ್ಚರಿಯಾಗುತ್ತೆ. ನಮ್ಮ ಶಿಕ್ಷಣ ಇಲಾಖೆ ಸತ್ತೇ ಹೋಗಿದೆಯಾ ಅನ್ನುವಷ್ಟು ಆಕ್ರೋಶ ಮೂಡುತ್ತೆ.

ಈ ಶಾಲೆಯ ಗೋಡೆಗಳು ಬಿರುಕು ಬಿದ್ದಿದ್ದು ಕುಸಿಯುವ ಹಂತದಲ್ಲಿವೆ. ಛಾವಣಿಯೆಲ್ಲಾ ಒಡೆದು ಹೋಗಿದೆ. ಮಳೆ ಬಂದ್ರೆ ನೀರೆಲ್ಲಾ ತರಗತಿಯೊಳಗೆ ನುಗ್ಗುತ್ತೆ.

ಇನ್ನು ತರಗತಿಯೊಳಗೆ ಹೋದ್ರೆ ತಲೆ ತಿರುಗುತ್ತೆ. ಅಷ್ಟೊಂದು ಅವ್ಯವಸ್ಥೆ ಅಲ್ಲಿದೆ. ಇದನ್ನ ವಿಜಯಟೈಮ್ಸ್‌ ಸಿಟಿಜನ್ ಜರ್ನಲಿಸ್ಟ್‌ ವಿವರಿಸಿದ್ದಾರೆ ನೋಡಿ.

ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಮಂದಿ ಈ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆ. ಅದ್ರಲ್ಲೂ ಕೊರೋನಾ ನಂತ್ರ ಆರ್ಥಿಕ ಸಂಕಷ್ಟಕ್ಕೊಳಗಾದ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಬಯಸುತ್ತಿದ್ದಾರೆ. ಆದ್ರೆ ಈ ಶಾಲೆಯ ದುಸ್ಥಿತಿಯಿಂದ ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

ಕೆ.ಆರ್‌ ಪೇಟೆ ಶಾಸಕ, ಯುವಜನಸೇವಾ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅವರಿಗೆ ಈ ಬಗ್ಗೆ ತಿಳಿದಿಲ್ವಾ? ಸಚಿವರಾಗಿ ನಿಮ್ಮ ಕ್ಷೇತ್ರದಲ್ಲಿ ಇಂಥಾ ಸರ್ಕಾರಿ ಶಾಲೆ ಇದೆ ಅನ್ನೋದಕ್ಕೆ ನಿಮಗೆ ನಾಚಿಕೆ ಆಗಲ್ವಾ ಅಂತ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈಗಲಾದ್ರೂ ಸಚಿವರು ಎಚ್ಚೆತ್ತುಕೊಂಡು ಶಿಕ್ಷಣ ಸಚಿವರ ಗಮನಕ್ಕೆ ತಂದು ಲೋಕನಹಳ್ಳಿ ಮಂದಿಗೆ ಸುಸಜ್ಜಿತ ಸರ್ಕಾರಿ ಶಾಲೆ ನಿರ್ಮಿಸಿಕೊಡಿ ಅನ್ನೋದು ವಿಜಯಟೈಮ್ಸ್‌ ಆಗ್ರಹವಾಗಿದೆ.

Exit mobile version