ಹಲಾಲ್, ಧ್ವನಿವರ್ಧಕ ನಿಷೇಧದ ಹಿಂದೆ ಸಿಎಂ ಬೊಮ್ಮಾಯಿ ಸರ್ಕಾರದ ಕೈವಾಡವಿದೆ : ಸಿದ್ದರಾಮಯ್ಯ!

Basavaraj bommai

ಕರ್ನಾಟಕದ(Karnataka) ಮಾಜಿ ಮುಖ್ಯಮಂತ್ರಿ(Former ChiefMinister) ಸಿದ್ದರಾಮಯ್ಯ(Siddaramaiah) ಅವರು ಹಲಾಲ್ ಮಾಂಸ ನಿಷೇಧ(Halal Ban) ಮತ್ತು ಮಸೀದಿಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ಬಳಸುವ ಧ್ವನಿವರ್ಧಕ(Mike) ನಿಷೇಧದ ಇತ್ತೀಚಿನ ಪ್ರಮುಖ ವಿಷಯದ ಹಿಂದೆ ರಾಜ್ಯ ಸರ್ಕಾರ ಮತ್ತು ರಾಜ್ಯದ ಮುಖ್ಯಮಂತ್ರಿ(Karnataka CM) ಬಸವರಾಜ ಬೊಮ್ಮಾಯಿ(Basavaraj Bommai) ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಹೌದು, ಆರ್‌ಎಸ್‌ಎಸ್ ಮತ್ತು ಭಜರಂಗದಳ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ನೀವು ಭಾವಿಸುತ್ತೀರಾ? ಇದರ ಹಿಂದೆ ಸರ್ಕಾರ ಮತ್ತು ಸಿಎಂ ಕೈವಾಡವಿದೆ. ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಆದರೆ, ಆಡಳಿತಾರೂಢ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ತಳ್ಳಿಹಾಕಿದೆ. ಶಬ್ದ ಮಟ್ಟ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ಆರೋಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನವರು ಕಪಟಿಗಳು.

ಹಿಜಾಬ್ ಸಮಸ್ಯೆಯ ಸಂದರ್ಭದಲ್ಲಿ ಅವರು ಏಕೆ ಮೌನವಾಗಿದ್ದರು? ಅವರೇ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಲಾಲ್ ಮಾಂಸವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ ನಂತರ, “ಬಲಪಂಥೀಯ ಗುಂಪುಗಳು ಈಗ ಮಸೀದಿಯಲ್ಲಿ ಬಳಸುವ ಮೈಕ್ ನಿಷೇಧಿಸಬೇಕೆಂದು ಆಗ್ರಹಿಸುತ್ತಿವೆ, ಇದರಿಂದ ಅವರ ನಿದ್ದೆ ಕೆಡಿಸಿದ್ದು, ವಿದ್ಯಾರ್ಥಿಗಳಿಗೆ ಬೆಳಗ್ಗೆ ಓದಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ” ಎಂದು ಸಿದ್ದರಾಮಯ್ಯನವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version