ಧಾರವಾಡ SDMಯಲ್ಲಿ ಕೊರೊನಾ ಸ್ಪೋಟ

ಧಾರವಾಡ ನ 27 : ಧಾರವಾಡ ನಗರದ ಎಸ್ ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಶನಿವಾರ 281ಕ್ಕೇರಿದೆ. ನಿನ್ನೆ ಹೊಸದಾಗಿ 77 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 281 ಸೋಂಕಿತರ ಪೈಕಿ 6 ಮಂದಿ ಮಾತ್ರ ಕೋವಿಡ್-19 ಸೋಂಕಿನ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ತಿಳಿಸಿದ್ದಾರೆ.

ಇನ್ನು ಕಾಲೇಜಿನ 1,822 ಮಂದಿಯ ಸ್ಯಾಂಪಲ್ ಗಳ ವರದಿ ಬರಬೇಕಾಗಿದ್ದು, ಇಂದು ಸಾಯಂಕಾಲ ವರದಿ ಸಿಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 

ಎಸ್ ಡಿಎಂ ಮೆಡಿಕಲ್ ಕಾಲೇಜಿನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದುತ್ತಿರುವ ರೋಗಿಗಳು ಆರ್ ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುವಂತೆ ಮತ್ತು 7 ದಿನ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಆಸ್ಪತ್ರೆ ಆವರಣಕ್ಕೆ ಹೋಗಲು ಆಯ್ದ ಪೊಲೀಸರಿಗೆ ಮಾತ್ರ ಅವಕಾಶ ಕಲ್ಪಸಲಾಗಿದೆ. 

ಕರ್ನಾಟಕದಲ್ಲೂ ಲಾಕ್‌ ಡೌನ್‌ :   ವಿಶ್ವಾದ್ಯಂತ ಮತ್ತೆ  ಕೊರೋನಾ ಆರ್ಭಟ ಶುರುವಾಗಿದ್ದು, ಈ ಹಿನ್ನೆಲೆ ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ಆಗುವ ಸಾಧ್ಯತೆ ಇದೆ. ಕೊರೋನಾದ ಹೊಸ ರೂಪಾಂತರಿ ಭಾರೀ ತಲ್ಲಣ ಸೃಷ್ಟಿಸಿದ್ದು, ಸ್ವಲ್ಪ ಯಾಮಾರಿದರೂ ಮತ್ತೆ ‘ಲಾಕ್’ ಲೈಫ್ ಶುರುವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ತಿಂಗಳ ಬಳಿಕ ನಿನ್ನೆ ಒಂದೇ ದಿನ ರಾಜ್ಯದಲ್ಲಿ 402 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಡೆಡ್ಲಿ ಕೊರೋನಾದಿಂದಾಗಿ ರಾಜ್ಯದಲ್ಲಿ ನಿನ್ನೆ 6 ಮಂದಿ ಸಾವನಪ್ಪಿದ್ದು, ಅತೀ ವೇಗವಾಗಿ ಈ ಹೊಸ ವೈರಸ್​ ಹಬ್ಬುತ್ತಿರುವ ಹಿನ್ನೆಲೆ, ಡಿಸೆಂಬರ್ 15ರ ನಂತರ ಲಾಕ್ ಮಾಡಲು ತಜ್ಞರ ಸೂಚನೆ ನೀಡಿದ್ದಾರೆ.

Exit mobile version