ನಮ್ಮ ಸಮುದಾಯಕ್ಕೆ ಸಿಎಂ ಆಗುವ ಅವಕಾಶವಿದೆ, ದಯವಿಟ್ಟು ಸಹಕರಿಸಿ ; ಒಕ್ಕಲಿಗರಿಗೆ ಡಿಕೆಶಿ ಮನವಿ

dk shivakumar

ಬೆಂಗಳೂರು : ಕಾಂಗ್ರೆಸ್‌ ಪಕ್ಷದಲ್ಲಿ(Congress Party) ಮುಖ್ಯಮಂತ್ರಿ(ChiefMinister) ಕುರ್ಚಿಗಾಗಿ ರಾಜ್ಯಾಧ್ಯಕ್ಷ(State President) ಡಿ.ಕೆ.ಶಿವಕುಮಾರ್‌(DK Shivkumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ನಡುವೆ ಕದನ ಜೋರಾಗಿದೆ.

ಇಬ್ಬರು ನಾಯಕರು ಮುಖ್ಯಮಂತ್ರಿ ಗದಿಗೇರಲು ಭಾರೀ ಪ್ರಯತ್ನಗಳಿಗೆ ಕೈಹಾಕಿದ್ದಾರೆ.


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Vidhansabha Election) ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಅನೇಕ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದೀಗ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.

ವ್ಯಕ್ತಿ ಪೂಜೆʼಗಿಂತ `ಪಕ್ಷ ಪೂಜೆʼ ಮುಖ್ಯ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಇಬ್ಬರೂ ನಾಯಕರಿಗೆ ಸೂಚನೆ ನೀಡಿತ್ತು. ನೀವು ಒಗ್ಗಟ್ಟಿನಿಂದ ಇರಬೇಕೆಂದು ಮನವಿ ಮಾಡಿಕೊಂಡಿತ್ತು. ಆದರೆ ದೆಹಲಿಯಿಂದ ಬಂದ ಇಬ್ಬರು ನಾಯಕರು ಟ್ರ್ಯಾಕ್ ತಪ್ಪುತ್ತಿದ್ದಾರೆ.

ಮುಖ್ಯಮಂತ್ರಿಯಾಗಲು ಪಕ್ಷದೊಳಗೆ ಭಾರೀ ಕಸರತ್ತು ಪ್ರಾರಂಭಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಬ್ಬರೂ ನಾಯಕರು ತಾಳ್ಮೆ ಕಳೆದುಕೊಳ್ಳತೊಡಗಿದ್ದಾರೆ. ಸಿದ್ದರಾಮಯ್ಯ ಬಹಿರಂಗವಾಗಿ, ನಾನು ಮತ್ತೆ ಸಿಎಂ ಆದರೆ ಅಕ್ಕಿ ಕೊಡುತ್ತೇನೆ, ಸಾಲಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆಗಳನ್ನು ಕೊಡುತ್ತಿದ್ದರೆ, ಇದೀಗ ಇದೇ ಮೊದಲ ಬಾರಿ, ಬೆಂಗಳೂರಿನ(Bengaluru) ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬರುತ್ತಿದೆ.

ದಯವಿಟ್ಟು ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಡಿಕೆಶಿ ಮಾಡಿರುವ ಈ ಮನವಿ ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಡಿಕೆಶಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಕದನಕ್ಕೆ ನಿಂತಿದ್ದಾರೆ. ಈ ಇಬ್ಬರು ನಾಯಕರು ತಮ್ಮ ಹೇಳಿಕೆಗಳ ಮೂಲಕ ಪಕ್ಷಕ್ಕೆ ಮುಜುಗರ ಮಾಡುತ್ತಿದ್ದಾರೆ. ಅವರಿಗೆ ಎಚ್ಚರಿಕೆ ನೀಡಿ ಎಂದು ಕೆಲ ಹಿರಿಯ ನಾಯಕರು ಹೈಕಮಾಂಡ್‍ಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಆದರೆ ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದರು, ಈ ಇಬ್ಬರು ಹೇಳಿಕೆಗಳನ್ನು ನೀಡುವುದನ್ನು ಮಾತ್ರ ಬಿಟ್ಟಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್‌ ಕೂಡಾ ಸುಮ್ಮನಾಗಿದೆ.
Exit mobile version