ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್ 30 ರೂ. ಇಳಿಕೆ

Price drop

ನವದೆಹಲಿ : ಉಕ್ರೇನ್‌(Ukraine) ಮತ್ತು ರಷ್ಯಾ(Russia) ನಡುವೆ ಯುದ್ದ ಪ್ರಾರಂಭವಾದ ನಂತರ ಇಡೀ ವಿಶ್ವದಾದ್ಯಂತ ಅಡುಗೆ ಎಣ್ಣೆ(Cooking Oil) ಬೆಲೆ ಗಗನಕ್ಕೇರಿತ್ತು. ಪ್ರಮುಖ ಅಡುಗೆ ಎಣ್ಣೆ ರಫ್ತುದಾರ ರಾಷ್ಟ್ರಗಳಲ್ಲೇ ಯುದ್ದದ ಪರಿಸ್ಥಿತಿ ನಿರ್ಮಾಣವಾದ ನಂತರ ಅಂತರಾಷ್ಟ್ರೀಯ(International) ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗೆ ಭಾರೀ ಡಿಮ್ಯಾಂಡ್‌ ಸೃಷ್ಟಿಯಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ್ದು, ತೈಲ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಸೂರ್ಯಕಾಂತಿ ಖಾದ್ಯ ತೈಲ(Sunflower Oil) ದರ ಭಾರೀ ಇಳಿಕೆಯಾಗಿದೆ.


ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಅಡುಗೆ ಎಣ್ಣೆ ಬೆಲೆ ಭಾರೀ ಇಳಿಕೆಯಾಗಿದೆ. ಹೀಗಾಗಿ ದೇಶದ ಪ್ರಮುಖ ಖಾದ್ಯ ತೈಲ ಉತ್ಪಾದನಾ ಕಂಪನಿಯಾಗಿರುವ ಅದಾನಿ(Adhani) ಒಡೆತನದ `ಅದಾನಿ ವಿಲ್ಮರ್’ ಕಂಪನಿಯು ಫಾರ್ಚೂನ್(Fortune Cooking Oil) ಖಾದ್ಯ ತೈಲ ಬೆಲೆಯನ್ನು ಪ್ರತಿ ಲೀಟರ್ಗೆ 30 ರೂ.ವರೆಗೆ ಇಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ದೇಶದ ಇತರ ಖಾದ್ಯ ತೈಲ ಉತ್ಪಾದನಾ ಕಂಪನಿಗಳು ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಲು ಮುಂದಾಗಿವೆ ಎಂದು ವರದಿಯಾಗಿದೆ.


ಇನ್ನು ಈಗಾಗಲೇ ಕೇಂದ್ರ ಸರ್ಕಾರ(Central Government) ಅಡುಗೆ ಎಣ್ಣೆ ಮೇಲಿನ ಆಮದು(Import) ಸುಂಕವನ್ನು ಶೇ.5 ರಷ್ಟು ಇಳಿಸಿದ್ದು, ಖಾದ್ಯ ತೈಲ ಬೆಲೆಯನ್ನು ಲೀಟರ್‌ಗೆ 5 ರೂ. ನಿಂದ 30 ರೂ. ವರೆಗೂ ಇಳಿಸಿದೆ. ಹೀಗಾಗಿ ಅದಾನಿ ವಿಲ್ಮರ್ ಕಂಪನಿಯ ಎಳ್ಳೆಣ್ಣೆ 195 ರೂ. ನಿಂದ 190 ರೂ.ಗೆ, ಸೂರ್ಯಕಾಂತಿ ಎಣ್ಣೆ 210 ರೂ ನಿಂದ 199 ರೂ.ಗೆ ಸೋಯಾ ಎಣ್ಣೆ ದರದಲ್ಲಿ ಲೀ.ಗೆ 195 ರೂ. ನಿಂದ 165 ರೂ.ಗೆ, ಶೇಂಗಾ ಎಣ್ಣೆ 220 ರೂ. ನಿಂದ 210 ರೂ. ಇಳಿಕೆಯಾಗಲಿದೆ ಎನ್ನಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಭಾರತದಲ್ಲಿ ಖಾದ್ಯ ತೈಲ ಬೆಲೆ ನಿರ್ಧಾರವಾಗುತ್ತದೆ.

ಭಾರತ ತನ್ನ ಬಳಕೆಯ ಸುಮಾರು ಶೇ.೭೦ರಷ್ಟು ಖಾದ್ಯ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.

Exit mobile version