Lucknow : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (congress new gimick) ಅವರನ್ನು ವಾರಣಾಸಿಯಲ್ಲೇ ಸೋಲಿಸುವ ರಣತಂತ್ರವನ್ನು ಕಾಂಗ್ರೆಸ್ ಹೆಣೆದಿದ್ದು,
ಅದರ ಭಾಗವಾಗಿ ಪ್ರಿಯಾಂಕಾ ಗಾಂಧಿ (Priyanka Ghandi) ಅವರನ್ನು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೋದಿ ವಿರುದ್ದ ಕಣಕ್ಕಿಳಿಸಲು ಸಿದ್ದತೆ ನಡೆದಿದೆ ಎನ್ನಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ, ಪ್ರಿಯಾಂಕಾ ಗಾಂಧಿ ಅವರು ವಾರಣಾಸಿಯಿಂದ (Varanasi) ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹರಡಿಕೊಂಡಾಗ,
ಕೊನೆಯ ಕ್ಷಣದಲ್ಲಿ ಅಜಯ್ ರೈ (Ajay Rai) ಅವರನ್ನು ವಾರಣಾಸಿಯಿಂದ ಕಣಕ್ಕೆ ಇಳಿಸಲಾಯಿತು. 2014ರಲ್ಲೂ ಅಜಯ್ ರೈ ವಾರಣಾಸಿಯಿಂದ ಸ್ಪರ್ಧಿಸಿ ನರೇಂದ್ರ ಮೋದಿ ವಿರುದ್ಧ ಸೋತಿದ್ದರು.
2024ರ ಲೋಕಸಭಾ ಚುನಾವಣೆಗೂ ಮುನ್ನವೇ, ಬ್ರಿಜ್ಲಾಲ್ ಖಾಬ್ರಿ (Brijlala Khabri) ಬದಲಿಗೆ ಅಜಯ್ ರೈ ಅವರನ್ನು ಇದೀಗ ಉತ್ತರ ಪ್ರದೇಶ ಕಾಂಗ್ರೆಸ್ (Congress) ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಹಾಗಾಗಿ ಈ ಬಾರಿ ಮೋದಿ ಅವರನ್ನು ಸೋಲಿಸಲು ಪ್ರಿಯಾಂಕಾ ಗಾಂಧಿ ಅವರೇ ಸೂಕ್ತ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶ (Uttar Pradesha) ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು, ಪ್ರಿಯಾಂಕಾ ಗಾಂಧಿ ಅವರು ವಾರಣಾಸಿಯಿಂದ ಸ್ಪರ್ಧೆ ಮಾಡಿದರೆ, ನಮ್ಮ
ಎಲ್ಲಾ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಲಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಇಡೀ ದೇಶಕ್ಕೆ ಹೊಸ ಸಂದೇಶವನ್ನು ನಾವು ವಾರಣಾಸಿಯಿಂದಲೇ ನೀಡುತ್ತೇವೆ. 2024ರ ಲೋಕಸಭಾ
ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ (Priyanka Ghandi) ಅವರು ವಾರಣಾಸಿಯಿಂದ ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ.

ಇನ್ನೊಂದೆಡೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Ghandi) ಅವರು ಮತ್ತೆ ಅಮೇಠಿ ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆ ಎಂಬ
ಮಾತುಗಳು ಕೇಳಿ ಬಂದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಠಿ ಮತ್ತು ಕೇರಳದ (Kerala) ವಯನಾಡ್ ಎರಡರಿಂದಲೂ ಸ್ಪರ್ಧಿಸಿದ್ದರು.
ಆದರೆ ಅಮೇಠಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ (congress new gimick) ಸ್ಮೃತಿ ಇರಾನಿ (Smruti Irani) ವಿರುದ್ದ ಸೋಲನ್ನು ಕಂಡಿದ್ದರು.
ಆದರೆ ಕೇರಳದ ವಯನಾಡಿಯಲ್ಲಿ (Vayanad) ಗೆಲುವು ಸಾಧಿಸಿ, ಲೋಕಸಭೆಗೆ ಆಯ್ಕೆಯಾಗಿದ್ದರು. ಮೋದಿ ಉಪನಾಮ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅವರು ತಮ್ಮ ಲೋಕಸಭಾ ಸದಸ್ಯತ್ವವನ್ನು
ಕಳೆದುಕೊಂಡ ನಂತರ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆಯೇ ಎಂಬುದು ಅನುಮಾನವಾಗಿತ್ತು. ರಾಹುಲ್ ಗಾಂಧಿ ಅವರ ದೋಷಾರೋಪಣೆಗೆ ಸುಪ್ರೀಂಕೋರ್ಟ್
(Supreme Court) ಮಧ್ಯಂತರ ತಡೆ ನೀಡಿದ್ದರಿಂದ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ. ಹೀಗಾಗಿ ಮತ್ತೊಮ್ಮೆ ಇದೀಗ ರಾಹುಲ್ ಗಾಂಧಿ ಅವರು ಅಮೇಠಿ (Amethi) ಕ್ಷೇತ್ರದಿಂದಲೇ
ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ.
ಮಹೇಶ್