ಸಿಎಂಎಸ್-01 ಉಡಾವಣೆ ಮತ್ತೊಂದು ಸಾಧನೆಯತ್ತ ಇಸ್ರೋ

ನವದೆಹಲಿ, ಡಿ. 17: ಇಂದು ಮಧ್ಯಾಹ್ನ ದೇಶದ 42ನೇ ಸಂವಹನ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಉಡಾವಣೆ ಮಾಡಿದೆ. ಸಿಎಂಎಸ್-01 ಎಂಬುದು ಇದರ ಹೆಸರಾಗಿದ್ದು, ಆವರ್ತನ ಸೆಕ್ಟ್ರಂನ ವಿಸ್ತರಿತ-ಸಿ ಬ್ಯಾಂಡ್‍ನಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಇದನ್ನು ಉಡಾಯಿಸಲಾಗಿದೆ. ಇದರ ವ್ಯಾಪ್ತಿ ಭಾರತದ ಪ್ರಮುಖ ಭೂಭಾಗವಾದ ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಮೊದಲು ಜಿಸ್ಯಾಟ್ ಮತ್ತು ಇನ್ಸಾಟ್ ಸರಣಿಯ ನಂತರ ಭಾರತವು ಹೊಸ ಸಂವಹನ ಉಪಗ್ರಹಗಳ ಸರಣಿಯಲ್ಲಿ ಇದು ಮೊದಲ ಉಪಗ್ರಹವಾಗಲಿದೆ.ಮತ್ತು ಸಿಎಂಎಸ್-01 ಸಂವಹನ ಉಪಗ್ರಹ ಉಡಾವಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಉಡಾವಣೆಗೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ತಿಳಿಸಿದೆ.

Exit mobile version