ಪೋಷಕರೇ ಗಮನಿಸಿ: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಶೀತದ ಸಿರಪ್ ಬ್ಯಾನ್

New Delhi: ಭಾರತದ ಔಷಧ ನಿಯಂತ್ರಕವು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ (Coldsyrup is banned in India) ಶೀತ ನಿರೋಧಕ ಸಿರಪ್ ನೀಡುವಂತಿಲ್ಲ

ಎಂದು ತಿಳಿಸಿದ್ದು, ಕೆಮ್ಮಿನ ಸಿರಪ್​​ ನೀಡಿದ ಬಳಿಕ ಜಾಗತಿಕವಾಗಿ 141 ಮಕ್ಕಳು ಮೃತಪಟ್ಟಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಔಷಧ ನಿಯಂತ್ರಕ (Drug Controller) ಈ ಕ್ರಮ

ಕೈಗೊಂಡಿದೆ. ಔಷಧ ತಯಾರಕರು ‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್’ ಅನ್ನು (Fixed Drug Combination) 4 ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಉತ್ಪನ್ನಗಳ ಮೇಲೆ

ಲೇಬಲ್ ಅಂಟಿಸುವಂತೆ ಔಷಧ ತಯಾರಕರಿಗೆ ಔಷಧ ನಿಯಂತ್ರಕ ಡಿಸೆಂಬರ್ 18ರಂದು (Coldsyrup is banned in India) ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ಶೀತ ನಿರೋಧಕ ಔಷಧವನ್ನು (Cold medicine) ಮಕ್ಕಳಿಗೆ ​ ನೀಡುವ ಕುರಿತು ಚರ್ಚೆಯಾಗುತ್ತಿದ್ದು, ಶೀತ ನಿರೋಧಕ ಔಷಧದ ಸಂಯೋಜನೆಯ (ಫಿಕ್ಸೆಡ್ ಡ್ರಗ್ ಕಾಂಬಿನೇಷನ್) ಬಗ್ಗೆಯೂ

ಚರ್ಚೆಗಳಾಗುತ್ತಿವೆ. ಸದ್ಯದ ಮಟ್ಟಿಗೆ ಚಿಕ್ಕಮಕ್ಕಳಿಗೆ ಅನುಮೋದಿತವಲ್ಲದ ಈ ಸಿರಪ್​ ಅನ್ನು ನೀಡಬಾರದು ಎಂದು ಔಷಧ ನಿಯಂತ್ರಕ ಹೇಳಿದೆ.

ಕಳೆದ ವರ್ಷ ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್‌ನಲ್ಲಿ (Gambia, Uzbekistan and Cameroon) ಕನಿಷ್ಠ 141 ಮಕ್ಕಳು ಸಿರಪ್​ ಸೇವನೆಯ ಪರಿಣಾಮ ಮೃತಪಟ್ಟಿದ್ದರು.

2019ರಿಂದಲೂ ಕಫ್ ಸಿರಪ್​ಗಳಲ್ಲಿ ವಿಶಾಂಷ ಇರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಮಕ್ಕಳ ಸಾವಿನ ವಿಚಾರ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು.

ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ರೋಗಲಕ್ಷಣಗಳ ಚಿಕಿತ್ಸೆಗಾಗಿ ಪ್ರತ್ಯಕ್ಷವಾದ ಕೆಮ್ಮಿನ ಸಿರಪ್‌ಗಳು

ಅಥವಾ ಔಷಧಗಳ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ. ಫಿಕ್ಸೆಡ್ ಡ್ರಗ್ ಕಾಂಬಿನೇಷನ್’ ಎಂಬುದು ಕ್ಲೋರ್ಫೆನಿರಮೈನ್ ಮೆಲೇಟ್ ಮತ್ತು ಫಿನೈಲ್ಫ್ರಿನ್ ಅನ್ನು (Chlorpheniramine Maleate and

Phenylephrine) ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಶೀತದ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಿರಪ್ ಅಥವಾ ಮಾತ್ರೆಗಳಲ್ಲಿ ಬಳಸಲಾಗುತ್ತದೆ.

ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ:
ಕೊರೊನಾ ವೈರಸ್​​ನ ಒಮಿಕ್ರಾನ್ ಉಪತಳಿ ಜೆಎನ್​​1 (JN.1) ಪರಿಣಾಮ ದೇಶದಲ್ಲಿ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾಗುವ ಆತಂಕದ ನಡುವೆಯೇ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ

ಹೆಚ್ಚಳವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ (Chief Scientist Soumya Swaminathan) ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಪ್ರಕರಣಗಳ

ಸಂಖ್ಯೆ ಹೆಚ್ಚಾದಂತೆಲ್ಲ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಬಹುದು ಹಾಗಾಗಿ ಶೀತವೆಂದು ನಿರ್ಲಕ್ಷಿಸಬೇಡಿ.

ಇದನ್ನು ಓದಿ: ಈ ಲಕ್ಷಣಗಳಿದ್ದರೆ ಹೊಟ್ಟೆಯ ಕ್ಯಾನ್ಸರ್ ಇರಬಹುದು ಎಚ್ಚರ..!

Exit mobile version