ಬಿಜೆಪಿಯ(BJP) ಭ್ರಷ್ಟಾಚಾರಗಳ ಫೈಲ್ಸ್ಗಳು(Corruption Files) ಆಳ ಮತ್ತು ಅಗಲ ಅಳತೆಗೂ ಮೀರಿದ್ದು. ಕಾರ್ಮಿಕ ಇಲಾಖೆಯಲ್ಲಿ ಟೂಲ್ ಕಿಟ್ ಖರೀದಿಯಲ್ಲಿ ನಡೆದ ಅಕ್ರಮವನ್ನು ಮುಚ್ಚಿ ಹಾಕಲಾಯ್ತು. ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil) ಅವರ ವಿರುದ್ಧದ ರೋಲ್ಕಾಲ್ ಆರೋಪವನ್ನು ಅದುಮಿ ಹಾಕಲಾಯ್ತು. ಕರೋನಾ ಕಾಲದ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ತನಿಖೆಯೇ ಆಗಲಿಲ್ಲ. ಮಾನ್ಯ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ, ಇಂದು ತೋಟಗಾರಿಕಾ ಸಚಿವ ಮುನಿರತ್ನರ ಕ್ಷೇತ್ರದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದೀರಿ.

ಮುನಿರತ್ನರ ವಿರುದ್ಧ ಕಮಿಷನ್(Commission) ಕಿರುಕುಳದ ದೂರು ಬಂದರೂ ಕ್ರಮ ಕೈಗೊಳ್ಳದಿರುವ ತಮ್ಮ ನಡೆ ಭ್ರಷ್ಟಾಚಾರಕ್ಕೆ ಮೌನ ಸಮ್ಮತಿಯೇ? ಅಥವಾ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಯೇ? ಎಂದು ರಾಜ್ಯ ಕಾಂಗ್ರೆಸ್(State Congress) ಪ್ರಶ್ನಿಸಿದೆ. ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಕಾಂಗ್ರೆಸ್, ನಮ್ಮದು ಪ್ರಾಮಾಣಿಕ, ಪಾರದರ್ಶಕ ತನಿಖೆ ಎನ್ನುತ್ತಿರುವ ಬೊಮ್ಮಾಯಿ ಅವರೇ, ಬಿಟ್ ಕಾಯಿನ್ ಹಗರಣದ ತನಿಖೆ ಎಲ್ಲಿಯವರೆಗೂ ಬಂದಿದೆ? ಆರೋಪಿ ಶ್ರೀಕಿ ಎಲ್ಲಿ ಹೋದ?
‘ಬಿಟ್ ಕಾಯಿನ್’(Bitcoin) ಪದ ಕೇಳಿದಾಕ್ಷಣ ನೀವು ಹಾಗೂ ನಿಮ್ಮ ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್(Nalin Kumar Kateel) ಮೌನಕ್ಕೆ ಜಾರುವುದೇಕೆ? ಎಲ್ಲಿ ನಿಮ್ಮ ಪಾರದರ್ಶಕತೆ? ಎಂದು ವ್ಯಂಗ್ಯವಾಡಿದೆ. ಮಾನ್ಯ ಪ್ರಧಾನಿಗಳೇ, ಹಿಂದೊಮ್ಮೆ ಸಚಿವ ಮುನಿರತ್ನರನ್ನು ಭ್ರಷ್ಟ ಎಂದು ಹೇಳಿದ್ದಿರಿ, ಈಗ ನಿಮ್ಮ ಹೇಳಿಕೆಗೆ ಪೂರಕವೆಂಬಂತೆ ಅವರ ವಿರುದ್ಧ ದೂರು ನಿಮ್ಮ ಮುಂದಿದೆ. ‘ನಾ ಖಾನೆದುಂಗಾ’ ಎನ್ನುತ್ತಿದ್ದ ತಾವು ಈಗ ಕೈಗೊಳ್ಳುವ ಕ್ರಮವೇನು? ಭ್ರಷ್ಟಾಚಾರಕ್ಕೆ ಹಾಗೂ 40% ಕಮಿಷನ್ಗೆ ಬೆಂಬಲಿಸುತ್ತೀರಾ? ಕ್ರಮ ಕೈಗೊಳ್ಳುವಿರಾ?

ತೋಟಗಾರಿಕಾ ಸಚಿವ ಮುನಿರತ್ನರವರ ಕಮಿಷನ್ ಲೂಟಿಯ ಬಗ್ಗೆ ಪ್ರಧಾನಿಗೆ ಪತ್ರ ತಲುಪಿದೆ, ನಿಮಗೂ ಬರಲಿಲ್ಲವೇ? ಎಂದು ಪ್ರಶ್ನಿಸಿದೆ. ಬೊಮ್ಮಾಯಿ ಅವರೇ? ಹನಿ ನೀರಾವರಿ ವಿತರಕರ ಸಂಘ ನಿಮಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದ ತಾವು, ಭ್ರಷ್ಟಾಚಾರದ ರಕ್ಷಕನಂತೆ ನಿಂತಿದ್ದೀರಿ. ಈ ಆರೋಪಕ್ಕೆ ತನಿಖೆ ನಡೆಸಿ ‘ಪಾರದರ್ಶಕತೆ’ ನಿರೂಪಿಸುತ್ತೀರಾ? 40% ಸರ್ಕಾರದ ಮತ್ತೊಬ್ಬ ಸಚಿವರ ವಿರುದ್ಧ ಪ್ರಧಾನಿಗೆ ಮತ್ತೊಂದು ಪತ್ರ. ಸರ್ಕಾರದ ಭ್ರಷ್ಟರ ವಿರುದ್ಧದ ಪತ್ರಗಳಿಂದಲೇ ಪ್ರಧಾನಿ ಕಚೇರಿಯ ‘ಡ್ರಾಪ್ ಬಾಕ್ಸ್’ ತುಂಬಲಿದೆ.
‘ನಾ ಖಾನೆದುಂಗಾ’ ಎನ್ನುತ್ತಿದ್ದ ಪ್ರಧಾನಿಗಳು ಇಷ್ಟೆಲ್ಲ ಪತ್ರಗಳು ಹೋದರೂ ‘ನಾ ಬಾತ್ ಕರೂಂಗಾ’ ಎಂಬಂತೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದೆ.