ಬಸವರಾಜ್‌ ಬೊಮ್ಮಾಯಿ ಮಗ ಮತ್ತು ಸೊಸೆಗೂ ಕೊರೊನಾ

bommai

ಬೆಂಗಳೂರು ಜ 12 : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಕೊರೊನಾ ಪಾಸಿಟಿವ್‌ ಬಂದ ಹಿನ್ನಲೆಯಲ್ಲಿ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ನಂತರ  ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಮಂಗಳವಾರ ಹಳೆ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು.

ಕೊರೊನಾ ಹಿನ್ನಲೆಯಲ್ಲಿ ಸಿಎಂ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮಣಿಪಾಲ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ತೆರಳಿದ್ದರು. ಅಲ್ಲಿ ವೈದ್ಯರು ನೀಡಿರುವ ಸಲಹೆ ಮೇರೆಗೆ ತಪಾಸಣೆಗೆ ಮತ್ತು ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂಗೆ ಕೊರೋನಾ ಪಾಸಿಟಿವ್ ಇದ್ದು, ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ನಿನ್ನೆ ಸಂಜೆ ಗೊತ್ತಾಗಿತ್ತು. ನಂತರ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಪ್ರಾಥಮಿಕವಾಗಿ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಬಂದಿರುವ ಹಿನ್ನಲೆಯಲ್ಲಿ ಸಿಎಂ ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆಯೋ, ಇಲ್ಲ ಚಿಕಿತ್ಸೆ ಪಡೆದು ಬಂದು ಹೋಂ ಕ್ವಾರಂಟೈನ್ ಗೆ ಒಳಗಾಗುತ್ತಾರೆಯೋ ಸ್ಪಷ್ಟವಾಗಿಲ್ಲ

ಸಿಎಂಗೆ ಪಾಸಿಟಿವ್‌ ಬಂದ ಹಿನ್ನಲೆಯಲ್ಲಿ ಇನ್ನು  ಸಿಎಂ ಬೊಮ್ಮಾಯಿ ಅವರ ಪುತ್ರ ಭರತ್ ಮತ್ತು ಸೊಸೆಗೂ ಕೊರೋನಾ ಪಾಸಿಟಿವ್ ಬಂದಿದ್ದು, ಅವರು ಕೂಡ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ.  

Exit mobile version