ಲೋಕಸಭೆ ಚುನಾವಣೆ : ಕಾಂಗ್ರೆಸ್ನ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯ, ಜಿಗ್ನೇಶ್ ಮೇವಾನಿಗೆ ಸ್ಥಾನ

New Delhi : 2024 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆ (Congress manifesto for elections) ಸಮಿತಿಯನ್ನು ರಚಿಸಿದ್ದು, ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ

ಕಾಂಗ್ರೆಸ್ ನಾಯಕ ಪಿ ಚಿದಂಬರಂ (P Chidambaram) ಅವರನ್ನು ಅದರ ಅಧ್ಯಕ್ಷರನ್ನಾಗಿ (President) ನೇಮಿಸಿದೆ.

ಈ ಪ್ರಣಾಳಿಕೆ ಸಮಿತಿಯಲ್ಲಿ ಛತ್ತೀಸ್ಗಢದ (Chhattisgarh) ಮಾಜಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ದೇವ್ (TS Singhdev) ಅವರನ್ನು ಪ್ರಮುಖ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿದೆ.

16 ಸದಸ್ಯರ ರಾಷ್ಟ್ರೀಯ ಪ್ರಣಾಳಿಕೆ ಸಮಿತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi)

ವಾದ್ರಾ (Vadra) ಇದ್ದಾರೆ. ಇವರೊಂದಿಗೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಸಂಸದ ಶಶಿ ತರೂರ, (Shashi Tarur) ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ,

(Praveen Chakraborty) ಮಣಿಪುರದ ಮಾಜಿ ಉಪಮುಖ್ಯಮಂತ್ರಿ ಗೈಖಂಗಮ್, ಲೋಕಸಭೆಯಲ್ಲಿ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ, ಜೈರಾಮ್

ರಮೇಶ್ ಕೂಡಾ ಸಮಿತಿಯ (Congress manifesto for elections) ಇತರೆ ಸದಸ್ಯರಾಗಿದ್ದಾರೆ.

ಇನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯ ಒಂದು ದಿನದ ನಂತರ ಈ ಸಮಿತಿಯನ್ನು ರಚಿಸಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷವು ತನ್ನ ಲೋಕಸಭಾ ಚುನಾವಣಾ ಕಾರ್ಯತಂತ್ರವನ್ನು

ಚರ್ಚಿಸಿದ್ದು, ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದಾಗಿ ಹೇಳಿದೆ. ಕಾಂಗ್ರೆಸ್ ಅಧ್ಯಕ್ಷರು ಮುಂಬರುವ ಸಾರ್ವತ್ರಿಕ ಚುನಾವಣೆ 2024 ರ ಪ್ರಣಾಳಿಕೆ ಸಮಿತಿಯನ್ನು ತಕ್ಷಣದಿಂದ ಜಾರಿಗೆ

ಬರುವಂತೆ ರಚಿಸಿದ್ದಾರೆ ಎಂದು ಪಕ್ಷವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಲೋಕಸಭಾ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಲು ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಕಾಂಗ್ರೆಸ್ ಪಕ್ಷವು ಶೀಘ್ರದಲ್ಲೇ ಅನೇಕ ಸಮಿತಿಗಳನ್ನು ರಚಿಸಲಿದೆ ಎಂದು

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ವೀಕ್ಷಕರನ್ನು ನೇಮಿಸುವುದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಸ್ಕ್ರೀನಿಂಗ್

ಸಮಿತಿ ಸಹ ರಚಿಸುವುದಾಗಿ ಅವರು ತಿಳಿಸಿದ್ದರು. ಇನ್ನು ಕರ್ನಾಟಕದಿಂದ ಸಿದ್ದರಾಮಯ್ಯನವರು ಮಾತ್ರ ಪ್ರಣಾಳಿಕೆ ಸಮಿತಿಯಲ್ಲಿದ್ದಾರೆ. ರಾಜ್ಯದ ಇತರೆ ನಾಯಕರಿಗೆ ಬೇರೆ ಸಮಿತಿಗಳಲ್ಲಿ ಸ್ಥಾನ

ಸಿಗುವ ಸಾಧ್ಯತೆಗಳಿವೆ.

ಇದನ್ನು ಓದಿ: ಹಿಜಾಬ್ ನಿಷೇಧ ವಾಪಸ್ ಪಡೆದ ಸಿಎಂ: ಬಿಜೆಪಿ ಹಿಂದುತ್ವದ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ

Exit mobile version