ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಆಂಬ್ಯುಲೆನ್ಸ್ ಅನ್ನು ಸೇರಿಸಬೇಕು : ಕಾಂಗ್ರೆಸ್‌

Ahemdabad : ಪ್ರಧಾನಿ ಮೋದಿ (Congress Ambulance Statement) ಅವರ ಚುನಾವಣಾ ರ್ಯಾಲಿಗಳಲ್ಲಿ ಆಂಬ್ಯುಲೆನ್ಸ್‌ನ ಪುನರಾವರ್ತಿತ ಆಗಮನದ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಗೇಲಿ ಮಾಡಿದ ಕಾಂಗ್ರೆಸ್,

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಆಂಬ್ಯುಲೆನ್ಸ್ (Congress Ambulance Statement) ಅನ್ನು ಸೇರಿಸಬೇಕು‌ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌ (Tweet) ಮೂಲಕ ಗೇಲಿ ಮಾಡಿರುವ, ಭಾರತೀಯ ಯುವ ಕಾಂಗ್ರೆಸ್ (IYC) ಮುಖ್ಯಸ್ಥರಾಗಿರುವ ಶ್ರೀನಿವಾಸ್ ಬಿವಿ, ನನಗೆ 2 ಬೇಡಿಕೆಗಳಿವೆ, 1. ಪ್ರಧಾನಿಯವರ ಭದ್ರತೆಯಲ್ಲಿ ಈ ಭಾರಿ ಭದ್ರತಾ ಲೋಪವನ್ನು ಯಾವುದೇ ಪಕ್ಷಪಾತವಿಲ್ಲದೆ ತನಿಖೆ ಮಾಡಬೇಕು.

ಯಾಕೆಂದರೆ ಅವರು ಚುನಾವಣೆ ಸಮಯದಲ್ಲಿ ಎಲ್ಲಿಗೆ ಹೋದರೂ ಆಂಬ್ಯುಲೆನ್ಸ್‌ಗಳು ಕಾಣಿಸಿಕೊಳ್ಳುತ್ತವೆ. ಅದೂ ಯಾವುದೇ ಭದ್ರತಾ ತಪಾಸಣೆಯಿಲ್ಲದೆ. ಇದು ಕೇವಲ ಸಹಸಂಭವವಾಗಲಾರದು.

ಇನ್ನು ನನ್ನ 2ನೇ ಬೇಡಿಕೆ ಎಂದರೆ, ಬಿಜೆಪಿಯ (BJP) ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಆಂಬ್ಯುಲೆನ್ಸ್ ಅನ್ನು ಸೇರಿಸಬೇಕು ಎಂದು ಶ್ರೀನಿವಾಸ್ ಬಿವಿ ಟ್ವೀಟ್ ಮಾಡಿದ್ದಾರೆ.

https://fb.watch/h9E3OEdkIL/ ಚಿಂತಾಮಣಿ : ‘ಖಾತೆ ವಿಳಂಬವಾಗಿದ್ದಕ್ಕೆ ಪೌರಾಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು’

ಇನ್ನು ತಮ್ಮ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ರೋಡ್‌ ಶೋನಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿತು.

ಆದಾಗ್ಯೂ, ಆಂಬ್ಯುಲೆನ್ಸ್‌ನ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಧಾನಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದು ಇದೇ ಮೊದಲಲ್ಲ.

ಹೀಗಾಗಿ ಇದೊಂದು ಪೂರ್ವನಿರ್ಧರಿತ ಪ್ರಚಾರದ ಗಿಮಿಕ್‌ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ. ಟ್ವಿಟರ್‌ನಲ್ಲಿ “ಬೆಂಗಾವಲು ಪಡೆಯಲ್ಲದ ವಾಹನವು,

ಬೆಂಗಾವಲು ವಾಹನವನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನವನ್ನು ಅನುಮತಿಸದ ಮಾರ್ಗದಲ್ಲಿ ಹೇಗೆ ಬಂದಿತು?” ಎಂದು ಹಲವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : https://vijayatimes.com/does-antibiotics-are-danger/

ಇನ್ನು ಗುಜರಾತ್‌ನಲ್ಲಿ 89 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಡಿಸೆಂಬರ್ 1 ರಂದು ನಡೆದರೆ, ಉಳಿದ 93 ಸ್ಥಾನಗಳಿಗೆ ಎರಡನೇ ಮತ್ತು ಅಂತಿಮ ಸುತ್ತಿನ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಎಲ್ಲಾ 182 ಕ್ಷೇತ್ರಗಳ ಕ್ಷೇತ್ರಗಳ ಮತಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.
Exit mobile version