ಕೋವಿಡ್ ಲಸಿಕೆ ಪಡೆಯಲು “ಕೋ-ವಿನ್” ಆನ್ಲೈನ್ ನೋಂದಣಿ ಕಡ್ಡಾಯವಲ್ಲ: ಆರೋಗ್ಯ ಸಚಿವಾಲಯ

ಹೊಸದಿಲ್ಲಿ,ಜೂ.16: ಕೋವಿಡ್-19 ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ತೆರಳಿ ಸ್ಥಳದಲ್ಲೇ ನೋಂದಣಿ ಮಾಡಿಸಿ, ಲಸಿಕೆ ಪಡೆಯಬಹುದು ಎಂದು ತಿಳಿಸಿದೆ.

ಕೊರೊನಾ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಇರುವ ಹಲವು ಮಾರ್ಗಗಳಲ್ಲಿ ಕೋವಿನ್ ಪ್ಲಾಟ್ ಫಾರಂ ಸಹ ಒಂದು. ಅಲ್ಲದೇ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಲು ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಕೊಳೆಗೇರಿಗಳಲ್ಲಿ ಸ್ಥಳದಲ್ಲೇ ಫಲಾನುಭವಿಗಳನ್ನು ನೋಂದಣಿ ಮಾಡಿಸುತ್ತಿದ್ದಾರೆ.

ಜೂ.13ರವರೆಗೆ ಕೋವಿನ್ ಪ್ಲಾಟ್ ಫಾರಂನಲ್ಲಿ ನೋಂದಣಿ ಮಾಡಿಕೊಂಡಿರುವ 28.36 ಕೋಟಿ ಫಲಾನುಭವಿಗಳಲ್ಲಿ 16.45(ಶೇ.58%) ಫಲಾನುಭವಿಗಳು ಸ್ಥಳದಲ್ಲೇ ನೋಂದಣಿ ಮಾಡಿಸಿದ್ದಾರೆ. ಇನ್ನೂ ಕೋವಿನ್ ಪ್ಲಾಟ್ ಫಾರಂನಲ್ಲಿ ಜೂ.13ರವರೆಗೆ ನೀಡಲಾಗಿರುವ 24.84 ಕೋಟಿ ವ್ಯಾಕ್ಸಿನ್ ಡೋಸ್ ನಲ್ಲಿ 19.84 (ಶೇ.80) ರಷ್ಟು ವ್ಯಾಕ್ಸಿನ್ ಅನ್ನು ಆನ್-ಸೈಟ್ ನೋಂದಣಿ ಮೂಲಕ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Exit mobile version