ಶಾಲಾ-ಕಾಲೇಜು ಮತ್ತು ವಿ.ವಿಗಳಲ್ಲಿ ಸಂವಿಧಾನ ಪ್ರಸ್ತಾವನೆಯ ಪಠಣ ಕಡ್ಡಾಯ

Bengaluru : ರಾಜ್ಯದ ಎಲ್ಲಾ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಂದ (Constitution proposal) ಹೇಳಿಸುವುದಕ್ಕೆ ಪೂರಕವಾಗಿ ಆದೇಶ ಹೊರಡಿಸುವಂತೆ ಸಮಾಜ

ಕಲ್ಯಾಣ ಕಾರ್ಯದರ್ಶಿ ಎಚ್.ಸಿ. ಮಹದೇವಪ್ಪ (Social Welfare Secretary H.C. Mahadevappa) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ವಿಧಾನಸೌಧದಲ್ಲಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಎಲ್ಲಾ ಅಧಿಕಾರಿಗಳು ಕರಡು ಸಂವಿಧಾನವನ್ನು ಓದಬೇಕು ಮತ್ತು ಸಂವಿಧಾನವು ಸೂಚಿಸಿದ ರೀತಿಯಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಬೇಕು ನಾವೆಲ್ಲರೂ

ಸಂವಿಧಾನ ಬದ್ಧವಾಗಿ ಕೆಲಸ ಮಾಡಲು ಪ್ರಮಾಣ ವಚನ ಸ್ವೀಕಾರ (Constitution proposal) ಮಾಡಿದ್ದೇವೆ.

ಒಂದು ವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಚಾಟಿ ಬೀಸುತ್ತೇನೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಇದೇ ವೇಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ

ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿನಿತ್ಯ ಪಠಿಸುವಂತೆ ಪೂರಕ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ, ರಾಜ್ಯದ ಎಸ್‌ಸಿ (SC) ಮತ್ತು ಎಸ್‌ಟಿ (ST) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಲ್ಲಿ ಯಾವುದೇ ವಿಳಂಬ ಅಥವಾ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವೆಡೆ ವಿದ್ಯಾರ್ಥಿ ವೇತನ ವಿಳಂಬವಾಗಿರುವುದರಿಂದ ಕಾಲೇಜು ಪ್ರವೇಶ, ದಾಖಲಾತಿ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ : https://vijayatimes.com/gruha-lakshmi-scheme-2023/

ಕೇಂದ್ರ ಸರ್ಕಾರದ್ದು ಶೇ.60 ಹಾಗೂ ರಾಜ್ಯ ಸರ್ಕಾರದ್ದು ಶೇ.40ರಷ್ಟು ವಿದ್ಯಾರ್ಥಿವೇತನದಲ್ಲಿ ಪಾಲಿದೆ.ಕೇಂದ್ರದ ಪಾಲು ತಪ್ಪದಂತೆ ಹಾಗೂ ರಾಜ್ಯದ ಪಾಲನ್ನು ಸಮರ್ಪಕವಾಗಿ ನೀಡಿ ನೋಡಿಕೊಳ್ಳಬೇಕು ಎಂದಿದ್ದಾರೆ.

ಹಿಂದುಳಿದ ವರ್ಗ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ, ಮತ್ತು ಪಂಗಡಗಳ ವಿದ್ಯಾರ್ಥಿಗಳು ಶಾಲಾ ಶುಲ್ಕವನ್ನು ಪಾವತಿಸಿಲ್ಲ ಎಂಬ ಕಾರಣಕ್ಕೆ ಶಾಲಾ–ಕಾಲೇಜುಗಳ ಪ್ರವೇಶ ನೀಡುವುದಕ್ಕೆ ಯಾರೂ ಕೂಡ ಅಡ್ಡಿ ಪಡಿಸುವಂತಿಲ್ಲ

ಮೊದಲಿಗೆ ಪ್ರವೇಶ ನೀಡಬೇಕು ಎಂದು ಮಹದೇವಪ್ಪ ತಿಳಿಸಿದರು.

ಪಠ್ಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ :

ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಲೇ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ. ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ಪಾಠಗಳ ಮೂಲಕ ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ

ಸಿದ್ದರಾಮಯ್ಯ (Siddaramaiah) ಈಗಾಗಲೇ ಹೇಳಿದ್ದು, ಈ ಹಿಂದೆ ಬಿಜೆಪಿ ಸರ್ಕಾರ (BJP Govt) ಸೇರ್ಪಡೆ ಮಾಡಿದ್ದ ಅನಗತ್ಯ ಪಠ್ಯಗಳನ್ನು ತೆಗೆದು ಹಾಕಲು ನೂತನ ಸರ್ಕಾರ ಈಗಾಗಲೇ ಕ್ರಮವಹಿಸಲಿದೆ ಎಂಬ

ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version