ಕೊಹ್ಲಿ, ದೋನಿ ಪುತ್ರಿಯರ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಿ : ಮಹಿಳಾ ಆಯೋಗ

New Delhi : ಭಾರತೀಯ ಸ್ಟಾರ್‌ ಆಟಗಾರರಾದ ಕೊಹ್ಲಿ(comments Kohli Dhoni’s daughters), ಧೋನಿ ಪುತ್ರಿಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅಶ್ಲೀಲ ಕಮೆಂಟ್ಸ್‌ಗಳನ್ನು ಖಂಡಿಸಿ ಮಾತನಾಡಿರುವ

ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ,ಅಸಭ್ಯವಾಗಿ,ಅಶ್ಲೀಲವಾಗಿ ಕಮೆಂಟ್‌ ಮಾಡುವವರ ವಿರುದ್ಧ ಮೊದಲು ಎಫ್‌ಐಆರ್‌ ದಾಖಲಿಸಬೇಕು ಎಂದು ಗುಡುಗಿದ್ದಾರೆ.

ಭಾರತೀಯ ಸ್ಟಾರ್‌ ಕ್ರಿಕೆಟಿಗರಾದ ಎಂ.ಎಸ್ ಧೋನಿ (MS Dhoni) ಮತ್ತು ವಿರಾಟ್ ಕೊಹ್ಲಿ ಅವರ ಪುತ್ರಿಯರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಕಮೆಂಟ್ಸ್‌ಗಳ

ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪೊಲೀಸರಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಸಿಡಿದೆದ್ದು ಮಾತನಾಡಿರುವ ಅವರು, ನೀವು ಆಟಗಾರನನ್ನು ಇಷ್ಟಪಡದಿದ್ದರೆ, ಅವರ ಹೆಣ್ಣು ಮಕ್ಕಳನ್ನು ಯಾಕೆ ನಿಂದಿಸುತ್ತೀರಾ?? ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಹಲವು ಟ್ವೀಟ್ಗಳ ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡಿರುವ ಸ್ವಾತಿ ಮಲಿವಾಲ್ ಅವರು, ವಮಿಕಾ – ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma)

ಅವರ ಎರಡು ವರ್ಷದ ಮಗಳು ಮತ್ತು ಎಂ.ಎಸ್ ಧೋನಿ ಮತ್ತು ಸಾಕ್ಷಿ(Sakshi Dhoni)

ಅವರ 7 ವರ್ಷದ ಮಗಳು ಝಿವಾ (Ziva Dhoni) ಅವರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಟ್ವೀಟ್‌ ಮಾಡಿದ್ದಾರೆ.

ಕೆಲವು ಖಾತೆಗಳು ದೇಶದ ಇಬ್ಬರು ದೊಡ್ಡ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಧೋನಿ ಅವರ ಪುತ್ರಿಯರ ಫೋಟೊಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅಶ್ಲೀಲ ಕಾಮೆಂಟ್ಗಳನ್ನು ಮಾಡುತ್ತಿವೆ.

2 ವರ್ಷದ ಮತ್ತು 7 ವರ್ಷದ ಮಗುವಿನ ಬಗ್ಗೆ ಇದೆಂಥ ಅಸಹ್ಯ ಸಂಗತಿಗಳು? ನೀವು ಆಟಗಾರನನ್ನು ಇಷ್ಟಪಡದಿದ್ದರೆ,

ಅವರ ಮಗಳನ್ನು ಯಾಕೆ ನಿಂದಿಸುತ್ತೀರಾ? ಈ ರೀತಿ ಅಶ್ಲೀಲ ಕಮೆಂಟ್‌ ಹಾಕುವವರ ವಿರುದ್ಧ ಕೂಡಲೇ ಎಫ್ಐಆರ್ (comments Kohli Dhoni’s daughters) ದಾಖಲಿಸಬೇಕು ಎಂದು ಪೊಲೀಸರಿಗೆ ಸ್ವಾತಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: https://vijayatimes.com/ajiths-film-overtook-warisu/

ವಮಿಕಾ (Vamika Kohli) ವಿರುದ್ಧ ದ್ವೇಷದ ರೀತಿಯಲ್ಲಿ ಮಾಡಿದ್ಧ ಕಮೆಂಟ್‌ ಅನ್ನು ಮಹಿಳಾ ಆಯೋಗ ಗಮನಿಸಿದ್ದು, ಇದೇ ಮೊದಲಲ್ಲ. ಈ ಹಿಂದೆ ಮಹೇಂದ್ರ ಸಿಂಗ್‌ ಧೋನಿ ಅವರ ಪುತ್ರಿ ವಿರುದ್ಧವೂ ಇದೇ ರೀತಿಯ ಅಶ್ಲೀಲ ಕಮೆಂಟ್‌ ವ್ಯಕ್ತವಾಗಿತ್ತು.

ಸದ್ಯ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌, ಶೀಘ್ರವೇ ಇಂಥವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು ಎಂದು ಟ್ವೀಟ್‌ ಮಾಡುವ ಮುಖೇನ ಪೊಲೀಸರಿಗೆ ತಿಳಿಸಿದ್ದಾರೆ. ಕಮೆಂನ್ಟ್ಸ್

Exit mobile version