ಉಪಯುಕ್ತ ಮಾಹಿತಿ: ಬೆಳಿಗ್ಗೆ ಟೀ-ಕಾಫಿ, ಸ್ವೀಟ್‌ ಬಿಸ್ಕೆಟ್ ತಿಂದ್ರೆ ಏನಾಗುತ್ತೆ ಗೊತ್ತಾ?

Health Tips: ಎಷ್ಟೋ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಸ್ವೀಟ್ಸ್ (Coffee-Sweets Side Effects) ತಿನ್ನುವ ಅಭ್ಯಾಸವಿದ್ದರೆ. ಇನ್ನೂ ಕೆಲವರಿಗೆ ಎಷ್ಟು ಪ್ರಮಾಣದಲ್ಲಿ ತಿನ್ನಬಹುದು ಎನ್ನುವುದು

ತಿಳಿದಿರುವುದಿಲ್ಲ. ಈ ಅಭ್ಯಾಸ ನಿಜಕ್ಕೂ ಒಳ್ಳೆಯದಾ? ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಮುಂಬೈನ ಪ್ರತಿಷ್ಠಿತ ಹಿರಾನಂದನಿ ಹಾಸ್ಪಿಟಲ್ (Hiranandani Hospital)

ಹಿರಿಯ ಪೌಷ್ಟಿಕಾಂಶ ತಜ್ಞರಾಗಿರುವ ಡಾ. ರಿಚ ಆನಂದ್ India.com ಜೊತೆಗೆ ನಡೆದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಆಹಾರ ಸೇವಿಸದೆ ಸಿಹಿ ಪದಾರ್ಥಗಳನ್ನು ತಿಂದರೆ ಅದು ನೇರವಾಗಿ ಪ್ಯಾಂಕ್ರಿಯಾಸ್ ಗ್ರಂಥಿಯ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚಾದ ಬ್ಲಡ್ ಶುಗರ್ ಲೆವೆಲ್

(Blood Sugar Level) ಅನ್ನು ನಿರ್ವಹಣೆ ಮಾಡಿಕೊಳ್ಳಲು ಇನ್ಸುಲಿನ್ (Insulin) ಅನ್ನು ಹೆಚ್ಚಾಗಿ ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತದೆ. ಇದರಿಂದ ಶಕ್ತಿ ಮತ್ತು ಚೈತನ್ಯ ಹೆಚ್ಚಾಗುತ್ತದೆ ಆದರೆ ಆ

ದಿನ ಬಿಟ್ಟು ಬೇರೆ ದಿನ ವಿಪರೀತ ಸುಸ್ತು ಮತ್ತು (Coffee-Sweets Side Effects) ಆಯಾಸ ಎದುರಾಗುತ್ತದೆ.

ಬೆಳಗಿನ ಸಮಯದಲ್ಲಿ ಮೊದಲು ಆಹಾರವಾಗಿ ಸಿಹಿ ಪದಾರ್ಥ ಸೇವಿಸುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳು ಸಮರ್ಪಕ ಪ್ರಮಾಣದಲ್ಲಿ ಸಿಗದಂತೆ ಆಗುತ್ತವೆ. ಇದರಿಂದ ಪ್ರೋಟೀನ್, ನಾರಿನ

ಅಂಶ ಮತ್ತು ವಿಟಮಿನ್ (Vitamin) ಅಂಶಗಳ ಕೊರತೆ ಎದುರಾಗುತ್ತದೆ. ಒಳ್ಳೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿಗಳು, ಕಾಳುಗಳು, ಬೀಜಗಳು,ಹಣ್ಣು, ಇವುಗಳನ್ನು ಬಿಟ್ಟು ನಿಮ್ಮ

ಆಯ್ಕೆ ಒಂದು ವೇಳೆ ಸಿಹಿ ಪದಾರ್ಥ ಆದರೆ ಇಡೀ ದಿನ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಲು ಕಷ್ಟವಾಗುತ್ತದೆ.

ಹೀಗಾಗಿ ಈ ಕೆಳಗಿನ ಅಡ್ಡ ಪರಿಣಾಮಗಳನ್ನು ಈ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ನಮಗೆ ಹೊಟ್ಟೆ ಹಸಿವಾಗಿದ್ದಾಗ ತಕ್ಷಣ ಚಾಕಲೇಟ್ (Chocolate) ಅಥವಾ ಸಿಹಿಪದಾರ್ಥ ತಿಂದು ಬಿಡುತ್ತೇವೆ

ಆದರೆ ಆಗಿನ ಸಮಯಕ್ಕೆ ಅದು ಸರಿಯಾದರೂ ನಂತರ ಅದು ಸುಸ್ತಾದಾಗ ಸಿಹಿ ತಿಂದರೆ ಸರಿ ಹೋಗುತ್ತದೆ ಎನ್ನುವ ಭಾವನೆ ಇರುತ್ತದೆ. ಆದರೆ ಇದು ತಾತ್ಕಾಲಿಕ ವಾಗಿರುತ್ತದೆ. ಏಕೆಂದರೆ ಆನಂತರದಲ್ಲಿ

ಮತ್ತಷ್ಟು ಹೊಟ್ಟೆ (Stomach) ಹಸಿವು ಉಂಟಾಗಿ ಇನ್ನಷ್ಟು ಸುಸ್ತು ಮತ್ತು ಆಯಾಸ ಎದುರಾಗುತ್ತದೆ. ಹೀಗಾಗಿ ಬೆಳಿಗ್ಗೆ ಅಥವಾ ಕಾಲಿ ಹೊಟ್ಟೆಯಲ್ಲಿ ಸ್ವೀಟ್ಸ್ ಸೇವಿಸುವುದು ಉತ್ತಮವಲ್ಲ.

ನಿಮ್ಮ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ (Carbohydrates, Protien) ಯುಕ್ತ ಕಾಳುಗಳು ಮತ್ತು ಆರೋಗ್ಯಕರ ಅಂಶ ಹೊಂದಿರುವ ಆಹಾರಗಳ ಜೊತೆಗೆ ಡ್ರೈ ಫ್ರೂಟ್ಸ್ (Dry Fruits),

ಮೊಟ್ಟೆ, ಕೋಳಿ ಮಾಂಸ ,ಮೊಸರು ಇವುಗಳನ್ನು ಸೇವಿಸಿದರೆ. ಇದರಿಂದ ಪೌಷ್ಟಿಕಾಂಶಗಳು ಯಾವಾಗಲೂ ದೇಹದಲ್ಲಿ ಸಮತೋಲನ ವಾಗಿಇರುತ್ತದೆ ಅಲ್ಲದೆ ಪದೇ ಪದೇ ಸುಸ್ತು ಮತ್ತು ಆಯಾಸ ಆಗುವುದನ್ನು

ತಡೆಗಟ್ಟುತ್ತದೆ .

Exit mobile version