ಒಂದು ಕುಟುಂಬಕ್ಕೆ ಒಂದೇ ಟಿಕೆಟ್ : ಕಾಂಗ್ರೆಸ್ ಚಿಂತನೆ!

Rahul gandhi

ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್‍ನಲ್ಲಿ(Congress) ಗಂಭೀರ ಚರ್ಚೆ ನಡೆದಿದೆ. ಆದರೆ ಒಂದೇ ಕುಟುಂಬದ ಎರಡನೇಯ ವ್ಯಕ್ತಿಯೂ ಪಕ್ಷದಲ್ಲಿ ಕನಿಷ್ಠ ಐದು ವರ್ಷ ಅಸಾಧಾರಣ ರೀತಿಯಲ್ಲಿ ಕೆಲಸ ಮಾಡಿದ್ದರೆ, ಅಂತವರಿಗೆ ಈ ನಿಯಮಗಳಲ್ಲಿ ವಿನಾಯತಿ ಇದೆ.

ರಾಜಸ್ಥಾನದ(Rajasthan) ಉದಯಪುರದಲ್ಲಿ(Udaipur) ನಡೆಯುತ್ತಿರುವ ಕಾಂಗ್ರೆಸ್‍ನ ಚಿಂತನಾ ಶಿಬಿರದಲ್ಲಿ ಈ ಪ್ರಸ್ತಾವನೆಯನ್ನು ಸೂಚಿಸಲಾಗಿದೆ. ಪಕ್ಷದ ಬಹುತೇಕ ಹಿರಿಯ ನಾಯಕರು ಈ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್‍ನಲ್ಲಿ ಯಾವುದೇ ನಾಯಕರು ದೀರ್ಘಕಾಲ ಒಂದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಗರಿಷ್ಠ ಐದು ವರ್ಷ ಒಂದು ಹುದ್ದೆಯಲ್ಲಿ ಇದ್ದ ನಂತರ, ಮೂರು ವರ್ಷಗಳ ಕಾಲ ಅಧಿಕಾರದಿಂದ ದೂರವಿರಬೇಕು.

ಅದೇ ರೀತಿ ಪಕ್ಷದ ಎಲ್ಲ ನಾಯಕರ ಕಾರ್ಯಕ್ಷಮತೆ ಮತ್ತು ಕಾರ್ಯಯೋಜನೆಗಳ ಕುರಿತು ಮೌಲ್ಯಮಾಪನ ಮಾಡುವ ಸಮಿತಿ ರಚನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇನ್ನು ಒಂದೇ ಕುಟುಂಬಕ್ಕೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಹೀಗಾಗಿ ಪಕ್ಷದ ಹಿರಿಯ ನಾಯಕರ ಮಕ್ಕಳು, ಸಂಬಂಧಿಗಳು ನೇರವಾಗಿ ಬಂದು ಚುನಾವಣೆಗೆ ನಿಲ್ಲುವುದಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಗಾಂಧಿ(Gandhi) ಕುಟುಂಬಕ್ಕೂ ಈ ನಿಯಮ ಅನ್ವಯವಾಗಲಿದೆ ಎಂದು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್(Ajay Makan) ತಿಳಿಸಿದ್ದಾರೆ. ಈ ಪ್ರಸ್ತಾವನೆ ಅನುಮೋದನೆಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇನ್ನು ಪಕ್ಷಕ್ಕೆ ನಿಶ್ಚಿಯ ದೇಣಿಗೆ ನೀಡುವ ಕಾರ್ಯಕರ್ತರನ್ನು ಗುರುತಿಸಬೇಕೆಂಬ ಪ್ರಸ್ತಾವನೆಯನ್ನು ಕೇರಳ ಕಾಂಗ್ರೆಸ್(Kerala Congress) ಘಟನೆ ಮುಂದಿಟ್ಟಿದೆ. ಈಗಾಗಲೇ ಕೇರಳದಲ್ಲಿ ಸಿಪಿಎಂ ಈ ರೀತಿಯ ಪ್ರಯೋಗದಿಂದ ಯಶಸ್ಸು ಕಂಡಿದೆ.

ಇನ್ನು 10-15 ಕುಟುಂಬಗಳನ್ನು ಒಟ್ಟುಗೂಡಿಸಿ ಘಟಕ ಸಮಿತಿ ರಚನೆಯ ಯೋಜನೆಯನ್ನು ಸೂಚಿಸಲಾಗಿದೆ. ನಿರ್ಧಿಷ್ಟ ರಾಜಕೀಯ ಶಾಲೆಯನ್ನು ಪ್ರಾರಂಭಿಸಿ, ನಿರ್ಧಿಷ್ಟ ಪಠ್ಯಕ್ರಮವನ್ನು ಪಕ್ಷದ ಕಾರ್ಯಕರ್ತರಿಗೆ ಬೋಧನೆ ಮಾಡುವ ಕುರಿತು ಚರ್ಚೆ ನಡೆದಿದೆ.

Exit mobile version