Bengaluru: ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳನ್ನು (congress unwanted expenses) ಪತ್ತೆ ಹೆಚ್ಚಲು ವಿಶೇಷ ಘಟಕಗಳನ್ನು ಸ್ಥಾಪಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ,
ಇದೀಗ ಫ್ಯಾಕ್ಟ್ಚೆಕ್ (Factcheck) ಹೆಸರಿನಲ್ಲಿ ವಿವಿಧ ಸಂಸ್ಥೆಗಳಿಗೆ ಹಣ ಸಂದಾಯ ಮಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಸಂಸ್ಥೆಗಳು ಯಾವುದೇ ಮಾನ್ಯತೆ ಅಥವಾ ವಿಶೇಷ ಪರಿಣಿತಿ ಇಲ್ಲದಿದ್ದರೂ
ಫ್ಯಾಕ್ಟ್ಚೆಕ್ ಹೆಸರಿನಲ್ಲಿ ಸುಮಾರು 3.19 ಕೋಟಿ ರೂಪಾಯಿಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ 5 ಸಂಸ್ಥೆಗಳಿಗೆ ನೀಡಿದ್ದು, ಅದರಲ್ಲಿ ಗೌರಿ ಮೀಡಿಯಾಟ್ರಸ್ಟ್ ಹಾಗೂ ನ್ಯೂಸ್ ಪ್ಲಸ್ ಸಂಸ್ಥೆಗಳಿರುವುದು (Gauri
Media trust and News Plus) ಚರ್ಚೆಗೆಗ್ರಾಸವಾಗಿದೆ.ಇನ್ನು ಈ ಕುರಿತು ರಾಜ್ಯ ಆರ್ಥಿಕ ಇಲಾಖೆಯೂ ಮಾರ್ಚ್ 16 2024ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಲಾಜಿಕಲ್ ಇಂಡಿಯಾ ಕಂಪನಿ,
(Logical India Company) ಟ್ರೈಲಿಕಾ, ಡಾಟಾ ಲೀಡ್ಸ್, ಗೌರಿ ಮೀಡಿಯಾ ಟ್ರಸ್ಟ್, ನ್ಯೂಸ್ ಪ್ಲಸ್ ಸಂಸ್ಥೆಗಳಿಗೆ ಫ್ಯಾಕ್ಟ್ ಚೆಕ್ ಮಾಡಲು 3.19 ಕೋಟಿ ನೀಡಲಾಗಿದೆ. ಈ ಪಟ್ಟಿಗೆ ಸಚಿವ ಪ್ರಿಯಾಂಕ್ ಖರ್ಗೆ
ಅವರು ಕೂಡಾ ಅನುಮೋದಿಸಿದ್ದಾರೆ. ಆಸಕ್ತಿಕರ ಸಂಗತಿ ಎಂದರೆ ಲಾಜಿಕಲ್ ಇಂಡಿಯಾ ಕಂಪನಿ, ಟ್ರೈಲಿಕಾ, ಡಾಟಾ ಲೀಡ್ಸ್ ಸಂಸ್ಥೆಗಳು (Trilica, a data leads firm) ಫ್ಯಾಕ್ಟ್ನಲ್ಲಿ ವಿಶೇಷ ಅನುಭವ ಹೊಂದಿವೆ.
ಆದರೆ ಗೌರಿ ಮೀಡಿಯಾ ಟ್ರಸ್ಟ್, ನ್ಯೂಸ್ ಪ್ಲಸ್ ಸಂಸ್ಥೆಗಳಿಗೆ ಇದರಲ್ಲಿ ಯಾವುದೇ ಅನುಭವ (congress unwanted expenses) ಇಲ್ಲದಿದ್ದರೆ, ಹಣ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕನ್ನಡಿಗರ ತೆರಿಗೆ ಹಣ (Tax money) ನಮ್ಮ ಅಪ್ಪಂದು ಏನು ಹೋಗಬೇಕೆಂದು ಕಾಂಗ್ರೆಸ್ ಸರ್ಕಾರ ತನ್ನ ಗುಲಾಮರಿಗೆ ಬೇಕಾಬಿಟ್ಟಿಯಾಗಿ ಹಂಚಿ ತಿಂದು
ತೇಗುತ್ತಿದೆ. ಬಿಟ್ಟಿ ಪ್ರಚಾರ ಪಡೆಯಲು ಕೋಟಿ ಕೋಟಿ ಖರ್ಚು ಮಾಡುವ ಮಜಾವಾದಿ ಸಿದ್ದರಾಮಯ್ಯ ಸರ್ಕಾರ, ಫ್ಯಾಕ್ಟ್ ಚೆಕ್ ಹೆಸರಲ್ಲಿ ಫೇಕ್ ನ್ಯೂಸ್ ಹಬ್ಬಿಸಲು ಏಜೆನ್ಸಿಗೆ ಕೊಟ್ಟಿದೆ. ಕನ್ನಡಿಗರ ತೆರಿಗೆ ಹಣ
ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವಂತಾಗಿದೆ. ಲೂಟಿ ಹೊಡೆದು ಖಜಾನೆ ಖಾಲಿ ಮಾಡುವುದೇ ಕಾಂಗ್ರೆಸ್ ಗ್ಯಾರಂಟಿ (Congress guarantee) ಎಂದು ಟೀಕಿಸಿದೆ. ಇತ್ತೀಚೆಗಚ್ಟೇ ಪ್ರಕಾಶ್ ರೈ
ಸ್ಥಾಪಿಸಿದ್ದ ಸಂಸ್ಥೆಗೂ ಕಾಂಗ್ರೆಸ್ ಸರ್ಕಾರ, ರಂಗ ಚಟುವಟಿಕೆ ಕೈಗೊಳ್ಳಲು ವಿಶೇಷ ಅನುದಾನ ನೀಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು.
ಇದನ್ನು ಓದಿ: ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್ ಆಲ್ಬಮ್ ನಂತಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ