ಕೊರೋನಾ ಬಗ್ಗೆ ಭಯ ಬೇಡ

ಬೆಂಗಳೂರು-ರಾಜಧಾನಿ ಬೆಂಗಳೂರಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೋಕಿಂತರನ್ನು ಪತ್ತೆ ಹಚ್ಚುವ ಕೆಲಸವನ್ನು ಇನ್ನಷ್ಟು ವಿಸ್ತಾರವಾಗಿ ಮಾಡುತ್ತಿದೆ. ಬಿಬಿಎಂಪಿ ತನ್ನ ಕೆಲಸವನ್ನು ಚುರುಕುಗೊಳಿಸಿದ್ದು ನಾನಾ ವೈದ್ಯರ ತಂಡ ರಚಿಸಿ ನಗರದ ಮೂಲೆ ಮೂಲೆಯಲ್ಲಿ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ.

 ಇಂದು ಬೆಂಗಳೂರಿನ ಕೋರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಕೋವಿಡ್‌ ವೈದ್ಯಾಧಿಕಾರಿ ಡಾ ಸೈಯದ್‌ ಮುದಾಸಿರ್‌ ಅವರ ನೇತೃತ್ವದ ತಂಡ ಕ್ಯಾಂಪ್‌ ಮಾಡಿ ಕೋವಿಡ್‌ ಪರೀಕ್ಷೆ ನಡೆಸಿತು. ಇವರಿಗೆ ಸಹಾಯಕರಾಗಿ ವಾಣಿ ಹಾಗೂ ಕರುಪಗಂ ಅವರು ಸ್ವಾಬ್‌ ಸಂಗ್ರಹಿಸಿದ್ರು. ಮೇಘನಾ ಸಹಾಯಕರಾಗಿ ಕಾರ್ಯನಿರ್ವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ರು.

 ಕೋರಮಂಗಲ ಭಾಗದಲ್ಲಿ ಕ್ಯಾಂಪ್‌ಗಳನ್ನ ಆಯೋಜಿಸಿ ಜನರಲ್ಲಿ ಕೊರೋನಾ ಬಗ್ಗೆ ಆತಂಕ ನಿವಾರಿಸಿ, ಯಾವುದೇ ಭಯವಿಲ್ಲದೆ ಕೋವಿಡ್‌ ಟೆಸ್ಟ್‌ ಮಾಡಲು ಜನರನ್ನು ಉತ್ತೇಜಿಸಿದ್ರು. ಅಲ್ಲದೆ ಕೊರೋನಾ ಸೋಂಕಿನ ಬಗ್ಗೆ ಜನರಿಗೆ ಮಾಹಿತಿ ನೀಡಿ ಅವರ ಅನುಮಾನಗಳನ್ನ ನಿವಾರಿಸಿತು ಮುದಾಸಿರ್‌ ಅವರ ತಂಡ.

Exit mobile version