ತೆರಿಗೆ ಇಲಾಖೆ ಬಳಸಿ ಬಿಜೆಪಿ ಬೇರೆ ಪಕ್ಷದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್

New Delhi: ಹಿಂದಿನ ವರ್ಷಗಳ ತೆರಿಗೆ ರಿಟರ್ನ್ಸ್‌ನಲ್ಲಿನ ವ್ಯತ್ಯಾಸಗಳಿಗಾಗಿ (Congress Slams BJP) ಆದಾಯ ತೆರಿಗೆ ಇಲಾಖೆಯು 1,700 ಕೋಟಿ ರೂಪಾಯಿ ಮೊತ್ತದ ಹೊಸ ನೋಟಿಸ್ ಅನ್ನು

ಕಾಂಗ್ರೆಸ್‌ಗೆ ರವಾನಿಸಿದ್ದು, ಲೋಕಸಭೆ ಚುನಾವಣೆಗೆ ಮುನ್ನ ಹಣದ ಕೊರತೆಯಿರುವ ಪಕ್ಷಕ್ಕೆ ಮತ್ತೊಂದು ಹೊಡೆತ ನೀಡಿದೆ. 2017-18 ರಿಂದ 2020-21 ರವರೆಗಿನ ತೆರಿಗೆ ಬಾಕಿ, ಬಡ್ಡಿ ಮತ್ತು ದಂಡಕ್ಕೆ

ಸಂಬಂಧಿಸಿದಂತೆ ಹೊಸದಾಗಿಕಾಂಗ್ರೆಸ್‌ಗೆ (Congress) ಈ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಾರದ ಆರಂಭದಲ್ಲಿಯೂ ನೋಟಿಸ್ ನೀಡಲಾಗಿತ್ತು.

ನಾಲ್ಕು ಮೌಲ್ಯಮಾಪನ ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಪಕ್ಷವು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ (Delhi High Court) ತಿರಸ್ಕರಿಸಿದ ಕೆಲವೇ

ಗಂಟೆಗಳಲ್ಲಿ ಈ ನೋಟಿಸ್‌ ಬಂದಿರುವುದಾಗಿ ಪಕ್ಷ ಹೇಳಿಕೊಂಡಿದೆ.1700 ಕೋಟಿ ರೂ. ಮೊತ್ತದ ನೋಟಿಸ್‌ 2017-18 ರಿಂದ 2020-21ರವರೆಗಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದ ಹೊಸ ತೆರಿಗೆ

ಬೇಡಿಕೆಯಾಗಿದೆ. ಇದರಲ್ಲಿ ದಂಡದ ಮೊತ್ತ ಹಾಗೂ ಬಡ್ಡಿಯೂ ಒಳಗೊಂಡಿದೆ. ಇದಲ್ಲದೆ ಕಾಂಗ್ರೆಸ್‌ ಇತರ ಮೂರು ಮೌಲ್ಯಮಾಪನ ವರ್ಷಗಳ ಆದಾಯದ ಮರುಮೌಲ್ಯಮಾಪನವನ್ನೂ ಎದುರುನೋಡುತ್ತಿದೆ.

ಇದರ ಗಡುವು ಭಾನುವಾರಕ್ಕೆ (Congress Slams BJP) ಕೊನೆಗೊಳ್ಳಲಿದೆ.

ಆದಾಯ ತೆರಿಗೆ ಇಲಾಖೆಯ (Income Tax Department) ಈ ಕ್ರಮಕ್ಕೆ ತಡೆ ಕೋರಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಕಾಂಗ್ರೆಸ್ ವಕೀಲ ಮತ್ತು ರಾಜ್ಯಸಭಾ ಸಂಸದ ವಿವೇಕ್ ಟಂಕಾ ಅವರು ನೋಟಿಸ್‌

ಬಂದಿರುವುದನ್ನು ದೃಢಪಡಿಸಿದ್ದು, ಈಗಾಗಲೇ 2018-19ನೇ ಸಾಲಿಗೆ ಸಂಬಂಧಿಸಿದಂತೆ ಐ-ಟಿ ರಿಟರ್ನ್ಸ್ ಸಲ್ಲಿಸದ ಕಾರಣಕ್ಕೆ 201 ಕೋಟಿ ರೂ. ದಂಡ ಪಾವತಿಸಬೇಕು ಎಂದು ನೋಟಿಸ್ ನೀಡಿದ್ದ ಆದಾಯ ತೆರಿಗೆ

ಇಲಾಖೆಯು, ಕಾಂಗ್ರೆಸ್ ಪಕ್ಷದ ಒಂಬತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು.

2017 ರಿಂದ 2021ರ ಅವಧಿಯ ತೆರಿಗೆ ಮರುಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರಂಭಿಸಿದ್ದ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ

ಹೈಕೋರ್ಟ್ ಗುರುವಾರ (ಮಾರ್ಚ್ 28) ವಜಾ ಮಾಡಿದೆಐಟಿ ಕ್ರಮ ಪ್ರಜಾಸತ್ತಾತ್ಮಕ ವಿರೋಧಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಇದನ್ನು ಪಕ್ಷವು ಕಾನೂನಾತ್ಮಕವಾಗಿ ಎದುರಿಸುತ್ತದೆ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಕ್ರಮದಿಂದಾಗಿ ಪಕ್ಷದ ಎಲ್ಲ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಿದೆ.

ಏಪ್ರಿಲ್ (April) 19 ರಿಂದ ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ (BJP) ಆರ್ಥಿಕವಾಗಿ ಪಕ್ಷದ ಕತ್ತು ಹಿಸುಕಿದೆ ಮತ್ತು ತೆರಿಗೆ ಅಧಿಕಾರಿಗಳನ್ನು ಪಕ್ಷದ ವಿರುದ್ಧ ಬಳಸುತ್ತಿದೆ

ಎಂದು ಕಾಂಗ್ರೆಸ್ ಆರೋಪಿಸಿದೆ.

ಇದನ್ನು ಓದಿ: ಬೆಂಗಳೂರು ಕೃಷಿ ವಿಜ್ಞಾನಗಳ ವಿವಿಯಲ್ಲಿ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Exit mobile version