ಕೆಫೆ ಕಾಫಿ ಡೇ ಸಂಸ್ಥೆಗೆ ಹೊಸ ಸಾರಥಿ; ಮಾಳವಿಕ ಹೆಗ್ಡೆ ನೇಮಕ

ಬೆಂಗಳೂರು, ಡಿ. 08 : ಕೆಫೆ ಕಾಫಿ ಡೇ ಸಂಸ್ಥೆ ನೂತನ ಸಿಇಒ ಆಗಿ ಮಾಳವಿಕಾ ಹೆಗ್ಡೆ ನೇಮಕವಾಗಿದ್ದಾರೆ. ಕಾಫಿ ಡೇ ಸಂಸ್ಥೆ ಸಂಸ್ಥಾಪಕ ಜಿ.ವಿ. ಸಿದ್ಧಾರ್ಥ ಅವರ ನಿಧನದ ಬಳಿಕ ಸಂಸ್ಥೆ ಆಡಳಿತ ಮಂಡಳಿ ಸದಸ್ಯ, ಎಸ್. ವಿ. ರಂಗನಾಥ್ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು.

ಆದರೆ ಇದೀಗ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್‌ನ ಸಿಇಒ ಆಗಿ, ಸಿದ್ದಾರ್ಥ್ ಅವರ ಪತ್ನಿ ಮಾಳವಿಕಾ ಹೆಗ್ಡೆ ನೇಮಕವಾಗಿದ್ದಾರೆ. ಉಳಿದಂತೆ ಕಂಪನಿಯ ನಿರ್ದೇಶಕ ಮಂಡಳಿಯು ಸಿ.ಎಚ್. ವಸುಂಧರಾ ದೇವಿ, ಗಿರಿ ದೇವನೂರ್, ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಗಿದೆ.

Exit mobile version