Visit Channel

ಕಾಂಗ್ರೆಸ್ ಮೇಕೆದಾಟು ಹೋರಾಟಕ್ಕೆ ಹಂಸಲೇಖ ಸಾಥ್

ಬೆಂಗಳೂರು ಡಿ 31 : ಇತ್ತೀಚಿನ ದಿನಗಳಲ್ಲಿ ಹಲವು ವಿವಾದಗಳಿಂದ ಸದ್ದು ಮಾಡುತ್ತಿರುವ ಸಂಗೀತ ನಿರ್ದೇಶಕ ಹಂಸಲೇಖ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಯೋಜನೆಯ ಹೋರಾಟಕ್ಕೂ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಗುರುವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಯನ್ನು ನೀಡಿದ್ದರು. ಈಗ ಇದೇ ವಿಚಾರವಾಗಿ ಹೊಸದೊಂದು ವಿಷಯವು ಎಲ್ಲರ ಗಮನವನ್ನು ಸೆಳೆದಿದೆ. ಹೌದು ನಾದಬ್ರಹ್ಮ ಖ್ಯಾತಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾಂಗ್ರೆಸ್ ಗೆ ಸಾಥ್ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಹಂಸಲೇಖ ಅವರಿಗೆ ಪಾದಯಾತ್ರೆಗೆ ಸಾಥ್ ನೀಡಲು ನೀಡಿದ ಆಹ್ವಾನವನ್ನು ಹಂಸಲೇಖ ಅವರು ಕೂಡ ಒಪ್ಪಿಕೊಂಡಿದ್ದಾರೆ  ಅವರು ಮೇಕೆದಾಟು ಪಾದಯಾತ್ರೆ ಕುರಿತಾಗಿ ಎರಡು ಹಾಡುಗಳನ್ನು ಕೂಡಾ ಬರೆಯುವುದಾಗಿ ಹೇಳಿದ್ದಾರೆ ಎಂಧು ತಿಳಿದುಬಂದಿದೆ. ಕಾಂಗ್ರೆಸ್ ಏರ್ಪಡಿಸಿರುವ ಈ ಪಾದಯಾತ್ರೆಗೆ ಚಿತ್ರರಂಗದ ಇನ್ನೂ ಹಲವರು ಆಗಮಿಸುವುದಾಗಿ ತಿಳಿದುಬಂದಿದೆ

 ಕಾಂಗ್ರೆಸ್‌ ಪಕ್ಷವು ಈ ಪಾದಯಾತ್ರೆಗೆ ಕನ್ನಡದ ಎಲ್ಲಾ ಸ್ಟಾರ್ ನಟರನ್ನೂ ಸಹಾ ಆಹ್ವಾನ ಮಾಡಲು ನಿರ್ಧಾರವೊಂದನ್ನು ಮಾಡಿದ್ದು, ಈ ಹೊಣೆಗಾರಿಕೆಯನ್ನು ಹಿರಿಯ ಕಲಾವಿದರಾದ ಉಮಾಶ್ರೀ, ಜಯಮಾಲಾ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ವಹಿಸಲಾಗಿದೆ ಎನ್ನಲಾಗಿದೆ. ಅದಾದ ನಂತರ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನಟರಿಗೆ ಆಹ್ವಾನವನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Latest News

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಭಯೋತ್ಪಾದಕರು!

ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.