ಕೃಷಿ ಇಲಾಖೆಯಲ್ಲಿ ಮಹಾ ಮೋಸ !

krushi ilakhe

ರೈತರಿಗೆ ಕೊಡಬೇಕಾದ ಸಬ್ಸಿಡಿಯ ಕೃಷಿ ಸಾಮಾಗ್ರಿಗಳೆಲ್ಲಾ ಕಾಳ ಸಂತೆ ಸೇರುತ್ತಿದೆ. ಕೂಡ್ಲಿಗಿಯಲ್ಲಿ ರೈತರೇ ಕೃಷಿ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ರು.

Big scam in Agriculture department ! Agriculture officers sells subsidized product in black market.

ಕೃಷಿ ಇಲಾಖೆಯಲ್ಲಿ ರೈತರಿಗೆ  ನಡೀತಿದೆ ಮಹಾ ಮೋಸ ,ಕಾಳಸಂತೆ ಸೇರುತ್ತಿವೆ ರೈತರಿಗೆ ಸೇರಬೇಕಾದ ಕೃಷಿ ಉತ್ಪನ್ನಗಳು, ಕೃಷಿ ಅಧಿಕಾರಿಗಳಿಂದಲೇ ಲಂಚ ಪಡೆದು ಭಾರೀ ಹಗರಣ, ರಿಯಾಯಿತಿ ದರದ ಕೃಷಿ ವಸ್ತುಗಳ ಮಾರಾಟ ದಂಧೆ ಬಯಲು

 ಇವೆಲ್ಲಾ ಕೃಷಿ ಇಲಾಖೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಬೇಕಾದ ಹನಿ ನೀರಾವರಿ ಪೈಪ್‌ಗಳು. ಆದ್ರೆ ಈ ಪೈಪ್‌ಗಳೆಲ್ಲಾ ರೈತರಿಗೆ ಸಿಗದೆ ಕಾಳ ಸಂತೆ ಸೇರುತ್ತಿವೆ. ಕಾಳಸಂತೆಯಲ್ಲಿ ಅಕ್ರಮವಾಗಿ ಈ ಪೈಪುಗಳನ್ನು ಮಾರಾಟ ಮಾಡುತ್ತಿದ್ದಾಗ ರೈತರ ಕೈಗೇ ಸಿಕ್ಕ ಖದೀಮರು. ಹೌದು, ಈ ಘಟನೆ ನಡೆದಿರೋದು ವಿಜಯನಗರ  ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯಲ್ಲಿ. ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ದಾಖಲೆ ಇಲ್ಲದ, ನಕಲಿ ವ್ಯಕ್ತಿಗಳಿಗೆ ಅಕ್ರಮವಾಗಿ ರಿಯಾಯಿತಿ ದರದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾರಾಟ ಮಾಡಿರುವ ಘಟನೆ ಬಟಾ ಬಯಲಾಗಿದೆ.

ಇವರು ಆಂಧ್ರದವರು. ಇವರಿಗೆ ಜೋಡಿಗೆ ಹತ್ತು ಸಾವಿರ ರೂಪಾಯಿಯಂತೆ ಈ ಹನಿನೀರಾವರಿ ಪೈಪ್‌ಗಳನ್ನು ಮಾರಾಟ ಮಾಡಿದ್ದಾರೆ. ಇನ್ನೇನು ಇವರು ಈ ಪೈಪುಗಳನ್ನು ಸಾಗಿಸಬೇಕು ಅನ್ನುವಷ್ಟರ ಹೊತ್ತಿಗೆ ಗ್ರಾಮಸ್ಥರು ಮಾಲು ಸಮೇತ ಹಿಡಿದು ಭ್ರಷ್ಟ ಕೃಷಿ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದಾರೆ. ಇದು ಒಂದು ಉದಾಹರಣೆಯಷ್ಟೇ. ಈ ರೀತಿ ಕೃಷಿ ಇಲಾಖೆಯಲ್ಲಿ ಬರುವ ಪ್ರತಿ ವಸ್ತುಗಳನ್ನು ಭ್ರಷ್ಟ ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿ ರೈತರಿಗೆ ಭಾರೀ ಮೋಸ ಮಾಡುತ್ತಿದ್ದಾರೆ. ಬ್ರೋಕರ್‌ಗಳ ಮೂಲಕ ವ್ಯವಹಾರ ಕುದುರಿಸಿ ಭರ್ಜರಿ ಕಮಿಷನ್‌ ಹೊಡೆಯುತ್ತಿದ್ದಾರೆ ಅಧಿಕಾರಿಗಳು. ಇದಕ್ಕೆ ಬ್ರೇಕ್‌ ಹಾಕ್ಬೇಕು. ಇಲ್ಲದಿದ್ದರೆ ನಾಡಿನ ಸಂಪತ್ತು ಅನ್ಯರ ಪಾಲಾಗಿ, ನಮ್ಮ ಅನ್ನದಾತ ಬೀದಿ ಪಾಲಾಗೋದು ಗ್ಯಾರಂಟಿ.

Exit mobile version