ಕೊರೊನಾ ಜಯಿಸಿದ 200 ಗರ್ಭಿಣಿಯರು


ಕೊರೋನಾ ಮಹಾಮಾರಿ ಎಲ್ಲೆಡೆ ತಾಂಡವವಾಡುತ್ತಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹಬ್ಬುತ್ತಲೇ ಇದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ದರವರೆಗೂ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂಧರ್ಭದಲ್ಲೇ ವಾಣಿವಿಲಾಸ್ ಆಸ್ಪತ್ರೆಯವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕೊರೋನಾ ವೈರಸ್ ಗರ್ಭಿಣಿಯರಲ್ಲಿ ಭಾರಿ ಆತಂಕ ಮೂಡಿಸಿತ್ತು ಆದರೆ ಬೆಂಗಳೂರಿನ ಸರ್ಕಾರಿ ವಾಣಿವಿಲಾಸ್ ಆಸ್ಪತ್ರೆಯವರು 200 ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದರಲ್ಲಿ ಯಶಸನ್ನು ಕಂಡಿದೆ.

    ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯ ಸಿಬ್ಬಂದಿಯವರು ಪಿಪಿಯಿ ಕಿಟ್ ಧರಿಸಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆರಿಗೆಯನ್ನು ಮಾಡಿತ್ತಿದ್ದರು. ಮೇ ತಿಂಗಳಷ್ಟರಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಹೆರಿಗೆಯನ್ನು ಮಾಡುವುದರಲ್ಲಿ ಯಶಸ್ವಿಯಾಗಿ ಅದನ್ನು ಸಂಭ್ರಮಿಸಿದ್ದರು. ಆದರೆ ಇದೀಗ 200 ಹೆರಿಗೆ ಮಾಡಿಸಿದ ಸಂತೋಷದಲ್ಲಿ ಹಸುಗೂಸನ್ನು ಕೈಯಲ್ಲಿ ಹಿಡಿದು ತಮ್ಮ ಸಂತೋಷಷವನ್ನು ವ್ಯಕ್ತಪಡಿಸಿದ್ದಾರೆ.    

   ಕೊರೋನಾ ಎಲ್ಲೆಡೆ ಆವರಿಸುತ್ತಿರುವುದರಿಂದ ಗರ್ಭಿಣಿಯರು  ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚು ಜಾಗೃತರಾಗಿರಬೇಕೆಂದು ವಾಣಿವಿಲಾಸ್ ಆಸ್ಪತ್ರೆಯ ವೈದ್ಯೆ ಡಾ ಗೀತಾ ಶಿವಮೂರ್ತಿ ಹೇಳಿದ್ದಾರೆ. ಇದೇ ಸಂಧರ್ಭದಲ್ಲಿ ಮಾತಾನಾಡಿದ ಅವರು ಇಂಥಹ ಕಷ್ಟದ ಪರಿಸ್ಥಿಯಲ್ಲೂ ಕೂಡ ನಮ್ಮ ಆಸ್ಪತ್ರೆ ಸಾಧನೆ ಮಾಡಿದಕ್ಕೆ ಸಂತೋಷ ಹಾಗು ಹೆಮ್ಮೆ ಇದೆ ಎಂದು ಹೇಳಿದ್ದಾರೆ. 
Exit mobile version