ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು, ತಮ್ಮ ಮಕ್ಕಳಿಗೆ 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು : AIDUF ಮುಖ್ಯಸ್ಥ

India : ಹಿಂದೂಗಳು ಮುಸ್ಲಿಂಮರ ಸೂತ್ರವನ್ನು ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (Controversial Statement Row) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.

ಮುಸ್ಲಿಂ ಪುರುಷರು 20-22 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ (Controversial Statement Row) ಮಹಿಳೆಯರು 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ.

ಮತ್ತೊಂದೆಡೆ ಹಿಂದೂಗಳು ಮದುವೆಗೆ ಮೊದಲು ಎರಡು ಅಥವಾ ಮೂರು ಅಕ್ರಮ ಹೆಂಡತಿಯರನ್ನು ಇಟ್ಟುಕೊಳ್ಳುತ್ತಾರೆ. 

ಹೀಗೆ ಮಾಡುವ ಬದಲು 20-22ನೇ ವಯಸ್ಸಿನಲ್ಲಿ ಮದುವೆಯಾಗಿ ಶಿಶುಗಳಿಗೆ ಜನ್ಮ ನೀಡಿ, ಆನಂದಿಸಿ ಮತ್ತು ಹಣವನ್ನು ಉಳಿಸಿ ಎಂದು ಎಐಡಿಯುಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ.

ಇದೇ ವೇಳೆ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪದ ಬಗ್ಗೆ ಎಐಡಿಯುಎಫ್ ಮುಖ್ಯಸ್ಥರನ್ನು ಕೇಳಿದಾಗ,

ಇದನ್ನೂ ಓದಿ : https://vijayatimes.com/swift-modified-to-lamborghini/

40 ವರ್ಷ ವಯಸ್ಸಿನ ನಂತರ ಅವರು ಪೋಷಕರ ಒತ್ತಡಕ್ಕೆ ಮದುವೆಯಾಗುತ್ತಾರೆ. ಹೀಗಾಗಿ ಅವರು 40ರ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ಹೇಗೆ ನಿರೀಕ್ಷಿಸಬಹುದು? ನೀವು ಫಲವತ್ತಾದ ಭೂಮಿಯಲ್ಲಿ ಬಿತ್ತಿದರೆ ಆಗ ಮಾತ್ರ ನೀವು ಉತ್ತಮ ಬೆಳೆಗಳನ್ನು ಹೊಂದಬಹುದು.

ಹೀಗಾಗಿ ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು,

18-20 ವರ್ಷಕ್ಕೆ ಹುಡುಗಿಯರ ಮದುವೆ ಮಾಡಬೇಕು. ಆಗ ಅನೇಕ ಮಕ್ಕಳು ಹುಟ್ಟುತ್ತಾರೆ ಎಂದು ಹೇಳಿದರು.

ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ಅವರು ಇತ್ತೀಚೆಗೆ ರಾಷ್ಟ್ರ ರಾಜಧಾನಿಯನ್ನು ನಡೆದಿರುವ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himant Biswa Sarma) ಅವರ “ಲವ್ ಜಿಹಾದ್”(Love Jihad) ಕುರಿತು ಪ್ರತಿಕ್ರಿಯಿಸಿ,

https://youtu.be/R85GPe0rs-c COVER STORY ಛೀ……ಥೂ ಇದೂ ಒಂದು ರಸ್ತೆನಾ? ರಾಜಕಾರಣಿಗಳಿಗೆ ಕಣ್ಣು ಕಾಣಲ್ವಾ?

ನಮ್ಮ ಮುಖ್ಯಮಂತ್ರಿ ಇಂದು ದೇಶದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು, ಹಾಗಾಗಿ ಅವರನ್ನು ತಡೆಯುವವರು ಯಾರು. ನೀವೂ ನಾಲ್ಕೈದು ‘ಲವ್ ಜಿಹಾದ್’ ನಡೆಸಿ ನಮ್ಮ ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುತ್ತೀರಿ ಎಂದಾದರೆ,

ಅದನ್ನು ನಾವು ಸ್ವಾಗತಿಸುತ್ತೇವೆ. ಆಗ ನಿಮ್ಮಲ್ಲಿ ಎಷ್ಟರಮಟ್ಟಿಗೆ ಶಕ್ತಿ ಇದೆ ಎಂಬುದನ್ನೂ ನಾವು ನೋಡಬಹುದು ಎಂದು ಅಜ್ಮಲ್ ಲೇವಡಿ ಮಾಡಿದರು.
Exit mobile version