ಬಿಜೆಪಿ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್.

Bengaluru: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ & ಬಿಜೆಪಿ (Congress Tweet Against BJP) ನಾಯಕರ ನಡುವೆ ಜಟಾಪಟಿ ಏರ್ಪಟ್ಟಿದ್ದು . ಈ ತಿಕ್ಕಾಟದಲ್ಲಿ ಭಾರಿ ವಾಗ್ದಾಳಿ ಕೂಡ

ನಡೆದಿದೆ. ಹಾಗೇ ಪಕ್ಷಾಂತರ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ಇದೀಗ ಚುನಾವಣಾ ಬಾಂಡ್ (Electoral Bond) ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಈಗ ಹೊಸ ಆರೋಪದ ಬಾಂಬ್ ಸಿಡಿಸಿದೆ!

ದೇಶಾದ್ಯಂತ ಅನೇಕ ನಾಯಕರು ಕಾಂಗ್ರೆಸ್ ಮತ್ತು ವಿವಿಧ ವಿರೋಧ (Congress Tweet Against BJP) ಪಕ್ಷಗಳನ್ನು ತೊರೆದು ಬಿಜೆಪಿಗೆ ಬಂದಿದ್ದಾರೆ.

ಈಗ ಇದೇ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಒಂದು ಟ್ವೀಟ್ ಮಾಡಿದೆ. ಈ ಮೂಲಕ ‘ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ (Washing Machine) ಇದ್ದಂತೆ’ ಅಂತಾ ಕಾಂಗ್ರೆಸ್ ಹೇಳಿದೆ. ಇನ್ನು

ಚುನಾವಣಾ ಬಾಂಡ್ ಹೆಸರಲ್ಲಿ ಬಿಜೆಪಿ ಬೇಳೆ ಬೇಯಿಸಿಕೊಳ್ಳುತ್ತಿದೆ.ಬಿಜೆಪಿ (BJP) ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ, ಯಾವುದಾದರೂ ಕಂಪೆನಿಗಳು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೆ

ಚುನಾವಣಾ ಬಾಂಡ್ ಖರೀದಿಸುವ ಮೂಲಕ ಶುದ್ಧರಾಗಬಹುದು!

ರಾಜಕಾರಿಣಿಗಳು ಭ್ರಷ್ಟರಾಗಿದ್ದರೆ ಬಿಜೆಪಿ ಸೇರುವ ಮೂಲಕ ಪವಿತ್ರರಾಗಬಹುದು! ಯಾವೊಬ್ಬ ಭ್ರಷ್ಟಾಚಾರಿಯನ್ನೂ ಭ್ರಷ್ಟಾಚಾರಿ ಎನಿಸಿಕೊಳ್ಳಲು ಬಿಡುವುದಿಲ್ಲ ಬಿಜೆಪಿ ಅಲ್ಲಿದ್ದರೆ ED ದಾಳಿ ನಡೆಯುವುದಿಲ್ಲ

ಒಟ್ಟಿನಲ್ಲಿ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ, ಯಾವೊಬ್ಬ ಭ್ರಷ್ಟರನ್ನೂ ಬಿಡದೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಮೋದಿಯವರ ಸರ್ಜಿಕಲ್ ಸ್ಟ್ರೈಕ್ (Surgical Strike)

ಅಮೋಘವಾಗಿಯೇ ಇದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿ ಬಿಜೆಪಿಯನ್ನು ತಿವಿದಿದೆ.

ಹೀಗೆ ಚುನಾವಣೆ ದಿನಾಂಕ ಹತ್ತಿರ ಆಗುತ್ತಿದ್ದಂತೆ ಎಲ್ಲ ಪಕ್ಷಗಳ ನಡುವಿನ ತಿಕ್ಕಾಟ ಕೂಡ ಬಲು ಜೋರಾಗುತ್ತಿದೆ. ಒಂದು ಕಡೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್

ಕೂಡ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಈ ಮೂಲಕ ಇಬ್ಬರ ನಡುವಿನ ತಿಕ್ಕಾಟ ಈಗ ತಾರಕಕ್ಕೇರಿದೆ. ಅಲ್ಲದೆ ಚುನಾವಣೆ ಮುಗಿಯುವ ತನಕ ಈ ಯುದ್ಧವು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆದರೆ ಮತದಾರ

ಪ್ರಭು ಯಾರ ಪರವಾಗಿ ನಿಲ್ಲುತ್ತಾನೆ? ಅನ್ನೋದನ್ನ ಮಾತ್ರ ಕಾದು ನೋಡಬೇಕಿದೆ.

ಇದನ್ನು ಓದಿ: ಲೋಕಸಮರ 2024 : ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

Exit mobile version